Advertisement

ತೆಂಗಿನ ಮರದಿಂದ ಬಿದ್ದ “ಬಪ್ಪೇರಿಯನ್‌ ತೆಯ್ಯಂ’

11:40 AM Feb 24, 2017 | |

ಕಾಸರಗೋಡು: ಸಂಪ್ರದಾಯದಂತೆ ತೆಂಗಿನ ಮರ ವೇರಿದ್ದ “ಬಪ್ಪೇರಿಯನ್‌’ ಎನ್ನುವ ತೆಯ್ಯಂ (ದೈವ) ಬಿದ್ದು ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.

Advertisement

ಕಣ್ಣೂರು ಜಿಲ್ಲೆಯ ಅಯಿಕೋಡ್‌ನ‌ಲ್ಲಿ ಪಾರಂಪರಿಕವಾಗಿ ನಡೆಯುತ್ತಿರುವ ತೆಯ್ಯಂ ಉತ್ಸವದ ಸಂದರ್ಭದಲ್ಲಿ ಬಪ್ಪೇರಿಯನ್‌ ತೆಯ್ಯಂ ಧರಿಸಿದ್ದ ಸುಮೇಶ್‌ ಪಣಿಕ್ಕರ್‌ ಆಯತಪ್ಪಿ ತೆಂಗಿನ ಮರದಿಂದ ಬಿದ್ದು, ಗಂಭೀರ ಗಾಯಗೊಂಡಿದ್ದಾರೆ. 

ಮಿನ್‌ಕುನ್ನು ಮುಪೆ#àರಿಯನ್‌ ವಯನಾಟು ಕುಲವನ್‌ ದೈವಸ್ಥಾನದಲ್ಲಿ ನಡೆದ ಭೂತ ಕೋಲ ಪ್ರದರ್ಶನದ ವೇಳೆ ಕೆಳಗೆ ಬಿದ್ದಿದ್ದಾರೆ. ತೆಂಗಿನ ಮರದ ಬುಡದಲ್ಲಿ ಹಾಕಲಾಗಿದ್ದ ಬೆಂಕಿಯ ಕೆಂಡದ ಮೇಲೆ ಬಿದ್ದು ಮೈಕೈ ಸುಟ್ಟ ಗಾಯಗಳಾಗಿವೆ. ಅಲ್ಲದೆ ಕಾಲಿನ ಮೂಳೆ ಮುರಿದಿದೆ. ಗಂಭೀರ ಗಾಯಗೊಂಡ ಅವರನ್ನು ಕಣ್ಣೂರಿನ ಆಸ್ಪತ್ರೆಗೆ ಕೊಂಡೊಯ್ದು ಆ ಬಳಿಕ ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಯಿತು. ಬಪ್ಪೇರಿಯನ್‌ ಭೂತ ಕೋಲದ ಸಂದರ್ಭದಲ್ಲಿ ತೆಂಗಿನ ಮರವೇರಿ ಆವೇಶ ಪ್ರದರ್ಶಿಸುವುದು ರೂಢಿ. ಇದೇ ಸಂದರ್ಭದಲ್ಲಿ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಸುಮಾರು 10 ಮೀಟರ್‌ ಎತ್ತರದ ತೆಂಗಿನ ಮರ ವೇರಿದ್ದು ಕೆಳಗ್ಗೆ ಬಿದ್ದ ಸುಮೇಶ್‌ ಅವರನ್ನು ಪೊಲೀಸರು ಮತ್ತು ಸ್ಥಳೀಯರು ಬೆಂಕಿಯ ಕೆಂಡದಿಂದ ರಕ್ಷಿಸಿ ಆಸ್ಪತ್ರೆಗೆ ಕೊಂಡೊಯ್ದರು. ಸುಮೇಶ್‌ ಕಳೆದ 20 ವರ್ಷಗಳಿಂದ ದೈವ ಕಟ್ಟುತ್ತಿದ್ದು ಇದು ಪ್ರಥಮವಾಗಿ ಅವಘಡ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next