Advertisement
ನೀಳ ಕೇಶರಾಶಿಗೆ ತೆಂಗಿನ ಹಾಲು
ನಿಮ್ಮ ಕೂದಲು ಒಣಗಿದಂತಾಗಿ ಉದುರುತ್ತಿದೆಯೇ ? ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಸೌಂದರ್ಯ ವರ್ಧಕಗಳು ಉಪಯೋಗ ಆಗಲಿಲ್ಲವೇ. ಯೋಚಿಸಬೇಡಿ ಈ ನಿಮ್ಮ ಸಮಸ್ಯೆಗೆ ತೆಂಗಿನ ಕಾಯಿ ಹಾಲು ಪರಿಹಾರವಾಗಲಿದ್ದು, ನೈಸರ್ಗಿಕವಾದ ಕೂದಲನ್ನು ಪಡೆಯಲು ಸಹಾಯಮಾಡುತ್ತದೆ. ಇದರ ಹಾಲಿನಲ್ಲಿ ಪ್ರೊಟೀನ್‌ಮತ್ತು ಕೊಬ್ಬಿನಾಂಶವಿದ್ದು, ಕೂದಲಿನ ಬೆಳವಣಿಗೆಗೆ ಉಪಯುಕ್ತವಾಗಿದೆ. ಜತೆಗೆ ತೆಂಗಿನ ಕಾಯಿ ಹಾಲಿಗೆ ಕೂದಲು ಉದುರುವ ಸಮಸ್ಯೆಯನ್ನು ನಿಯಂತ್ರಿಸುವ ಶಕ್ತಿ ಇದ್ದು, ತೆಂಗಿನ ಹಾಲನ್ನು ಉಪಯೋಗಿಸಿದ್ದರೆ ಸಮೃದ್ಧ ಹಾಗೂ ದಟ್ಟವಾದ ಕೂದಲನ್ನು ಪಡೆಯಬಹುದು.
· ತೆಂಗಿನಕಾಯಿ ಹಾಲು, ಮೊಟ್ಟೆ, ಎಕ್ಸ್‌ಟ್ರಾ ವರ್ಜಿನ್ ಆಲಿವ್ ತೈಲ, ಆರ್ಗನ್ ತೈಲ ತೆಂಗಿನ ಎಣ್ಣೆ ಈ ಎಲ್ಲ ಸಾಮಗ್ರಿಗಳ ಮಿಶ್ರಣವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಕೂದಲಿಗೆ ಲೇಪನ ಮಾಡುವುದರಿಂದ ರಕ್ತ ಪರಿಚಲನೆ ಸರಿಯಾಗಿ ಆಗುತ್ತದೆ.
· ಕೂದಲು ಸದೃಢವಾಗಿ ಬೆಳೆಯುವುದಕ್ಕೆ ಪ್ರೊಟೀನ್‌ಮಿಶ್ರಣ ಉಪಯುಕ್ತವಾಗಿದೆ.
· ತೆಂಗಿನಕಾಯಿ ಹಾಲಿನಲ್ಲಿರುವ ಕಬ್ಬಿಣ ಮತ್ತು ಮ್ಯಾಂಗನೀಸ್ ಅಂಶ ಕೂದಲಿನ ಪೋಷಣೆಗೆ ಸಹಾಯಕವಾಗುತ್ತದೆ.
· ಆರೋಗ್ಯಕರ ಕೂದಲು ಬೆಳೆವಣಿಗೆಗೆ ಈ ಪ್ರೊಟೀನ್‌ಮಿಶ್ರಣ ಕೂದಲಿಗೆ ಹೊಳಪು ನೀಡುತ್ತದೆ.