Advertisement
ಚರ್ಮಕ್ಕೆ ಪೋಷಣೆ ನೀಡಲು ತೆಂಗಿನೆಣ್ಣೆ ಅದ್ಭುತವಾದ ಸಾಮಗ್ರಿಯಾಗಿದ್ದು ಚರ್ಮವನ್ನು ಮೋಶ್ಚರೈಸ್ ಆಗಿ ಇರಲು ಸಹಾಯ ಮಾಡುತ್ತದೆ. ಅದಲ್ಲದೆ ಇದು ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಮಾಡಿ ನಯ ಹಾಗೂ ಸುಂದರವಾಗಿಸುವುದು. ಇದರಲ್ಲಿರುವಂತಹ ಆ್ಯಂಟಿ ಆಕ್ಸಿಡೆಂಟ್ ಗುಣಗಳು ಫ್ರೀ ಯಾರ್ಡಿಕಲ್ ವಿರುದ್ಧ ಹೋರಾಡುವುದು ಮತ್ತು ನೆರಿಗೆ ಹಾಗೂ ಗೆರೆಗಳ ನಿವಾರಣೆ ಮಾಡಿ, ಚರ್ಮಕ್ಕೆ ಪುನಶ್ಚೇತನ ನೀಡುವುದು. ಇದು ಚರ್ಮದಲ್ಲಿನ ಕೊಲಾಜಿನ್ ಉತ್ಪತ್ತಿಯನ್ನು ಹೆಚ್ಚಿಸಿ ನೆರಿಗೆ ನಿವಾರಣೆ ಮಾಡುತ್ತದೆ.
ಪ್ರತಿದಿನ ಸ್ನಾನ ಮಾಡುವ ಅರ್ಧ ಗಂಟೆ ಮೊದಲು ಮುಖಕ್ಕೆ ತೆಂಗಿನ ಎಣ್ಣೆ ಹಚ್ಚಿಕೊಂಡು ಅನಂತರ ಸ್ನಾನ ಮಾಡುವುದರಿಂದ ಮುಖ ನಯವಾಗಿರುವುದಲ್ಲದೆ ಒರಟಾಗುವುದನ್ನು ತಡೆಯುತ್ತದೆ. ತೆಂಗಿನ ಎಣ್ಣೆಯ ಜತೆಗೆ ಹರಳೆಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ರಾತ್ರಿ ಮಲಗುವಾಗ ಹಚ್ಚಿಕೊಂಡು 15 ನಿಮಿಷ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ಅನಂತರ ಬೆಳಗ್ಗೆ ಎದ್ದ ಅನಂತರ ಮುಖ ತೊಳೆಯಿರಿ. ಇದು ನೆರಿಗೆ ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಜೇನುತುಪ್ಪ ಮತ್ತು ತೆಂಗಿನೆಣ್ಣೆ ಮಿಶ್ರಣ ಚರ್ಮದ ಆರೋಗ್ಯಕ್ಕೆ ಪೂರಕ. ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇರುವುದರಿಂದ ಇದು ಚರ್ಮದ ರಕ್ಷಣೆ ಮಾಡುತ್ತದೆ. ಮತ್ತು ಪುನಶ್ಚೇತನ ನೀಡುತ್ತದೆ. ಅದಲ್ಲದೆ ತೆಂಗಿನೆಣ್ಣೆಯಲ್ಲಿ ವಿಟಮಿನ್ ಇ ಇರುವುದರಿಂದ ಚರ್ಮದ ರಕ್ಷಣೆ ಮತ್ತು ಪೋಷಣೆ ಮಾಡುವುದಲ್ಲದೆ ಆರೋಗ್ಯಕಾರಿ ಚರ್ಮ ನಿಮ್ಮದಾಗಲು ಸಹಾಯ ಮಾಡುತ್ತದೆ. ತೆಂಗಿನೆಣ್ಣೆಗೆ ಅರಿಶಿನ ಸೇರಿಸುವುದರಿಂದ ಕೊಲಾಜಿನ್ ಉತ್ಪತ್ತಿಗೆ ನೆರವಾಗುತ್ತದೆ. ಇದರಿಂದ ಚರ್ಮದ ಸ್ಥಿತಿಸ್ಥಾಪಕತ್ವ ಉತ್ತಮವಾಗುತ್ತದೆ ಮತ್ತು ಅದು ಚರ್ಮವನ್ನು ಬಿಗಿಗೊಳಿಸುತ್ತದೆ. ಇದರಿಂದ ನೆರಿಗೆ ನಿವಾರಣೆಗೆ ಸಹಾಯವಾಗುತ್ತದೆ.
Related Articles
Advertisement