Advertisement

Code of Conduct: ಮೋದಿ ಧ್ಯಾನ ನೀತಿ ಸಂಹಿತೆ ಉಲ್ಲಂಘನೆ: ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್

08:15 AM May 30, 2024 | Team Udayavani |

ಕನ್ಯಾಕುಮಾರಿ/ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಕನ್ಯಾಕುಮಾರಿಯ ಸ್ವಾಮಿ ವಿವೇಕಾನಂದ ಶಿಲಾ ಸ್ಮಾರಕ ಬಳಿ ಗುರುವಾರದಿಂದ ಜೂ.1ರ ವರೆಗೆ ಧ್ಯಾನಸ್ಥರಾಗುವ ಕಾರ್ಯಕ್ರಮ ಬಗ್ಗೆ ಭದ್ರತೆ ಸೇರಿ ದಂತೆ ವಿವಿಧ ಸಿದ್ಧತೆಗಳು ನಡೆದಿವೆ. ಪ್ರಧಾನಿಯವರ ಉದ್ದೇಶಿತ ಕಾರ್ಯಕ್ರಮಕ್ಕೆ ವಿಪಕ್ಷಗಳು ಆಕ್ಷೇಪ ಎತ್ತಿವೆ.

Advertisement

ಈ ಬಗ್ಗೆ ಮಾತನಾಡಿದ ಕಾಂಗ್ರೆಸ್‌ ನಾಯ ಕರಾದ ರಣದೀಪ್‌ ಸುರ್ಜೆವಾಲಾ, ಅಭಿಷೇಕ್‌ ಸಿಂಘ್ವಿ, ಸಯ್ಯದ್‌ ನಾಸಿರ್‌ ಹುಸೇನ್‌ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರ ಧ್ಯಾನ ಕಾರ್ಯಕ್ರಮ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಎಂದು ಅವರು ಆರೋಪಿಸಿದ್ದಾರೆ. ಈ ಕಾರ್ಯಕ್ರಮವನ್ನು ಚಾನೆಲ್‌ಗ‌ಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಎಂದು ಕಾಂಗ್ರೆಸ್‌ ನಾಯಕರು ಹೇಳಿ ದ್ದಾರೆ. ಜತೆಗೆ ಚುನಾವಣ ಆಯೋಗಕ್ಕೆ ದೂರನ್ನೂ ನೀಡಿವೆ.

ಪ್ರಧಾನಿ ಜೂ.1ರ ಬಳಿಕ ಧ್ಯಾನಸ್ಥರಾಗುವ ಕಾರ್ಯ ಕ್ರಮ ಹಮ್ಮಿಕೊಳ್ಳಬಹುದಿತ್ತು ಎಂದಿದ್ದಾರೆ. ಇದೇ ವೇಳೆ ಮಾತನಾಡಿದ ಸಂಸದ ಕಪಿಲ್‌ ಸಿಬಲ್‌ “ಪ್ರಧಾನಿ ಮೋದಿಗೆ ವಿವೇಕವೇ ಇಲ್ಲ. ಅವರು ಮನಃಶಾಸ್ತ್ರರ ಬಳಿಗೆ ತೆರಳುವುದೊಳಿತು’ ಎಂದಿದ್ದಾರೆ.

ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿ ಮೋದಿಯವರ ಧ್ಯಾನ ಕಾರ್ಯಕ್ರಮ ನೀತಿ ಸಂಹಿತೆ ಉಲ್ಲಂಘನೆ ಎಂದು ಟೀಕಿಸಿದ್ದಾರೆ.
2 ಸಾವಿರ ಪೊಲೀಸರು: ಪ್ರಧಾನಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕನ್ಯಾಕುಮಾರಿಯಲ್ಲಿ 2 ಪೊಲೀಸರು ಭದ್ರತೆಯ ನೇತೃತ್ವ ವಹಿಸಿದ್ದಾರೆ. ಜತೆಗೆ ನೌಕಾಪಡೆಯ ಯೋಧರೂ ಇದ್ದಾರೆ.

ಪ್ರಧಾನಿ ಕಾರ್ಯಕ್ರಮ ಏನು?
ಮೇ 30ರ ಸಂಜೆಯಿಂದ ಜೂ.1ರ ಮಧ್ಯಾಹ್ನ 3 ಗಂಟೆಯವರೆಗೆ ಮೋದಿ ಕನ್ಯಾಕುಮಾರಿ ಯಲ್ಲಿ ಇದ್ದು ಧ್ಯಾನ ಮಾಡಲಿದ್ದಾರೆ. ಅನಂತರ ದಿಲ್ಲಿಗೆ ವಾಪಸಾಗಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next