ಚಿನ್ನ, ಬೆಳ್ಳಿ, ತಾಮ್ರ, ಕಂಚು… ಹೀಗೆ ಬಗೆಬಗೆಯ ನಾಣ್ಯಗಳ ಸರವನ್ನು ಪುರುಷರು, ಮಹಿಳೆಯರು ತೊಡುತ್ತಾ ಬಂದಿದ್ದಾರೆ. ಮದುವೆಗಳಲ್ಲಿ ವಧು ಚಿನ್ನದ ಕಾಸಿನ ಸರ ತೊಟ್ಟರೆ ಎಲ್ಲರ ಬಾಯಲ್ಲಿ ಅದೇ ಮಾತು. ಕೇವಲ ಭಾರತದಲ್ಲಷ್ಟೇ ಅಲ್ಲ, ಬೇರೆ ದೇಶಗಳಲ್ಲೂ ಮಹಿಳೆಯರು ಡಾಲರ್ ಚೈನ್ ಧರಿಸಿರುವುದನ್ನು ನೀವು ನೋಡಿರಬಹುದು. ಇದೇ ಕಾರಣಕ್ಕೆ ಲಕ್ಷ್ಮಿ ಪೆಂಡೆಂಟ್ ಅನ್ನೂ ಡಾಲರ್ ಎಂದು ಕರೆಯಲಾಗುತ್ತಿತ್ತು. ಈ ಶೈಲಿ ಮತ್ತೆ ಫ್ಯಾಷನ್ ಲೋಕವನ್ನು ಪ್ರವೇಶಿಸಿದೆ.
Advertisement
ನಿಜಕ್ಕೂ ಇದು ಕಾಸಿನ ಸರ ಟ್ರೆಂಡ್‌ನಲ್ಲಿರುವ ಈ ಆಭರಣಗಳು ಚಿನ್ನ, ಬೆಳ್ಳಿಯ ಡಾಲರ್‌ಗಳಲ್ಲ. ಬದಲಿಗೆ ಹಿಂದೆ ಚಾಲ್ತಿಯಲ್ಲಿದ್ದ 5, 10, 25, 50 ಪೈಸೆಯ ನಾಣ್ಯಗಳು! ಈ ನಾಣ್ಯಗಳಿಗೆ ವಿಭಿನ್ನ ಆಕಾರಗಳಿದ್ದವು. ಆದ್ದರಿಂದಲೇ ಇವು ಮಾಲೆಯಲ್ಲಿ ವಿಶಿಷ್ಟವಾಗಿ ಕಾಣಿಸುತ್ತವೆ. ಹಿಂದೆ ಬಳಕೆಯಲ್ಲಿದ್ದ ನಾಣ್ಯಗಳು ಇವಾಗ ಎಲ್ಲಿ ಸಿಗುತ್ತವೋ ಏನೋ ಎಂದು ಚಿಂತೆ ಮಾಡದಿರಿ. ಮಾರುಕಟ್ಟೆಯಲ್ಲಿ ಲಭ್ಯ ಇರುವ ಸರಗಳಲ್ಲಿ ಬಹುತೇಕ ಡಾಲರ್‌ಗಳು ಇಮಿಟೇಷನ್ (ಅನುಕರಣೆ ಮಾಡಿದ) ನಾಣ್ಯಗಳಾಗಿರುತ್ತವೆ. ಅಲ್ಯುಮಿನಿಯಂ, ಹಿತ್ತಾಳೆ ಮುಂತಾದ ಲೋಹದಿಂದ ತಯಾರಿಸಲಾದ ನಾಣ್ಯಗಳಾಗಿರುತ್ತವೆ. ಈ ಒಡವೆಗಳನ್ನು ಪ್ಲಾಸ್ಟಿಕ್, ಗಾಜು, ಹಾಗೂ ಮರದ ತುಂಡಿನಿಂದಲೂ ತಯಾರಿಸಲಾಗುತ್ತಿದೆ! ಅಮ್ಮ, ಅಜ್ಜಿ ತೊಡುತ್ತಿದ್ದ ಕಾಸಿನ ಸರ ಮೇಕ್ ಓವರ್ ಪಡೆದಿದೆ.
ಇವುಗಳು ಜಂಕ್ ಜ್ಯುವೆಲರಿಗಳ ಸಾಲಿಗೆ ಸೇರುತ್ತವೆ. ಆದ್ದರಿಂದ ಇವುಗಳನ್ನು ಲಂಗ, ಪ್ಯಾಂಟ್, ಸೀರೆ, ಶಾರ್ಟ್ಸ್, ಗೌನ್, ಚೂಡಿದಾರ ಯಾವುದರ ಜೊತೆಗೂ ತೊಡಬಹುದಾಗಿದೆ! ಇವುಗಳನ್ನು ಪೂಜೆ, ಮದುವೆ, ಹಬ್ಬ, ಆಫೀಸ್, ಕಾಲೇಜು, ಶಾಪಿಂಗ್, ಹಾಲಿಡೇ… ಎಲ್ಲಿಗೆ ಬೇಕಾದರೂ ಧರಿಸಿಕೊಂಡು ಹೋಗಬಹುದು. ಅಷ್ಟು ವರ್ಸಟೈಲ್ ಈ ಹೊಸ ಕಾಸಿನ ಸರ! ಗೆಜ್ಜೆಯಂಥ ಹ್ಯಾಂಗಿಂಗ್ಸ್ ಮತ್ತು ಟ್ಯಾಸೆಲ್ಸ… ಇರುವ ಕಾಸಿನ ಸರ ಸದ್ದು ಮಾಡುತ್ತೆ. ಬಣ್ಣ ಬಣ್ಣದ ದಾರಗಳಿಂದ ಈ ನಾಣ್ಯಗಳನ್ನು ಪೋಣಿಸಿ ಉಟ್ಟ ಉಡುಪಿಗೆ ತಕ್ಕಂತೆ ಮ್ಯಾಚ್ ಮಾಡಿಕೊಳ್ಳುವ ಆಯ್ಕೆಯೂ ಇದೆ. ನಾಣ್ಯಗಳ ಸುತ್ತ ಮಣಿ, ಮುತ್ತು, ಕನ್ನಡಿ ಮತ್ತು ಕಲ್ಲುಗಳನ್ನು ಅಂಟಿಸಿ ಪುಷ್ಪ, ಸೂರ್ಯ, ಚಂದ್ರ, ನಕ್ಷತ್ರದಂಥ ರೂಪ ನೀಡಬಹುದು. ವಿವಿಧ ಆಕಾರದಲ್ಲಿ…
ನಾಣ್ಯಗಳನ್ನು ವೃತ್ತಾಕಾರಕ್ಕೆ ಸೀಮಿತವಾಗಿಸದೆ ಅವುಗಳನ್ನು ಚೌಕ, ಪಂಚಕೋನಾಕೃತಿ, ಷಟ್ಕೊನ, ಅಷ್ಟಭುಜ, ಹಾರ್ಟ್
ಶೇಪ್ (ಹೃದಯಾಕಾರ), ಮನೆಯ ಚಿತ್ರ, ಝೊಡಿಯಾಕ್ ಸೈನ್ (ರಾಶಿ ಚಿಹ್ನೆ), ಹಾವು, ಮಿಂಚಿನ ಆಕೃತಿ, ಬಲ್ಬ…, ಬಲೂನ್ (ಪುಗ್ಗೆ), ಬೀಗ ಅಥವಾ ಬೀಗದ ಕೈ, ಪಾದರಕ್ಷೆ, ಮುಂತಾದ ಆಕಾರಗಳಲ್ಲೂ ತಯಾರಿಸಲಾಗುತ್ತಿದೆ. ಇಂಥ ಭಿನ್ನ ಭಿನ್ನ ಆಕೃತಿಯ ಕಾಸಿನ ಸರಗಳು ಅಂಗಡಿ ಮಳಿಗೆ ಮತ್ತು ಆನ್ ಲೈನ್‌ನಲ್ಲಿ ಸಿಗುತ್ತವೆ. ಒಂದು ವೇಳೆ ನಿಮ್ಮ ಬಳಿ ಚಿನ್ನ ಅಥವಾ ಬೆಳ್ಳಿಯ ಕಾಸಿನ ಸರ
ಈಗಾಗಲೇ ಇದ್ದರೆ, ಅದಕ್ಕೆ ಬೇಕಾದ ಹೊಸ ವಿನ್ಯಾಸ, ಆಕೃತಿ ನೀಡಿ ಹೊಸ ಲುಕ್ ಪಡೆಯಬಹುದು. ಆಗ ಕಾಸಿನ ಸರ ತೊಡುವುದು ಬೋರಿಂಗ್ ಆಗಿರಲಾರದು.
Related Articles
Advertisement
ಅದಿತಿಮಾನಸ ಟಿ.ಎಸ್.