Advertisement
ಈ ಬಾರಿಯ ಸೀಸನ್‌ನಲ್ಲಿ ಈ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿ ಎಳನೀರಿನ ಬೆಲೆ ಗಗನಕ್ಕೆ ತಲುಪಿದೆ. ಒಂದು ಸೀಯಾಳ ಬೆಲೆ 25ರಿಂದ 30 ಇದ್ದುದು ಏರಿಕೆಯಾಗುತ್ತಾ ಸಾಗಿ 40, 50 ಆಗಿ ಈಗ 60 ರೂ.ಗೆ ತಲುಪಿದೆ. ಕುಂದಾಪುರ, ಉಡುಪಿಯಲ್ಲಿ 60 ರೂ. ಇದ್ದರೆ, ಮಂಗಳೂರಿನಲ್ಲಿ 50ರಿಂದ 55 ರೂ. ಇದೆ.
ಕಡೂರು, ಬೀರೂರು, ಹಾಸನ ಕಡೆಯಿಂದ ಪಿಕ್‌ಅಪ್ ವಾಹನದಲ್ಲಿ ಎಳನೀರು ತಂದು ಉಡುಪಿ ಜಿಲ್ಲೆಯ ಅಂಗಡಿಗಳಿಗೆ ಪೂರೈಸಲಾಗುತ್ತಿತ್ತು. ಅಲ್ಲಿ ರೈತರಿಗೆ ಕೇವಲ 30ರಿಂದ 35 ರೂ. ನೀಡಲಾಗುತ್ತಿದೆ. ಆದರೆ ಈಗ ಅಲ್ಲೂ ದೊರೆಯುತ್ತಿಲ್ಲ. ಮಾರುವರು ಕನಿಷ್ಠ 20 ರೂ. ವರೆಗೆ ಲಾಭ ಇಡುತ್ತಿದ್ದಾರೆ ಎಂಬ ದೂರುಗಳೂ ಕೇಳಿಬಂದಿವೆ. ಎಳನೀರಿನ ಬದಲು ಕಬ್ಬಿನಹಾಲು ಮೊದಲಾದ ಪರ್ಯಾಯ ಪಾನೀಯದ ಮೊರೆ ಹೋಗಬೇಕಾದ ಅನಿವಾರ್ಯ ಉಂಟಾಗಿದೆ.
Related Articles
Advertisement