Advertisement

Liquor Policy Case; ಕೇಜ್ರಿಗಿಲ್ಲ ಮಧ್ಯಾಂತರ ರಿಲೀಫ್: ಜಾಮೀನಿಗೆ ದಿಲ್ಲಿ ಕೋರ್ಟ್‌ ನಕಾರ

12:08 AM Jun 06, 2024 | Team Udayavani |

ಹೊಸದಿಲ್ಲಿ: ಅನಾರೋಗ್ಯದ ಕಾರಣ ಹೇಳಿ ಮಧ್ಯಾಂತರ ಜಾಮೀನಿಗೆ ಅರ್ಜಿ ಹಾಕಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್‌ ಅವರ ಅರ್ಜಿಯನ್ನು ದಿಲ್ಲಿ ಕೋರ್ಟ್‌ ವಜಾ ಮಾಡಿದೆ.

Advertisement

ಬುಧವಾರ ಕೇಜ್ರಿವಾಲ್‌ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದು, ಅವರ ನ್ಯಾಯಾಂಗ ಬಂಧನವನ್ನು ಜೂ.19ರ ವರೆಗೆ ವಿಸ್ತರಿಸಿ ಕೋರ್ಟ್‌ ಆದೇಶ ನೀಡಿದೆ. ಜತೆಗೆ ಕೇಜ್ರಿವಾಲ್‌ ವೈದ್ಯಕೀಯ ತಪಾಸಣೆಯ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ.

ಕೇಜ್ರಿವಾಲ್‌ ಸಲ್ಲಿಸಿರುವ ಡೀಫಾಲ್ಟ್ ಜಾಮೀನಿನ ಅರ್ಜಿ ವಿಚಾರಣೆಯನ್ನು ಜೂ.7ರಂದು ನಡೆಸುವುದಾಗಿ ಕೋರ್ಟ್‌ ಹೇಳಿದೆ. ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಪ್ರಮುಖ ಆರೋಪಿಯೆಂದು ಪರಿಗಣಿಸಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬಂಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next