ಮಾಲೂರು: ಪುರಸಭಾ ಚುನಾವಣೆ ಕಣದಲ್ಲಿರುವ 79 ಅಭ್ಯರ್ಥಿಗಳು ಕಡ್ಡಾಯವಾಗಿ ನೀತಿ ಸಂಹಿತೆ ಪಾಲಿಸುವ ಮೂಲಕ ಸುಗಮ ಮತದಾನಕ್ಕೆ ಸಹಕಾರ ನೀಡುವಂತೆ ತಹಶೀಲ್ದಾರ್ ಎಂ.ನಾಗರಾಜು ತಿಳಿಸಿದರು.
ಪಟ್ಟಣದ ಎಲ್ಲಾ 27 ವಾರ್ಡ್‌ಗಳ ಅಭ್ಯರ್ಥಿಗಳಿಗೆ ನೀತಿ ನಿಯಮಗಳ ಬಗ್ಗೆ ಮಾಹಿತಿ ನೀಡಿ, ವಿಧಾನಸಭಾ ಚುನಾ ವಣೆಯಲ್ಲಿ ಮತದಾರರ ಪಟ್ಟಿಯನ್ನು ವಾರ್ಡ್‌ವಾರು ವಿಂಗಡಿಸಲಾಗಿದ್ದು, ಗೊಂದಲಗಳಿಗೆ ಅವಕಾಶ ನೀಡದೆ ಶಾಂತಿಯುತವಾಗಿ ಚುನಾವಣೆ ನಡೆಸು ವಂತೆ ಅಧಿಕಾರಿಗಳಿಗೆ ಸೂಚಿಸಿದರು.
29ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯ ಲಿದ್ದು, ಮತ ಎಣಿಕೆಯು ಮೇ 31ರಂದು ನಡೆಯಲಿದೆ. ಚುನಾವಣೆ ನೀತಿ ಸಂಹಿತೆ ಮೇ 31ರವರೆಗೂ ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಅಭ್ಯರ್ಥಿಗಳು ಸಹಕಾರ ನೀಡುವಂತೆ ಮನವಿ ನೀಡಿದ ಅವರು, ಪುರಸಭಾ ಚುನಾವಣೆ ಮತದಾನಕ್ಕಾಗಿ ಇವಿಎಂ ಯಂತ್ರಗಳ ಬಳಕೆ ಮಾಡಲಾಗುತ್ತಿದೆ. ವಿವಿ ಪ್ಯಾಟ್ ಇರುವುದಿಲ್ಲ. ಚುನಾವಣೆ ನಿಯಮ ದಂತೆ ಪ್ರತಿ ಅಭ್ಯರ್ಥಿಯು ಚುನಾವಣಾ ವೆಚ್ಚವಾಗಿ 1.5 ಲಕ್ಷ ರೂ. ಮಾತ್ರ ಬಳಕೆ ಮಾಡಲು ಅವಕಾಶವಿದೆ ಎಂದರು.
ನೀತಿ ಸಂಹಿತೆ ಅಧಿಕಾರಿಗಳನ್ನಾಗಿ ವಾರ್ಡ್ 1ರಿಂದ 10ವರೆಗೂ ಪೆದ್ದನ್ನ, ದೂ.ಸಂ. 9972717346 , ವಾರ್ಡ್ 11ರಿಂದ 20ವರೆಗೂ ತಾಪಂ ಸಹಾಯಕ ನಿರ್ದೇಶಕ ಕೃಷ್ಣಪ್ಪ, ದೂ. 9663333250, ವಾರ್ಡ್ 21ರಿಂದ 27ವರೆಗೂ ಅಶ್ವತ್ಥ್ನಾರಾಯಣ್ ಮೊ.ಸಂ. 9448783910 ಸಂಪರ್ಕಿಸ ಬಹುದು. ಪ್ರಚಾರ ವಾಹನಗಳಿಗೆ ದ್ವನಿವರ್ಧಕ ಅಳವಡಿಸಲು ಸಾರ್ವಜನಿಕ ಸಭೆಗಳಲ್ಲಿ ಭಿತ್ತಿಪತ್ರ, ಫ್ಲಕ್ಸ್ ಬ್ಯಾನರ್‌ಗಳ ಅಳವಡಿಕೆಗೆ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕೆಂದರು. ಅಧಿಕಾರಿಗಳಾದ ಅನಂದ್, ಭೌವ್ಯರಾಣಿ, ಮುರಳಿ, ಸಹಾಯಕರಾದ ಶ್ರೀನಿವಾಸ್, ಗಂಗಾಧರ್, ರಾಜೇಶ್ ಮತ್ತಿತರು ಇದ್ದರು.