Advertisement

ತೂಕ ಇಳಿಕೆಗೆ ತೆಂಗಿನೆಣ್ಣೆ

09:29 PM Sep 09, 2019 | mahesh |

ಎಣ್ಣೆ ಆಹಾರಗಳನ್ನು ಸೇವಿಸಿದರೆ ಶರೀರದಲ್ಲಿ ಕೊಬ್ಬು ಅಧಿಕವಾಗುತ್ತದೆ ಎಂಬುದು ಸಾಮಾನ್ಯವಾದ ನಂಬಿಕೆ. ಅದು ನಿಜವೂ ಹೌದು. ಎಣ್ಣೆಯಲ್ಲಿ ಕರಿದ ತಿಂಡಿಗಳ ನಿರಂತರ ಸೇವನೆಯು ದೇಹದಲ್ಲಿ ಕೊಬ್ಬಿನಾಂಶವನ್ನು ಹೆಚ್ಚು ಮಾಡುತ್ತದೆ. ಆದರೆ ತೆಂಗಿನೆಣ್ಣೆಯು ಶರೀರದ ಕೊಬ್ಬಿನ ಅಂಶ ಇಳಿಕೆಗೆ ಸಹಕಾರಿಯಾಗುತ್ತದೆ ಎಂಬುದು ಸತ್ಯ. ಶುದ್ಧ ತೆಂಗಿನೆಣ್ಣೆಯ ಸಹಾಯದಿಂದ ಕೊಬ್ಬಿನ ಅಂಶ ಕಡಿಮೆ ಮಾಡಿಕೊಳ್ಳಬಹುದು. ದೇಹದಲ್ಲಿರುವ ಅನಗತ್ಯ ಫ್ಯಾಟ್‌ನ್ನು ಇಳಿಸಲು ಇದು ಸಹಕಾರಿ.

Advertisement

ಮೆಟಬೋಲಿಸಂ ಇಳಿಕೆ
ತೆಂಗಿನೆಣ್ಣೆಯ ದಿನನಿತ್ಯದ ಸೇವನೆಯು ಶರೀರದಲ್ಲಿರುವ ಮೆಟಬೋಲಿಸಂ ಕರಗಿಸಲು ಸಹಕಾರಿ. ಪ್ರತಿನಿತ್ಯ ಒಂದು ಚಮಚ ಎಣ್ಣೆ ಸೇವನೆಯು ಕೊಬ್ಬು ಕರಗಿಸಲು ಸಹಕಾರಿ.

ಹೊಟ್ಟೆ ತುಂಬಿದ ಭಾವನೆ ನೀಡುವುದು
ತೆಂಗಿನೆಣ್ಣೆಯಲ್ಲಿರುವ ಕೊಬ್ಬಿನ ಅಂಶವು ಹೊಟ್ಟೆ ಬೇಗ ತುಂಬಲು ಸಹಾಯ ಮಾಡುತ್ತದೆ. ಇದರಿಂದ ಇತರ ಆಹಾರಗಳ ಸೇವನೆಯ ಪ್ರಮಾಣವು ಕಡಿಮೆಯಾಗುತ್ತದೆ.

ಕೆಟ್ಟ ಕೊಲೆಸ್ಟ್ರಾಲ್‌ ನಿಯಂತ್ರಣ
ಹೃದಯದ ಸಮಸ್ಯೆಗಳು ಹೆಚ್ಚಾಗಿ ಕೆಟ್ಟ ಕೊಲೆಸ್ಟ್ರಾಲ್‌ನಿಂದ ಉಂಟಾಗುತ್ತದೆ. ಅಂತಹ ಕೆಟ್ಟ ಕೊಲೆಸ್ಟ್ರಾಲ್‌ ನಿಯಂತ್ರಣವನ್ನು ತೆಂಗಿನೆಣ್ಣೆ ಮಾಡುತ್ತದೆ. ತೆಂಗಿನೆಣ್ಣೆಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ ಅಂಶಗಳು ಇವುಗಳ ನಿಯಂತ್ರಣಕ್ಕೆ ಹೆಚ್ಚು ಸಹಕಾರಿಯಾಗುತ್ತವೆ.

ಬೆಲ್ಲಿ ಫ್ಯಾಟ್‌ ಇಳಿಕೆ
ಪ್ರತಿನಿತ್ಯ 13 ಮಿ.ಗ್ರಾಂ ನಷ್ಟು ತೆಂಗಿನೆಣ್ಣೆಯನ್ನು ಸೇವಿಸುವುದರಿಂದ ಬೆಲ್ಲಿ ಫ್ಯಾಟ್‌ ಕಡಿಮೆಯಾಗುತ್ತದೆ. ಒಂದು ತಿಂಗಳು ಸೇವಿಸಿದರೆ ವ್ಯತ್ಯಾಸ ಗಮನಕ್ಕೆ ಬರುತ್ತದೆ.

Advertisement

ಹೆಚ್ಚುವ ಚೈತನ್ಯ
ದೇಹದ ಚೈತನ್ಯ ಅಧಿಕಗೊಳಿಸಲು ತೆಂಗಿನ ಎಣ್ಣೆ ಸಹಾಯ ಮಾಡುತ್ತದೆ. ಇದರಿಂದ ಕೆಲಸ ಮಾಡಲು ಹೆಚ್ಚು ಶಕ್ತಿ ಬರುತ್ತದೆ. ಕೆಲಸ ಅಧಿಕವಾದಾಗ ದೇಹದ ಕೊಬ್ಬು ನಿಯಂತ್ರಣವಾಗುತ್ತದೆ.

-  ಸುಶ್ಮಿತಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next