Advertisement
ಪ್ರಸ್ತುತ ಇದು ವರ್ಷಕ್ಕೆ 3 ಕೋಟಿ ರೂ. ವಹಿವಾಟು ನಡೆಸುತ್ತಿದೆ. ಚಾಮರಾಜನಗರ ತಾಲೂಕಿನ ಪ್ರಮುಖ ಬೆಳೆಗಳಲ್ಲೊಂದಾದ ತೆಂಗಿಗೆ ಬೆಲೆಯಿಲ್ಲದೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇಂಥ ಪರಿಸ್ಥಿತಿಯಲ್ಲಿತೆಂಗು ಬೆಳೆಗಾರರಿಗೆ ನೆರವಾಗಲು ಚಾಮರಾಜನಗರ ತಾಲೂಕು ತೆಂಗು ಬೆಳೆಗಾರರ ಸಂಸ್ಕರಣಾ ಮತ್ತು ಮಾರಾಟ ಸಹಕಾರ ಸಂಘವನ್ನು 2002ರ
Related Articles
Advertisement
ರೈತರು ಸಿಪ್ಪೆ ಸುಲಿದು ಘಟಕಕ್ಕೆ ಜುಟ್ಟು ರಹಿತ ತೆಂಗಿನ ಕಾಯಿ ಮಾರುತ್ತಾರೆ. ಈ ತೆಂಗಿನ ಕಾಯಿಯನ್ನು ಕನಿಷ್ಠ 5 ರಿಂದ 7 ದಿನ ಸಂಗ್ರಹಿಸಲಾಗುತ್ತದೆ. ಯಂತ್ರದ ಸಹಾಯದಿಂದ ಕರಟ ತೆಗೆಯಲಾಗುತ್ತದೆ. ಮಹಿಳೆಯರು ಚಾಕುವಿ ನಿಂದ ಕಂದು ಬಣ್ಣದ ಟೆಸ್ಟಾ (ಸಿಪ್ಪೆ) ತೆಗೆಯುವರು. ಬಳಿಕ ಕಾಯಿಯನ್ನು ತಣ್ಣೀರಿನಲ್ಲಿ ಸ್ವತ್ಛಗೊಳಿಸಲಾಗುವುದು. ಕೊಳೆತ ಕಾಯಿಯಿದ್ದರೆ ತೆಗೆಯಲಾಗುವುದು. ಮಷಿನ್‌ನಲ್ಲಿ ಬಳಿಕ ತುಂಡು ತುಂಡು ಮಾಡಲಾಗುತ್ತದೆ. ಪಿನ್‌ಮಿಲ್‌ನಲ್ಲಿ ಕಾಯಿಯನ್ನು ಹಸಿ ತುರಿ ಮಾಡಲಾಗುತ್ತದೆ. ಹಸಿ ತುರಿ ಡ್ರೈಯರ್‌ಗೆ ಹೋಗುತ್ತದೆ. ಡ್ರೈಯರ್‌ನಿಂದ ತೇವಾಂಶ ತೆಗೆಯಲಾಗುತ್ತದೆ. ಅದು ಒಣತುರಿ ಮಾಡುತ್ತದೆ. ಈ ಒಣತುರಿಯನ್ನು ಮತ್ತೆ ಬೇಕಾದ ಆಕಾರಕ್ಕೆ ಗ್ರೇಡಿಂಗ್ ಮಾಡಲಾಗುತ್ತದೆ. ಅನಂತರ 25 ಕೆ.ಜಿ. ಪ್ಯಾಕ್ ಮಾಡಲಾಗುವುದು. 1 ಕೆ.ಜಿ., ಅರ್ಧ ಕೆ.ಜಿ. ಪ್ಯಾಕ್ ಮಾಡಲಾಗುವುದು. ಈ ಪುಡಿಯನ್ನು 6 ತಿಂಗಳ ಕಾಲ ಬಳಸಬಹುದು.
ರೈತರ ತೆಂಗಿನ ಕಾಯಿಗೆ ಉತ್ತಮ ದರ : ಬೆಳೆಗಾರರು ತಮ್ಮದೇ ಸಾಗಾಣಿಕೆಯಲ್ಲಿ ತೆಂಗಿನ ಕಾಯಿಗಳನ್ನು ಘಟಕಕ್ಕೆನೀಡಬೇಕು. ಕೆ.ಜಿ.ಗೆ 31ರಿಂದ 34 ರೂ.ದರ ನೀಡಲಾಗುತ್ತದೆ. ಮಾರನೆಯ ದಿನವೇ ಬೆಳೆಗಾರರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಈಸಹಕಾರ ಘಟಕವು 2019-20 ನೇ ಸಾಲಿನಲ್ಲಿ 1 ಕೋಟಿ ರೂ., 2020-21ರಲ್ಲಿ
2 ಕೋಟಿ ರೂ. ಹಾಗೂ 2021-22ನೇ ಸಾಲಿನಲ್ಲಿ 3 ಕೋಟಿ ರೂ. ವಹಿವಾಟುನಡೆಸಿದೆ. ಶೇರುದಾರರಿಗೆ ಮೆಸೇಜ್ ವಾರದಲ್ಲಿ ಎರಡು ಬಾರಿ ದರದ ಬಗ್ಗೆ ಮೊಬೈಲ್ ಮೂಲಕ ಮೆಸೇಜ್ ಕಳುಹಿಸಲಾಗುತ್ತದೆ. ತೆಂಗಿನ ಬೆಲೆ ಕುಸಿತವಾದಾಗಲೂ ರೈತರಿಂದ ಖರೀದಿ ಮಾಡಿ ಅವರ ನೆರವಿಗೆ ನಿಲ್ಲುತ್ತಿದೆ.
ಸುವರ್ಣ ಕಲ್ಪತರು ಬ್ರಾಂಡ್ ನೇಮ್ : ಈ ತೆಂಗಿನ ಪುಡಿಗೆ ಸುವರ್ಣ ಕಲ್ಪತರು ಎಂಬ ಬ್ರಾಂಡ್ ನೇಮ್ ನೀಡಲಾಗಿದೆ. ಈಗಾಗಲೇ ಎಫ್ಎಸ್‌ಎಸ್‌ಎಐ ಪ್ರಮಾಣ ಪಡೆದಿದೆ. 1 ಕೆಜಿಪ್ಯಾಕ್‌ಗೆ 175 ರೂ. ದರ ಇದೆ. ತೆಂಗಿನ ಕಾಯಿಪುಡಿಯನ್ನು ಬಿಸ್ಕೆಟ್ ಕಾರ್ಖಾನೆಗಳು,ಬೇಕರಿಗಳು, ಗೃಹೋಪಯೋಗಿ ರೀಟೇಲ್‌ಗೆಸಗಟು ಮಾರಾಟ ಮಾಡಲಾಗುತ್ತದೆ. ರೀಟೇಲ್‌ಪ್ಯಾಕನ್ನು ಮಾಲ್‌ಗಳಿಗೆ, ದಿನಸಿ ಅಂಗಡಿಗಳಿಗೆ, ಇಕಾಮರ್ಸ್ ಗೆ ಮಾರಾಟಕ್ಕೆ ನೀಡಲಾಗುತ್ತದೆ. ಈ ತೆಂಗಿನಪುಡಿಯನ್ನು ಐಸ್‌ಕ್ರೀಂ, ಬಿಸ್ಕೆಟ್ಸ್, ಚಾಕಲೇಟ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಚಟ್ನಿ ಪುಡಿ, ಕುಕೀಸ್‌ಗಳಲ್ಲಿ ಬಳಸುತ್ತಾರೆ. ಬೇಕರಿಪದಾರ್ಥಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.ತೆಂಗಿನ ಕಾಯಿಯ ಕಪ್ಪು ಭಾಗದಿಂದ ಹಿಂಡಿ, ಕಚ್ಚಾ ಎಣ್ಣೆ ತಯಾರಿಕೆಯ ಚಿಪ್ಸ್‌ತಯಾರಿಸಲಾಗುತ್ತದೆ ತಮಿಳುನಾಡಿನ ಎಣ್ಣೆ ಮಿಲ್‌ಗಳಿಗೆ ಮಾರಾಟ ಮಾಡಲಾಗುತ್ತಿದೆ.
-ಕೆ.ಎಸ್. ಬನಶಂಕರ ಆರಾಧ್ಯ