Advertisement
ಕಾಲು, ಕೈಗಳ ಸೌಂದರ್ಯ ವನ್ನು ಹೆಚ್ಚಿಸುವಲ್ಲಿ ಉಗುರುಗಳು ಪ್ರಮುಖ ಪಾತ್ರ ವಹಿಸುತ್ತವೆ. ಕಾಲು ಮತ್ತು ಕೈ ಬೆರಳುಗಳು ಮತ್ತು ಉಗುರುಗಳನ್ನು ನಾವು ಎಷ್ಟು ಸ್ವತ್ಛವಾಗಿ ಕಾಪಾಡಿಕೊಳ್ಳುತ್ತೇವೆಯೋ ನಮ್ಮ ಆರೋಗ್ಯ ಅಷ್ಟು ಸ್ವಸ್ಥವಾಗಿದೆ ಎಂದು ಹೇಳಬಹುದು. ಹೀಗಿರುವ ಉಗುರುಗಳನ್ನು ಸ್ವತ್ಛವಾಗಿಟ್ಟುಕೊಳ್ಳುವಲ್ಲಿ ತೆಂಗಿನೆಣ್ಣೆ ಹೇಗೆಲ್ಲಾ ಉಪಯೋಗವಾಗುತ್ತದೆ ಎಂದು ತಿಳಿದುಕೊಳ್ಳೋಣ.
ನಮ್ಮ ಉಗುರುಗಳಿಗೆ ದಿನನಿತ್ಯ ತೆಂಗಿನೆಣ್ಣೆಯನ್ನು ಹಚ್ಚುತ್ತಿದ್ದರೆ ಉಗುರುಗಳ ಬಲವೃದ್ಧಿಗೆ ಸಹಾಯವಾಗುವುದರ ಜತೆಗೆ, ಕಾಂತಿ ಯುತವಾಗಿ ಕಂಗೊಳಿಸುತ್ತದೆ. ಅದರೊಂದಿಗೆ ಉಗುರುಗಳು ತೇವಾಂಶ ಕಾಪಾಡಿಕೊಳ್ಳುವ ದೃಷ್ಟಿಯಿಂದಲೂ ಕೊಬ್ಬರಿ ಎಣ್ಣೆ ಬಳಕೆ ತೀರಾ ಉಪಯುಕ್ತವೇ ಸರಿ. ಜತೆಗೆ ಉಗುರಿನ ಸುತ್ತಲೂ ಬೆಸೆದುಕೊಂಡಿರುವ ಚರ್ಮದ ಆರೋಗ್ಯ ಹೆಚ್ಚಿಸುವಲ್ಲಿಯೂ ಇದು ಸಹಕಾರಿ. ಥೆರಪಿಯಲ್ಲಿ ಬಳಕೆ
ಪರಿಶುದ್ಧವಾದ ನೈಸರ್ಗಿಕ ತೆಂಗಿನೆಣ್ಣೆಯನ್ನು ನೈಲ್ ಥೆೆರಪಿಗಳಲ್ಲಿಯೂ ಬಳಕೆ ಮಾಡಲಾಗುತ್ತದೆ. ಏಕೆಂದರೆ ತೆಂಗಿನೆಣ್ಣೆ ದೇಹಕ್ಕೆ ಬೇಕಾದ ರೋಗ ನಿರೋಧಕ ಶಕ್ತಿಯನ್ನು ಪೂರೈಕೆ ಮಾಡುವಲ್ಲಿಯೂ ಪೂರಕ. ನಮ್ಮ ಕೈ ಬೆರಳುಗಳ ಮೂಲಕವೇ ಆಹಾರ ವಸ್ತುಗಳು ಹೊಟ್ಟೆ ಸೇರುವುದರಿಂದ ಕೈಗಳಲ್ಲಿನ ರೋಗಾಣುಗಳು ದೇಹದೊಳಕ್ಕೆ ಪ್ರವೆಶಿಸದಂತೆ ರಕ್ಷಕವಾಗಿ ಕಾಯ ನಿರ್ವಹಿಸುತ್ತದೆ. ಇದರಿಂದಾಗಿ ಕೀಟಾಣುಗಳಿಂದ ಉಂಟಾಗುವ ಅನಾರೋಗ್ಯವನ್ನು ಕೊಂಚ ಮಟ್ಟಿಗೆ ತಡೆಗಟ್ಟುವುದೂ ಸಾಧ್ಯವಾಗುತ್ತದೆ.
Related Articles
ಇನ್ನು ರಾತ್ರಿ ಮಲಗುವುದಕ್ಕೆ ಮುನ್ನ ತೆಂಗಿನ ಎಣ್ಣೆಯನ್ನು ಉಗುರಿಗೆ ಹಚ್ಚಿ ಕೊಂಚ ಸಮಯ ಮಸಾಜ್ ಮಾಡಿಕೊಳ್ಳುವುದರಿಂದ ಫಂಗಲ್ ಇನೆ#ಕ್ಷನ್ ಅನ್ನು ತಡೆಯುವುದೂ ಸಾಧ್ಯ. ಜತೆಗೆ ಕೈಯಲ್ಲಿರುವ ವೈರಸ್‌ಗಳ ಮೇಲೆಯೂ ಪರಿಣಾಮ ಬೀರುವ ಮೂಲಕ ದೇಹಕ್ಕೆ ರೋಗ ಬಾಧೆಯನ್ನು ಗಣನೀಯ ಮಟ್ಟದಲ್ಲಿ ಕಡಿಮೆ ಮಾಡುವು ದಕ್ಕೂ ಇದು ಸಹಾಯ ಮಾಡುತ್ತದೆ.
Advertisement
ಭುವನ ಬಾಬು, ಪುತ್ತೂರು