Advertisement

ತೆಂಗಿನ ಮರದ ಸ್ನೇಹಿತರು: ತರಬೇತಿಗೆ ಚಾಲನೆ

12:55 AM Feb 07, 2019 | Harsha Rao |

ಬ್ರಹ್ಮಾವರ: ಭಾರತೀಯ ಕೃಷಿ ಕೌಶಲ ಪರಿಷತ್‌ ಹೊಸದಿಲ್ಲಿ ಅವರ ಪ್ರಾಯೋಜಕತ್ವದಲ್ಲಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ 25 ದಿನಗಳ ಕಾಲ ನಡೆಯುವ ತೆಂಗಿನ ಮರದ ಸ್ನೇಹಿತರು ತರಬೇತಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.

Advertisement

ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ ಉದ್ಘಾಟಿಸಿ, ಇತ್ತೀಚಿನ ದಿನಗಳಲ್ಲಿ ತೆಂಗಿನ ಮರ ಹತ್ತುವ ಯುವಕರ ಸಂಖ್ಯೆ ಕ್ಷೀಣಿಸಿದ್ದು, ತೆಂಗಿನ ಕಾಯಿಯನ್ನು ಕೀಳಿಸಲು ಹೆಚ್ಚಿನ ಕ್ರಯ ನೀಡುವಂತಹ ಪರಿಸ್ಥಿತಿ ಎದುರಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಯುವಕರು ಮತ್ತು ಯುವತಿಯರು ಹೆಚ್ಚಿನ ಆಸಕ್ತಿಯಿಂದ ತೆಂಗಿನ ಮರ ಹತ್ತುವ ಕೌಶಲ್ಯವನ್ನು ಒಗ್ಗೂಡಿಸಿಕೊಂಡಲ್ಲಿ ಹೆಚ್ಚಿನ ಆದಾಯವನ್ನು ಪಡೆದುಕೊಳ್ಳಬಹುದು ಎಂದರು.

ಕೆವಿಕೆ ಮುಖ್ಯಸ್ಥ ಡಾ| ಧನಂಜಯ ಬಿ. ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಕೃಷಿಯಲ್ಲಿ ಹೆಚ್ಚಿನ ಕೌಶಲವನ್ನು ಒಗ್ಗೂಡಿಸಿಕೊಂಡವರಿಗೆ ಉದ್ಯೋಗಾ ವಕಾಶದ ಸಾಧ್ಯತೆ ವೃದ್ಧಿಸುವುದು ಎಂದರು. ಡಾ| ಎಸ್‌.ಯು. ಪಾಟೀಲ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅನಂತರ ತರಬೇತಿ ಪಡೆಯತ್ತಿರುವ ಯುವಕ ಯುವತಿಯರಿಂದ ತೆಂಗಿನ ಮರ ಹತ್ತುವ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಯಿತು.

25 ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ತೆಂಗಿನ ಮರ ಹತ್ತುವ ಕಲಿಕೆಯೊಂದಿಗೆ ತೆಂಗಿಗೆ ಬರುವ ವಿವಿಧ ರೋಗ, ಕೀಟ ಮತ್ತು ಪೋಷಕಾಂಶಗಳ ನಿರ್ವಹಣೆ ಕುರಿತು ತರಬೇತುದಾರರಿಗೆ ಮಾಹಿತಿಯನ್ನು ನೀಡಲಾಗುವುದು. ಅದಲ್ಲದೆ ತೆಂಗಿನ ತೋಟದಿಂದ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೀರಾ ಉತ್ಪಾದನೆ ಕುರಿತು ಕೇಂದ್ರೀಯ ಪ್ಲಾಂಟೇಷನ್‌ ಬೆಳೆಗಳ ಸಂಶೋಧನಾ ಕೇಂದ್ರ ಕಾಸರಗೋಡು, ಸಂಸ್ಥೆಯ ವಿಜ್ಞಾನಿಗಳಿಂದ ತರಬೇತಿಯನ್ನು ಹಮ್ಮಿಕೊಳ್ಳಲಾಗುವುದು. ಚೈತನ್ಯ ಎಚ್. ಎಸ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next