Advertisement

ಬಿಜೆಪಿ ಜಿಲ್ಲಾಧ್ಯಕ್ಷರ ಕಾರಿನ ಮೇಲೆ ಪೆಟ್ರೋಲ್‌ ಬಾಂಬ್‌ ದಾಳಿ

03:25 PM Mar 21, 2018 | udayavani editorial |

ಕೊಯಮುತ್ತೂರು : ತಮಿಳು ನಾಡಿನ ಕೊಯಮುತ್ತೂರಿನಲ್ಲಿ  ಬಿಜೆಪಿ ನಾಯಕರೋರ್ವರ ಕಾರು ಪೆಟ್ರೋಲ್‌ ಬಾಂಬ್‌ ದಾಳಿಗೆ ಗುರಿಯಾದ ಘಟನೆ ವರದಿಯಾಗಿದೆ.

Advertisement

ಈ ಘಟನೆಯ ದೃಶ್ಯದಲ್ಲಿ ಸಿಸಿಟಿವಿಯಲ್ಲಿ ದಾಖಲಾಗಿದ್ದು ಯಾವುದೇ ಸಾವು ನೋವು ಸಂಭವಿಸಿರುವುದು ವರದಿಯಾಲಿಲ್ಲ. 

ಎಎನ್‌ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ವಿಡಿಯೋ ಚಿತ್ರಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರ ಕಾರಿನ ಮೇಲೆ ವ್ಯಕ್ತಿಯೊಬ್ಬ ಪೆಟ್ರೋಲ್‌ ಬಾಂಬ್‌ ಎಸೆಯುತ್ತಿರುವುದು ಕಂಡು ಬರುತ್ತದೆ. ಆದರೆ ಆತನ ಚಿತ್ರ ಅಸ್ಪಷ್ಟವಾಗಿದೆ. 

ಪೊಲೀಸರು ಸ್ಥಳಕ್ಕೆ ಧಾವಿಸಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next