Advertisement

ಕಾಫಿ ಡೇ ಷೇರು ಶೇ.20 ಕುಸಿತ

01:05 AM Jul 31, 2019 | Team Udayavani |
ನವದೆಹಲಿ: ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿರುವ ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ ನಾಪತ್ತೆ ವಿಚಾರ ಬಿಎಸ್‌ಇ, ಎನ್‌ಎಸ್‌ಇಯಲ್ಲಿ ಕಂಪನಿಯ ಷೇರುಗಳ ಮೇಲೂ ಪ್ರಭಾವ ಬೀರಿದೆ. ಮಂಗಳವಾರ ವಹಿವಾಟು ಆರಂಭವಾಗುತ್ತಲೇ ಷೇರು ಮಾರುಕಟ್ಟೆ ಅಧಿಕಾರಿಗಳಿಗೆ ಕಂಪನಿಯು ಸಿದ್ಧಾರ್ಥ್ ನಾಪತ್ತೆ ಕುರಿತು ಲಿಖೀತವಾಗಿ ಹೇಳಿಕೆ ಸಲ್ಲಿಸಿದೆ. ಇದಾದ ಬಳಿಕ ಕಂಪನಿ ಷೇರುಗಳು ಶೇ.20ರಷ್ಟು ಕುಸಿತ ಕಂಡವು. ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಕೆಫೆ ಕಾಫಿ ಡೇ ಎಂಟರ್‌ಪ್ರೈಸಸ್‌ ಷೇರುಗಳು ಶೇ.20ರಷ್ಟು ಕುಸಿತ ಕಂಡವು. ಹೀಗಾಗಿ, 52 ವಾರಗಳಲ್ಲಿಯೇ ಕಾಫಿ ಡೇ ಷೇರು ಮೌಲ್ಯ ಕನಿಷ್ಠ ಎಂದರೆ 154.05 ರೂ.ಗೆ ಇಳಿಕೆಯಾಯಿತು. ‘ಸೋಮವಾರದಿಂದ ಕೆಫೆ ಕಾಫಿ ಡೇ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿ.ಜಿ.ಸಿದ್ಧಾರ್ಥ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರನ್ನು ಪತ್ತೆ ಮಾಡಲು ಸಂಬಂಧಿತ ಇಲಾಖೆಗಳ ನೆರವು ಪಡೆಯುತ್ತಿದ್ದೇವೆ’ ಎಂದು ಕಂಪನಿ ಸ್ಟಾಕ್‌ ಎಕ್ಸ್‌ಚೇಂಜ್‌ಗೆ ಸಲ್ಲಿಸಿದ ಹೇಳಿಕೆಯಲ್ಲಿ ತಿಳಿಸಿದೆ.
Advertisement

Udayavani is now on Telegram. Click here to join our channel and stay updated with the latest news.

Next