Advertisement
ಬರೋಬ್ಬರಿ 78 ದಿನಗಳ ಸುದೀರ್ಘ ಅವಧಿಯ ನೀತಿಸಂಹಿತೆ ಜಾರಿಯಲ್ಲಿತ್ತು. ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿ.ಪಂ. ಸದಸ್ಯರು ಮೊದಲಾದ ಜನಪ್ರತಿನಿಧಿಗಳು ಕಳೆದ ಮಾರ್ಚ್‌ನಲ್ಲೇ ನೆರವೇರಿಸಬೇಕಿದ್ದ ಅಭಿವೃದ್ಧಿ ಕಾರ್ಯಗಳ ಶಿಲಾನ್ಯಾಸ-ಉದ್ಘಾಟನಾ ಸಮಾರಂಭಗಳು ನಿಂತು ಹೋಗಿದ್ದವು.
ಈಗ ಚುನಾವಣ ನೀತಿಸಂಹಿತೆ ತೆರವುಗೊಂಡಿದ್ದು, ಇನ್ನು ಜನಪ್ರತಿನಿಧಿಗಳು ಸಭೆ-ಸಮಾರಂಭಗಳಲ್ಲಿ ಬ್ಯುಸಿಯಾಗಲಿದ್ದಾರೆ. ಮೇ 27ಕ್ಕೆ ನೀತಿ ಸಂಹಿತೆ ತೆರವುಗೊಂಡ ಬೆನ್ನಲ್ಲೇ ಮಂಗಳವಾರ ಪುತ್ತೂರು ಶಾಸಕ ಸಂಜೀವ ಮಠಂದೂರು ಹಾಗೂ ಸುಳ್ಯ ಶಾಸಕ ಎಸ್. ಅಂಗಾರ ಅವರು ಕಡಬ ಸಿಎ ಬ್ಯಾಂಕ್‌ನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಗ್ರಾ.ಪಂ., ತಾ.ಪಂ., ಜಿ.ಪಂ. ಸಾಮಾನ್ಯ ಸಭೆಗಳು, ಕೆಡಿಪಿ ಸಭೆಗಳು ಸಹಿತ ಇತರ ಸಭೆಗಳನ್ನು ನಡೆಸುವುದಕ್ಕೆ ಅವಕಾಶವಿರಲಿಲ್ಲ. ಮುಂದಿನ ದಿನಗಳಲ್ಲಿ ಅಂತಹ ಸಭೆಗಳನ್ನು ನಡೆಸುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಇಂತಹ ಸಭೆಗಳಲ್ಲಿ ಕೆಲವೊಂದು ಗಂಭೀರ ವಿಚಾರಗಳು ಚರ್ಚೆಯಾಗಿ ತತ್‌ಕ್ಷಣದ ಪರಿಹಾರವೂ ಸಿಗುತ್ತದೆ. ಹೀಗಾಗಿ ನನೆಗುದಿಗೆ ಬಿದ್ದಿದ್ದ ಅಭಿವೃದ್ಧಿ ಕಾರ್ಯಗಳು ಚುರುಕು ಪಡೆಯುವ ಸಾಧ್ಯತೆಯೂ ಇದೆ.
Related Articles
Advertisement
ಎಲ್ಲವೂ ಪುನರಾರಂಭಲೋಕಸಭಾ ಚುನಾವಣೆಯ ನೀತಿಸಂಹಿತೆಯಿಂದಾಗಿ ಸ್ಥಗಿತಗೊಂಡಿದ್ದ ಎಲ್ಲ ಸೇವೆಗಳು, ಅಭಿವೃದ್ಧಿ ಕಾರ್ಯಗಳು ಮುಂದಿನ ದಿನಗಳಲ್ಲಿ ಹಿಂದಿನಂತೆ ನಡೆಯಲಿದೆ. ತಾಲೂಕು ಕಚೇರಿಯಲ್ಲೂ ಎಲ್ಲ ಸೇವೆಗಳು ಜನರಿಗೆ ಲಭ್ಯವಾಗಲಿವೆ. ಸಭೆಗಳು, ಕಾರ್ಯಕ್ರಮಗಳು ಯಾವುದೇ ಅಡ್ಡಿಯಿಲ್ಲದೆ ಸಾಗಲಿವೆ. ಎಚ್.ಕೆ. ಕೃಷ್ಣಮೂರ್ತಿ ಸಹಾಯಕ ಕಮಿಷನರ್, ಪುತ್ತೂರು