Advertisement

ಸಾವನ್ನೂ ಗೆದ್ದು ಪದಕ ಗೆದ್ದ ವೀರ!; ಈತನ ಕಥೆಯೇ ರೋಚಕ

08:44 AM Feb 13, 2022 | Team Udayavani |

ಬೀಜಿಂಗ್‌: 2016ರಲ್ಲಿ ಸಂಭವಿಸಿದ್ದ ಭೀಕರ ಕಾರು ಅಪಘಾತದಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ ಅಮೆರಿಕದ ಕಾಲ್ಬಿ ಸ್ಟೀವನ್ಸನ್‌ ಬೀಜಿಂಗ್‌ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಫ್ರೀಸ್ಟೈಲ್‌ ಸ್ಕೀಯಿಂಗ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಅತ್ಯಮೋಘ ಸಾಧನೆ ಮಾಡಿದ್ದಾರೆ.

Advertisement

ಆರು ವರ್ಷಗಳ ಹಿಂದಿನ ಅಪಘಾತದಲ್ಲಿ ಸ್ಟೀವನ್ಸನ್‌ ತಲೆಬುರುಡೆಯು 48 ಬಿರುಕುಗಳುಂಟಾಗಿದ್ದವು ಎಂದು ವರದಿಯಾಗಿತ್ತು. ಬಿರುಕು ಬಿಟ್ಟ ಪಕ್ಕೆಲುಬುಗಳು ಹಾಗೂ ಕುತ್ತಿಗೆಯಲ್ಲಿನ ಮುರಿತದಿಂದ ಅವರು ಮತ್ತೆ ಬದುಕುಳಿದು ಸ್ಪರ್ಧಿಸುವ ಆಸೆಯನ್ನು ಕೈಬಿಡುವಂತೆ ಮಾಡಿದ್ದವು. ಆದರೆ ಸ್ಟೀವನ್ಸನ್‌ ಕೇವಲ ಆರು ತಿಂಗಳಲ್ಲಿ ಬ್ಯಾಕ್‌ಅಪ್‌ ಮತ್ತು ಸ್ಕೀಯಿಂಗ್‌ ಮಾಡುವ ಮೂಲಕ ಪವಾಡವನ್ನೇ ಸೃಷ್ಟಿಸಿದ್ದರು.

ಇದನ್ನೂ ಓದಿ:ದುಬಾರಿ ಆಟಗಾರರ ಖರೀದಿ ಕಥೆಗಳು

ಸಾವನ್ನು ಗೆದ್ದು ಬಂದ ಆರು ವರ್ಷಗಳ ಬಳಿಕ ಬಿಗ್‌ ಏರ್‌ ಪುರುಷರ ಫ್ರೀಸ್ಟೈಲ್‌ ಸ್ಕೀಯಿಂಗ್‌ನಲ್ಲಿ ಮೊದಲ ಬಾರಿ ಒಲಿಂಪಿಕ್‌ನಲ್ಲಿ ಕಾಣಿಸಿಕೊಂಡ ಅವರು ಬೀಜಿಂಗ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ನಾರ್ವೆಯ ಬಿರ್ಕ್‌ ರುಡ್‌ ಮೊದಲ ಸ್ಥಾನ ಪಡೆದರು

Advertisement

Udayavani is now on Telegram. Click here to join our channel and stay updated with the latest news.

Next