Advertisement

ಮಕ್ಕಳ ಆರೈಕೆಗೆ ತೆಂಗಿನೆಣ್ಣೆ

09:43 PM Sep 23, 2019 | sudhir |

ಕರಾವಳಿ ತೀರಗಳಲ್ಲಿ ಹೇರಳವಾಗಿ ಲಭ್ಯವಿರುವ ತೆಂಗಿನೆಣ್ಣೆ ರುಚಿಯಾದ ಅಡುಗೆ ಜತೆಗೆ ಉತ್ತಮ ಆರೋ ಗ್ಯಕ್ಕೂ ಕಾರಣವಾಗಿದೆ. ತೆಂಗಿನೆಣ್ಣೆ ಯಲ್ಲಿ ಲಾರಿಕ್‌ ಆಮ್ಮ ಇದ್ದು ಇದು ತ್ವಚೆಯ ಪೋಪಕಾಂಶಕ್ಕೆ ಸಹಕಾರಿ. ಮಕ್ಕಳ ಆರೋಗ್ಯ ಕಾಪಾಡುವಲ್ಲಿಯೂ ತೆಂಗಿನೆಣ್ಣೆ ಉತ್ತಮವಾಗಿದೆ. ತೆಂಗಿನೆಣ್ಣೆಯಲ್ಲಿ ವಿಟಮಿನ್‌ ಇ ಇದೆ. ಇದು ಯಾವ ರೀತಿ ಮಕ್ಕಳ ಆರೋಗ್ಯಕ್ಕೆ ಪೂರಕ ಎಂಬ ಮಾಹಿತಿ ಇಲ್ಲಿದೆ.

Advertisement

1 ಹಲ್ಲು ನೋವು ನಿವಾರಕ: ಮಕ್ಕಳಿಗೆ ಹಲ್ಲು ನೋವು ಸಾಮಾನ್ಯ. ಈ ಸಂದರ್ಭದಲ್ಲಿ ಹಲ್ಲಿಗೆ ಮತ್ತು ದವಡೆಗೆ ತೆಂಗಿನ ಎಣ್ಣೆ ಉಜ್ಜಿದರೆ ಹಲ್ಲು ನೋವು ಕಡಿಮೆಯಾಗುತ್ತದೆ.

2 ಅಲರ್ಜಿಯಿಂದ ರಕ್ಷಣೆ: ಮಗುವಿನ ತ್ವಚೆ ಸೂಕ್ಷ್ಮವಾಗಿದ್ದು ಅಲರ್ಜಿ ಸಮಸ್ಯೆ ಬಹು ಬೇಗನೆ ಕಾಣಿಸಿಕೊಳ್ಳುತ್ತದೆ. ಮೂಗಿನ ಹೊಳ್ಳೆಗಳ ಒಳಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಅಲರ್ಜಿಯಿಂದ ಮುಕ್ತಿ ಪಡೆಯಬಹುದು.

3 ಸುಖ ನಿದ್ದೆ: ಮಕ್ಕಳಿಗೆ ತೆಂಗಿನ ಎಣ್ಣೆಯಿದ ಮಸಾಜ್‌ ಮಾಡಿ ಸ್ನಾನ ಮಾಡಿಸಿದರೆ ಒಳ್ಳೆಯ ನಿದ್ದೆ ಜತೆಗೆ ಮೂಳೆಗಳೂ ದೃಢವಾಗುತ್ತದೆ. ತ್ವಚೆಯಲ್ಲಿ ತೇವಾಂಶವನ್ನು ಉಳಿಸಲು ಇದು ಸಹಕಾರಿ.

4 ಕಿವಿಯ ಸೋಂಕಿಗೆ: ಕಿವಿ ನೋವು ಕಾಣಿಸಿಕೊಂಡರೆ ಸ್ವಲ್ಪ ಪ್ರಮಾಣದಲ್ಲಿ ಕಿವಿಯ ಒಳಗೆ ಹಾಕಿದರೆ ನೋವಿನಿಂದ ಉಪಶಮನವಾಗುತ್ತದೆ.

Advertisement

5 ಚರ್ಮದ ಸಮಸ್ಯೆ ದೂರ: ಮಗುವಿನ ಮೈಗೆ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಚರ್ಮ ಅದು ಒಂದು ರೀತಿಯ ತೆಳುವಾದ ಪದರವನ್ನು ರೂಪಿಸುತ್ತದೆ. ಇದು ಹೊರಗಿನ ಧೂಳು, ಬ್ಯಾಕ್ಟೀರಿಯಾಗಳಿಂದ ಕಾಪಾಡುತ್ತದೆ. ಒಣ ತುಟಿಗಳಿಗೆ ಕೊಬ್ಬರಿ ಎಣ್ಣೆ ಹಚ್ಚಿದರೆ ತೇವಾಂಶ ಹೆಚ್ಚಾಗಿ ಒಣ ತುಟಿಯಿಂದ ಮುಕ್ತಿ ಪಡೆಯಬಹುದು.

6 ರೋಗ ನಿರೋಧಕ ಶಕ್ತಿ ಹೆಚ್ಚಳ: ತೆಂಗಿನ ಎಣ್ಣೆ ಯಲ್ಲಿರುವ ಆ್ಯಂಟಿ ಮೈಕ್ರೊಬಿಯಲ್‌ ಅಂಶವು ಮಕ್ಕಳ ರೋಗ ನಿರೋಧಕ ಹೆಚ್ಚಿಸುತ್ತದೆ.

7 ಹೊಟ್ಟೆ ನೋವು ನಿವಾರಣೆ: ಮಕ್ಕಳ ಹೊಕ್ಕಳಿನ ಮೇಲೆ ತೆಂಗಿನ ಎಣ್ಣೆಯನ್ನು ಹಚ್ಚಿದರೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವು ಕಡಿಮೆಯಾಗುತ್ತದೆ..

8 ಗಾಯಗಳಿಂದ ಶೀಘ್ರ ಶಮನ: ಸದಾ ಚಟುವಟಿಕೆಯಿಂದ ಇರುವ ಮಕ್ಕಳಿಗೆ ಗಾಯಗಳು ಆಗುತ್ತಲೇ ಇರುತ್ತವೆ. ಗಾಯಗಳ ಮೇಲೆ ತೆಂಗಿನ ಎಣ್ಣೆ ಹಚ್ಚಿದರೆ ಶೀಘ್ರ ಉಪಶಮನವಾಗುತ್ತದೆ.

9 ಜ್ವರ: ಮಕ್ಕಳಲ್ಲಿ ಸಾಮನ್ಯವಾಗಿ ಜ್ವರ , ಕಫ‌ ಕಂಡು ಬರುತ್ತದೆ. ಆಗ ಎದೆಯ ಮೇಲೆ ತೆಂಗಿನ ಎಣ್ಣೆ ಹಚ್ಚಬೇಕು. ಇದರಿಂದ ಜ್ವರ, ಕಫ‌ ಕಡಿಮೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next