Advertisement

“ಕ್ರೀಡಾಕೂಟ ಆಯೋಜನೆಯಿಂದ ಸಮಾಜದಲ್ಲಿ ಒಗ್ಗಟ್ಟು’

11:01 PM Sep 23, 2019 | Team Udayavani |

ಪುತ್ತೂರು : ವಿವಿಧ ವರ್ಗಗಳ ಜನರನ್ನು ಒಗ್ಗೂಡಿಸುವ ವಿಶೇಷ ಶಕ್ತಿ ಕ್ರೀಡೆಗಿದೆ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ತಯಾರು ಮಾಡುವ ಮೂಲಕ ಫಿಲೋಮಿನಾ ಸಂಸ್ಥೆಯ ಕ್ರೀಡಾಂಗಣ ಐತಿಹಾಸಿಕ ದಾಖಲೆ ನಿರ್ಮಿಸಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

Advertisement

ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗ ಮತ್ತು ಸಂತ ಫಿಲೋಮಿನಾ ಕಾಲೇಜು ಆಶ್ರಯದಲ್ಲಿ ಸಂತ ಫಿಲೋಮಿನಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಬಿ. ಸದಾನಂದ ಮತ್ತು ವಾಮನ ಸ್ಮರಣಾರ್ಥ ಮಂಗಳೂರು ವಿವಿ ಅಂತರ್‌ ಕಾಲೇಜು ಮಂಗಳೂರು ವಲಯ ಮತ್ತು ಅಂತರ್‌ ವಲಯ ಪುರುಷರ ಫ‌ುಟ್‌ಬಾಲ್‌ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರವು ಜನಸಂಖ್ಯೆಯಲ್ಲಿ ಜಗತ್ತಿ ನಲ್ಲಿಯೇ ಎರಡನೆಯ ಸ್ಥಾನದಲ್ಲಿದ್ದರೂ ಕ್ರೀಡೆಯಲ್ಲಿ ನಮ್ಮ ಸ್ಥಾನ ಯಾವುದು ಎನ್ನುವುದು ಗುರುತಿಸಲೂ ಆಗುತ್ತಿಲ್ಲ. ಕ್ರೀಡೆಯಲ್ಲಿ ಸಾಧನೆ ಮಾಡಿದ ದೇಶ ಎಲ್ಲರಿಗೂ ತಿಳಿಯುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ದ.ಕ. ಜಿಲ್ಲಾ ಫ‌ುಟ್‌ಬಾಲ್‌ ಅಸೋಸಿಯೇಶನ್‌ ಅಧ್ಯಕ್ಷ ಡಿ.ಎಂ. ಅಸ್ಲಾಮ್‌ ಮಾತನಾಡಿ, ಕ್ರೀಡಾ ಕ್ಷೇತ್ರದ ಯಶಸ್ಸಿಗೆ ಕ್ರೀಡಾ ಸ್ಫೂರ್ತಿಯೇ ತಳಹದಿ. ಆಹಾರವು ವಿಷಭರಿತವಾಗಿರುವ ಇತ್ತೀಚಿಗಿನ ದಿನಗಳಲ್ಲಿ ಆರೋಗ್ಯವನ್ನು ಸುಸ್ಥಿಯಲ್ಲಿಟ್ಟುಕೊಳ್ಳಲು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದು ಅಗತ್ಯ ಎಂದರು.

ಶಿಸ್ತು, ಪರಿಶ್ರಮವಿರಲಿ
ಗೌರವ ಅತಿಥಿಯಾಗಿದ್ದ ಕಾಲೇಜಿನ ಕ್ಯಾಂಪಸ್‌ ನಿರ್ದೇಶಕ ವಂ| ಡಾ| ಆ್ಯಂಟನಿ ಪ್ರಕಾಶ್‌ ಮೊಂತೆರೊ ಮಾತನಾಡಿ, ಕ್ರೀಡೆ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ. ಸತತ ಪರಿಶ್ರಮದಿಂದ ಅಭ್ಯಾಸ ದಲ್ಲಿ ತೊಡಗಿಕೊಂಡಾಗ ಕ್ರೀಡಾ ಸಾಧನೆ ಸಾಧ್ಯ ಎಂದರು. ಯುವ ಸಬಲೀಕರಣ ಹಾಗೂ ಕ್ರೀಡಾ ಧಿಕಾರಿ ಎಂ. ಮಾಮಚ್ಚನ್‌ ಮಾತನಾಡಿ, ಪುತ್ತೂರಿನ ಶೈಕ್ಷಣಿಕ ಕ್ರಾಂತಿಯಲ್ಲಿ ಮೊ| ಆ್ಯಂಟನಿ ಪತ್ರಾವೊ ಅವರ ಕೊಡುಗೆ ಅಪಾರ. ಈ ಸಂಸ್ಥೆ ಶಿಕ್ಷಣದೊಂದಿಗೆ ಕ್ರೀಡೆಗೂ ಪ್ರೋತ್ಸಾಹ ನೀಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕ ವಂ| ಆಲ್ಫೆ†ಡ್‌ ಜೆ. ಪಿಂಟೊ ಮಾತನಾಡಿ, ಕ್ರೀಡೆಗಳು ಶಾಂತಿ ಸಮನ್ವಯಕ್ಕೆ ಸಹಕಾರಿ. ಕ್ರೀಡಾಕೂಟದ ಸಂಘಟನೆಗೆ ಎಲ್ಲರ ಸಹಕಾರ ಅಗತ್ಯ ಎಂದರು. ವಾಣಿಜ್ಯ ಶಾಸ್ತ್ರ ವಿಭಾಗದ ಡೀನ್‌ ಪ್ರೊ| ಮ್ಯಾಕ್ಸಿಂ ಕಾರ್ಲ್ ಸ್ವಾಗತಿಸಿ, ಕಾಲೇಜಿನ ದೈ.ಶಿ. ನಿರ್ದೇಶಕ ಪ್ರಕಾಶ್‌ ಡಿ’ಸೋಜಾ ವಂದಿಸಿದರು. ದೈ.ಶಿ. ನಿರ್ದೇಶಕ ರಾಜೇಶ್‌ ಮೂಲ್ಯ ಸಹಕರಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರಶಾಂತ್‌ ರೈ ನಿರೂಪಿಸಿದರು.

Advertisement

ಸಾಧಕರಿಗೆ ಸಮ್ಮಾನ
ಗೌರವ ಅತಿಥಿಗಳಾಗಿದ್ದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಮಾಜಿ ವೇಟ್‌ ಲಿಫ್ಟರ್‌ ಕೃಷ್ಣಪ್ಪ ಗೌಡ ಮತ್ತು ಹಿರಿಯ ವಿದ್ಯಾರ್ಥಿ ಹಾಗೂ ಮಾಜಿ ಕ್ರೀಡಾಪಟು ಸಜ್ಜನ್‌ ಕುಮಾರ್‌ ಕೆ. ಅವರನ್ನು ವಿಶೇಷ ಕ್ರೀಡಾ ಸಾಧನೆ ಗಾಗಿ ಸಮ್ಮಾನಿಸಲಾಯಿತು. ಸಂತ ಫಿಲೋಮಿನಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ವಂ| ವಿಜಯ್‌ ಲೋಬೋ ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next