Advertisement

ಶ್ರೀಲಂಕಾದಲ್ಲಿ ಸೋಂಕಿತರ ಪೈಕಿ ನಾವಿಕರೇ ಹೆಚ್ಚು

02:35 PM May 06, 2020 | sudhir |

ಕೊಲಂಬೊ: ಶ್ರೀಲಂಕಾದಲ್ಲಿ ಈ ವರೆಗೆ ಒಟ್ಟು 752 ಜನರಿಗೆ ಕೋವಿಡ್ ವೈರಸ್‌ ಸೋಂಕು ತಗುಲಿದೆ. ಆಘಾತಕಾರಿ ಅಂಶ ಎಂದರೆ ನೌಕಾಪಡೆಯ ಸಿಬಂದಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಒಟ್ಟು 752 ಪ್ರಕರಣಗಳ ಪೈಕಿ 327 ಮಂದಿ ನೌಕಾಪಡೆ ಸಿಬಂದಿಯಾಗಿದ್ದಾರೆ. ಸೋಮವಾರ 33 ಹೊಸ ಕೋವಿಡ್ ಪ್ರಕರಣ ದೃಢಪಟ್ಟಿದ್ದು, ಅವರಲ್ಲಿ 31 ಮಂದಿ ವೆಲಿಸರಾ ಶಿಬಿರದಲ್ಲಿರುವ ಲಂಕಾದ ನಾವಿಕರಾಗಿದ್ದಾರೆ.

Advertisement

ಉಳಿದ ಇಬ್ಬರು ಸೋಂಕಿತನೊಂದಿಗೆ ಸಂಪರ್ಕದಲ್ಲಿದ್ದವರಾಗಿದ್ದಾರೆ. ರಾಜಧಾನಿ ಕೊಲಂಬೊ ಬಳಿ ಇರುವ ವೆಲಿಸರಾ ಶಿಬಿರದಲ್ಲಿರುವ ಅಧಿಕಾರಿಗಳು ಕೋವಿಡ್ ಸೋಂಕಿತ ಮಾದಕ ವ್ಯಸನಿಗಳ ಜತೆ ಸಂಪರ್ಕ ಹೊಂದಿದ್ದರು ಎಂಬ ಶಂಕೆ ಇದೆ.

ಬಳಿಕ ಅವರು ಅಲ್ಲಿಂದ ರಜೆಯಲ್ಲಿ ಮನೆಗೆ ತೆರಳಿದ್ದರು. ಇದು ಸೋಂಕು  ಹರಡಲು ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ. 752 ಜನರಿಗೆ  ಸೋಂಕು ತಗುಲಿದ್ದು, ಅವರಲ್ಲಿ 194 ಜನ ಗುಣಮುಖರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next