Advertisement

ಧಾರ್ಮಿಕ ಸಂಕೇತ ಧರಿಸಿದ್ರೆ ಕೆಲ್ಸದಿಂದ ಕೊಕ್‌

06:46 AM Mar 15, 2017 | Team Udayavani |

ಲಕ್ಸೆಂಬರ್ಗ್‌: ಕಂಪೆನಿಗಳಲ್ಲಿ  ಶಿರವಸ್ತ್ರ, ರಾಜಕೀಯ, ಧಾರ್ಮಿಕ ಸಂಕೇತ ಧರಿಸಿಕೊಂಡು ಕಚೇರಿಗೆ ಕರ್ತವ್ಯಕ್ಕೆ ಹಾಜರಾದರೆ ಅಂಥವರನ್ನು ತೆಗೆದು ಹಾಕಲು ಅವಕಾಶ ಇದೆ. ಹೀಗೆಂದು ಲಕ್ಸೆಂಬರ್ಗ್‌ನಲ್ಲಿರುವ ಯುರೋಪಿಯನ್‌ ಕೋರ್ಟ್‌ ಆಫ್ ಜಸ್ಟಿಸ್‌ ಆದೇಶ ನೀಡಿದೆ.

Advertisement

 2003ರಲ್ಲಿ ಸಮೀರಾ ಎಂಬುವರು ಬೆಲ್ಜಿಯಂನ ಜಿ4ಎಸ್‌ ಕಂಪೆನಿಗೆ ಸ್ವಾಗತಕಾರಿಣಿಯಾಗಿ ನೇಮಕಗೊಂಡಿದ್ದರು. ಆಗ ಧಾರ್ಮಿಕ ಸಂಕೇತಗಳನ್ನು ಧರಿಸಿ ಕಚೇರಿಗೆ ಬರುವಂತಿಲ್ಲ ಎಂದು ಕಂಪೆನಿ ಅವರಿಗೆ ತಿಳಿಸಿತ್ತು. 2006ರಲ್ಲಿ ಶಿರವಸ್ತ್ರ ಧರಿಸಲು ಸಮೀರಾ ಮಾಡಿದ ಮನವಿಯನ್ನು ಕಂಪೆನಿ ತಿರಸ್ಕರಿಸಿತ್ತು. ಪ್ರಕರಣ ಕೋರ್ಟು ಮೆಟ್ಟಿಲೇರಿದಾಗ “ಎಲ್ಲ ನೌಕರರನ್ನು ಸಮಾನವಾಗಿ ಕಾಣುವ ದೃಷ್ಟಿಯಿಂದ ಕಂಪೆನಿ ಈ ನಿಯಮ ರೂಪಿಸಿದೆ. ಇದನ್ನು ಅಳವಡಿಸಿಕೊಳ್ಳಬೇಕು’ ಎಂದು ತೀರ್ಪು ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next