Advertisement

ತೂಕ ಇಳಿಕೆಗೆ ತೆಂಗಿನೆಣ್ಣೆ

08:55 PM Oct 14, 2019 | Team Udayavani |

ತೆಂಗಿನ ಎಣ್ಣೆ ಬಳಕೆ ಯಿಂದ ಕೊಬ್ಬಿನಾಂಶ ಹೆಚ್ಚುತ್ತದೆ ಎಂಬುದು ಕೆಲವರ ನಂಬಿಕೆ. ಆದರೆ ಪ್ರತಿನಿತ್ಯ ತೆಂಗಿನ ಎಣ್ಣೆ ಸೇವನೆಯಿಂದ ಆರೋಗ್ಯವಾಗಿರ ಬಹುದು ಮತ್ತು ಡಯಟ್‌ ಮಾಡುವವರಿಗೆ ಇದು ಉತ್ತಮ.

Advertisement

ತೆಂಗಿನ ಎಣ್ಣೆ ಕೂದಲಿನ ಆರೋಗ್ಯ, ಚರ್ಮ, ದೇಹದ ಆರೋಗ್ಯಕ್ಕೆ ಉತ್ತಮವಾದುದು. ಜತೆಗೆ ಇದು ಮನೆಯಲ್ಲೇ ಸುಲಭವಾಗಿ ದೊರಕುವ ವಸ್ತುವಾದ್ದರಿಂದ ಸುಲಭವಾಗಿ ಬಳಕೆ ಮಾಡಬಹುದು.

ಡಯಟ್‌ ಮಾಡುವವರು ಪ್ರತಿನಿತ್ಯ ನಿಯಮಿತವಾಗಿ ತೆಂಗಿನ ಎಣ್ಣೆ ಬಳಕೆ ಮಾಡುವುದರಿಂದ ತೂಕ ಮತ್ತು ಫ್ಯಾಟ್‌ ಕಡಿಮೆಗೊಳಿಸಬಹುದು. ಆದರೆ ವೈದ್ಯರ ಸಲಹೆಯೊಂದಿಗೆ ಬಳಕೆ ಮಾಡಿದರೆ ಉತ್ತಮ.

ಬಳಕೆ ಹೇಗೆ?
ಹಲವಾರು ಸಂಶೋಧಕರು ತೆಂಗಿನ ಎಣ್ಣೆಯ ಬಳಕೆ ಮತ್ತು ಪ್ರಯೋಜನಗಳ ಕುರಿತು ಅಧ್ಯಯನ ನಡೆಸಿದ್ದಾರೆ. ವ್ಯಕ್ತಿಯಿಂದ ವ್ಯಕ್ತಿಗೆ ತೆಂಗಿನ ಎಣ್ಣೆಯ ಡೋಸೇಜ್‌ ವ್ಯತ್ಯಾಸವಿದೆ. ಆದ್ದರಿಂದ ಬಳಸುವ ಮೊದಲು ಪರಿಣತರ ಸಲಹೆ ಪಡೆದುಕೊಳ್ಳುವುದು ಮುಖ್ಯ.

ನಾಲ್ಕು ವಾರಗಳವರೆಗೆ 2 ಚಮಚ ತೆಂಗಿನ ಎಣ್ಣೆ ಬಳಕೆ ಮಾಡಬಹುದು. ಆದರೆ ಮೊದಲು ದಿನದಲ್ಲಿ ಒಂದು ಚಮಚದಿಂದ ಆರಂಭಿಸಿ ಅನಂತರ ಪ್ರಮಾಣ ನಿಧಾನವಾಗಿ ಹೆಚ್ಚಿಸಿ.

Advertisement

ಡೋಸೇಜ್‌ ಮಾದರಿಯಲ್ಲಿ ಬಳಕೆ ಮಾಡುವುದರಿಂದ ತೂಕ ಕಡಿಮೆಗೊಳಿಸಬಹುದು. ಜತೆಗೆ ದಿನನಿತ್ಯದ ಆಹಾರದೊಂದಿಗೆ ತೆಂಗಿನ ಎಣ್ಣೆ ಬಳಕೆ ಮಾಡಬಹುದು.

ದಿನನಿತ್ಯ ಬಳಕೆಯಲ್ಲಿ ಇತರೆ ಎಣ್ಣೆಗಿಂತ ತೆಂಗಿನ ಎಣ್ಣೆ ಬಳಕೆ ಹೆಚ್ಚು ಉತ್ತಮವಾದುದು. ಜತೆಗೆ ತರಕಾರಿ ಬೇಯಿಸುವಾಗ ಅದಕ್ಕೆ ತೆಂಗಿನ ಎಣ್ಣೆ ಹಾಕುವುದರ ಮೂಲಕವೂ ತೆಂಗಿನ ಎಣ್ಣೆ ಬಳಕೆ ಮಾಡಬಹುದು.

ತೆಂಗಿನ ಎಣ್ಣೆಯ ಪ್ರಯೋಜನಗಳು
1.ಫ್ಯಾಟ್‌ ಕಡಿಮೆಗೊಳಿಸಲು ತೆಂಗಿನ ಎಣ್ಣೆ ಸಹಕಾರಿ
ಫ್ಯಾಟ್‌ ಕಡಿಮೆಗೊಳಿಸಲು ತೆಂಗಿನ ಎಣ್ಣೆ ಹೆಚ್ಚು ಸಹಕಾರಿ. ಸುಲಭವಾಗಿ ದೊರಕುವ ಇದನ್ನು ತಜ್ಞರ ಸಲಹೆಯೊಂದಿಗೆ ಬಳಕೆ ಮಾಡಿ.

2.ಹಾನಿಕಾರಕ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಟ
ಹಾನಿಕಾರಕ ಸೂಕ್ಷ್ಮಜೀವಿಗಳ ವಿರುದ್ಧ ತೆಂಗಿನ ಎಣ್ಣೆ ಹೋರಾಟ ಮಾಡುತ್ತದೆ. ದೇಹದಲ್ಲಿರುವ ಸೂಕ್ಷ್ಮಾಣುಗಳ ವಿರುದ್ಧ ಇದು ಹೋರಾಟ ನಡೆಸುತ್ತದೆ.

3.ರೋಗನಿರೋಧಕ
ತೆಂಗಿನ ಎಣ್ಣೆ ರೋಗನಿರೋಧಕವಾಗಿ ಕೆಲಸ ಮಾಡುತ್ತದೆ. ಇದರಿಂದ ಆರೋಗ್ಯಪೂರ್ಣವಾಗಿರಲು ಸಾಧ್ಯ.

ತೆಂಗಿನ ಎಣ್ಣೆಯನ್ನು ನಿತ್ಯ ಬಳಕೆ ಮಾಡುವುದರಿಂದ ಆರೋಗ್ಯಪೂರ್ಣ ದೇಹ ಹೊಂದಲು ಸಾಧ್ಯ.

- ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next