Advertisement

ಎಳನೀರು ಕೆತ್ತುವ ಯಂತ್ರ

10:27 PM Oct 19, 2019 | mahesh |

ದೇಹವನ್ನು ತಂಪಾಗಿರಿಸಲು ಎಳನೀರಿಗಿಂತ ಉತ್ತಮವಾದ, ಹಿತಕರವಾದ ಪೇಯ ಇನ್ನೊಂದಿಲ್ಲ. ರಸ್ತೆ ಬದಿ ಎಳನೀರನ್ನು ಮಾರುವವರನ್ನು ನೋಡಿರುತ್ತೀರಿ. ಗ್ರಾಹಕರು ಕೇಳಿದಾಗ ಕೈಯಾರೆ ಎಳನೀರನ್ನು ಕೆತ್ತಿ ಕುಡಿಯಲು ಕೊಡುತ್ತಾರೆ. ಎಳನೀರನ್ನು ಕೆತ್ತುವ ಯಂತ್ರವೂ ಮಾರುಕಟ್ಟೆಯಲ್ಲಿ ಸಿಗುತ್ತದೆ ಎಂದರೆ ಕೆಲವರಿಗಾದರೂ ಅಚ್ಚರಿಯಾಗುತ್ತದೆ. ಮೊದಲಿಗೆ ಎಳನೀರನ್ನು ಇಡುವ ಸ್ಥಾನದಲ್ಲಿಟ್ಟು, ಯಂತ್ರದ ಚೂಪು ಮೊಳೆಗಳನ್ನು ತೆಂಗಿನಕಾಯಿಯ ಕೆಳಭಾಗ ಮತ್ತು ಮೇಲ್ಭಾಗ ತೂರಿಸಿದರೆ ಎಳನೀರು ಭದ್ರವಾಗಿ ಅಲ್ಲಾಡದೆ ಕೂರುತ್ತದೆ. ಈಗ ಯಂತ್ರವನ್ನು ಚಾಲೂ ಮಾಡಿದರೆ ಜೋಡಿಸಿದ ಮೊಳೆಗಳು ತಿರುಗಲು ಶುರುಮಾಡುತ್ತದೆ. ಈಗ ಬ್ಲೇಡನ್ನು ಸೂಚನೆಯಂತೆ ಮುಟ್ಟಿಸುವುದರಿಂದ ಎಳನೀರು ಚಿತ್ರದಲ್ಲಿ ತೋರಿಸಿರುವಂತೆ ಕೆತ್ತಲ್ಪಡುತ್ತವೆ. ನೋಡಲೂ ಆಕರ್ಷಕ ಮತ್ತು ಕೈಯಲ್ಲಿ ಹಿಡಿದುಕೊಳ್ಳಲೂ ಅನುಕೂಲ. ಮಾರುಕಟ್ಟೆಯಲ್ಲಿ ಈ ಯಂತ್ರದ ಅನೇಕ ಮಾದರಿಗಳು ಲಭ್ಯ ಇವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next