Advertisement

ಬದಲಾಗಲಿದೆ ಕೋಕ್‌, ಪೆಪ್ಸಿ ಸ್ವಾದ!

10:20 AM Oct 14, 2017 | Karthik A |

ಹೊಸದಿಲ್ಲಿ: ಯುವಜನತೆ ಅತಿ ಹೆಚ್ಚು ಸೇವಿಸುವ ಕೋಕಕೋಲಾ, ಪೆಪ್ಸಿಗಳ ಸ್ವಾದ ಇನ್ನು ಬದಲಾಗಲಿದೆ. ಭಾರತ ಸಹಿತ ವಿಶ್ವಾದ್ಯಂತ ಈ ಸಾಫ್ಟ್ ಡ್ರಿಂಕ್ಸ್‌ ಕಂಪೆನಿಗಳು ಪ್ರಸಿದ್ಧವಾಗಿದ್ದು, ಅತಿ ಹೆಚ್ಚು ಮಾರಾಟಗೊಳ್ಳುತ್ತಿವೆ. ಈಗ ಭಾರತದಲ್ಲಿ ಎರಡೂ ಕಂಪೆನಿಗಳು ಸ್ವಾದದಲ್ಲಿ ಬದಲಾವಣೆಗೆ ಉದ್ದೇಶಿಸಿವೆ. ಕೋಕಕೋಲಾ ತನ್ನ ಮಾಝಾ ಮಾದರಿ ಸಾಫ್ಟ್ಡ್ರಿಂಕ್ಸ್‌ ನಲ್ಲಿ ಶೇ. 30ರಿಂದ ಶೇ. 50ರಷ್ಟು ಕಡಿಮೆ ಸಕ್ಕರೆ ಅಂಶವನ್ನು ಬಳಸಿ, ಇದರ ಬದಲಿಗೆ ಸ್ಟೀವಿಯಾ ಸಸಿಯ ಸಿಹಿ ಅಂಶವನ್ನು ಬಳಸಲು ಉದ್ದೇಶಿಸಿದೆ. ಪೆಪ್ಸಿ ಕೂಡ ತನ್ನ 7ಅಪ್‌, ಫಾಂಟಾ ಮಾದರಿಯಲ್ಲಿ ಕ್ಯಾಲರಿ ಕಡಿಮೆಗೊಳಿಸಲು ಉದ್ದೇಶಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next