Advertisement
ನಗರದ ತಾಲೂಕು ಕಚೇರಿಯಲ್ಲಿ ಜಗಜೀವನ ರಾಂ ಜಯಂತಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಸಂಘ ಸಂಸ್ಥೆಯ ಮುಖಂಡರು, ದಲಿತ ಮುಖಂಡರೊಂದಿಗೆ ಚರ್ಚೆ ನಡೆಸಿ ಮಾತನಾಡಿದರು.
Related Articles
Advertisement
ಯಾರನ್ನು ಕೇಳುವುದು: ದಲಿತ ಮುಖಂಡರು ನೀವು ಇಂದು ಚುನಾವಣೆಗಾಗಿ ಬಂದಿದ್ದೀರಿ, ಚುನಾವಣೆ ಮುಗಿದ ಮೇಲೆ ಹೋಗುತ್ತೀರಿ, ನಾವು ಯಾರನ್ನು ಕೇಳುವುದೆಂದು ಪ್ರಶ್ನಿಸಿದರು. ನಾವು ಬದಲಾದರೂ ತಹಶೀಲ್ದಾರ್ ಯಾರಾದರೊಬ್ಬರು ಇರುತ್ತಾರೆ. ಸಭೆಯಲ್ಲಿ ನಡೆದ ಸಭಾ ನಡವಳಿಕೆಯನ್ನು, ಸಲಹೆ ಸೂಚನೆಗಳನ್ನು ದಾಖಲಿಸಲಾಗುತ್ತದೆ.
ಮುಂದೆ ಆಚರಣೆ ಮಾಡುವ ಬಗ್ಗೆ ಸಂಶಯ ಬೇಡವೆಂದು ತಿಳಿಸಿದರು. ಅಂತಿಮವಾಗಿ ಬಾಬು ಜಗಜೀವನ ರಾಂ ಜಯಂತಿಯನ್ನು ಏ. 5 ರಂದು ಸಾಂಕೇತಿಕವಾಗಿ ಆಚರಣೆ ಮಾಡಿ ಚುನಾವಣೆ ನಂತರದಲ್ಲಿ ಬಹಿರಂಗ ಸಾರ್ವಜನಿಕ ವೇದಿಕೆಯಲ್ಲಿ ಅದ್ಧೂರಿಯಾಗಿ ಆಚರಣೆ ಮಾಡುವ ನಿರ್ಣಯ ತೆಗೆದುಕೊಳ್ಳಲಾಯಿತು.
ಅಂಬೇಡ್ಕರ್ ಜಯಂತಿಯನ್ನು 14 ರಂದೇ ತಾಪಂ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮದೊಂದಿಗೆ ಮಾಡುವುದು. ಅಂದು ಅಂಬೇಡ್ಕರ್ ವಿಚಾರಧಾರೆಗಳನ್ನು ತಿಳಿಸಿಕೊಡಲು ಯಾರಾದರೂ ಉಪನ್ಯಾಸಕರನ್ನು ಕರೆಸಬೇಕೆಂದು ತೀರ್ಮಾನಿಸಲಾಯಿತು.
ನಗರಸಭೆ ಆಯುಕ್ತೆ ವಿ.ಕೆ.ರಮಾಮಣಿ, ಶಿರಸ್ತೇದಾರ್ ಕೆ.ಎಸ್.ಶಿವಾನಂದ, ಸಮಾಜ ಕಲ್ಯಾಣ ಇಲಾಖೆ ಅ ಕಾರಿ ರಾಜು, ದಲಿತ ಮುಖಂಡರಾದ ಶಿವಲಿಂಗಯ್ಯ, ಮಲ್ಲಿಕಾರ್ಜುನ್, ನೀಲಿ ರಮೇಶ್, ಗುರುಮೂರ್ತಿ, ನವೀನ್, ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ಸೇರಿದಂತೆ ಸಂಘ ಸಂಸ್ಥೆಯ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.