Advertisement

ಕೋಚಿಮಲ್‌ ಚುನಾವಣೆಯಲ್ಲಿ ಕೈ ಪ್ರಾಬಲ್ಯ

12:15 PM May 14, 2019 | Team Udayavani |

ಕೋಲಾರ: ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಆಡಳಿತ ಮಂಡಳಿಯ 9 ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ 6 ಹಾಗೂಜೆಡಿಎಸ್‌ನ 2 ಹಾಗೂ ಚಿಂತಾಮಣಿ ಮಾಜಿಶಾಸಕ ಸುಧಾಕರ್‌ ಬಣದ ಓರ್ವಅಭ್ಯರ್ಥಿ ಆಯ್ಕೆಯಾಗಿದ್ದು,ಈಗಾಗಲೇ 4 ಮಂದಿ ಅವಿರೋಧಆಯ್ಕೆಯಾಗಿರುವುದರೊಂದಿಗೆಒಕ್ಕೂಟದಲ್ಲಿ 10 ಸ್ಥಾನಗಳೊಂದಿಗೆ ಕಾಂಗ್ರೆಸ್‌ ಪ್ರಾಬಲ್ಯ ಮೆರೆದಿದೆ.ಒಟ್ಟು 13 ಸ್ಥಾನಗಳ ಪೈಕಿ ನಾಲ್ಕುಸ್ಥಾನಗಳಿಗೆ ಅವಿರೋಧ ಆಯ್ಕೆ ನಂತರ ಉಳಿದ 9 ಸ್ಥಾನಗಳಿಗೆ ಇಂದು ಚುನಾವಣೆ ನಡೆದಿದ್ದು, ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ ಕೋಲಾರ ಕ್ಷೇತ್ರದ ಡಿ.ವಿ.ಹರೀಶ್‌, ಶ್ರೀನಿವಾಸಪುರ ಕ್ಷೇತ್ರದ ಹನುಮೇಶ್‌, ಮಹಿಳಾ ಕ್ಷೇತ್ರದಿಂದ ಕಾಂತಮ್ಮ, ಶಿಢಘಟ್ಟದಿಂದ ಶ್ರೀನಿವಾಸ್‌, ಮಾಲೂರಿನಿಂದ ಕೆ.ವೈ.ನಂಜೇಗೌಡ, ಬಾಗೇಪಲ್ಲಿನಮಂಜುನಾಥರೆಡ್ಡಿ ಆಯ್ಕೆಯಾದರು.
ಚಿಂತಾಮಣಿ ತಾಲೂಕಿನಿಂದ ಮಾಜಿ ಶಾಸಕ ಸುಧಾಕರ್‌ ಬಣದಿಂದಕಣಕ್ಕಿಳಿದಿದ್ದ ಅಶ್ವತ್ಥ್ನಾರಾಯಣರೆಡ್ಡಿ ಹಾಗೂ ಜೆಡಿಎಸ್‌ನ ಇಬ್ಬರು ಆಯ್ಕೆಯಾಗಿದ್ದು, ಮುಳಬಾಗಿಲು ಕ್ಷೇತ್ರದಿಂದ ಕಾಡೇನಹಳ್ಳಿ ನಾಗರಾಜ್‌,
ಚಿಕ್ಕಬಳ್ಳಾಪುರದ ವೆಂಕಟೇಶ್‌ ಆಯ್ಕೆಯಾಗಿದ್ದಾರೆ. ಈಗಾಗಲೇ ಬಂಗಾರಪೇಟೆ ಕ್ಷೇತ್ರದಿಂದ ಕಾಂಗ್ರೆಸ್‌ನ ಜಯಸಿಂಹ ಕೃಷ್ಣಪ್ಪ, ಗೌರಿಬಿದನೂರಿನಿಂದ ಕಾಂತರಾಜು,ಗುಡಿಬಂಡೆಯ ಅಶ್ವತ್ಥ್ ರೆಡ್ಡಿ, ಮಹಿಳಾ ಕ್ಷೇತ್ರದಿಂದ ಸುನಂದಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

ತೀವ್ರ ಜಿದ್ದಾಜಿದ್ದಿನ ಕಣ: ತೀವ್ರ ಜಿದ್ದಾಜಿದ್ದಿನ ಚುನಾವಣೆ ನಡೆದಿದ್ದು, ಭಾರಿ ಪ್ರಮಾಣದ ಹಣ, ಚಿನ್ನಾಭರಣ,ಬುಲೆಟ್‌, ದ್ವಿಚಕ್ರವಾಹನ ಸೇರಿ ಮತದಾರರಿಗೆ ಪ್ರವಾಸಭಾಗ್ಯವನ್ನು ಕಲ್ಪಿಸಲಾಗಿತ್ತು. ಶತಾಯಗತಾಯ ಗೆಲ್ಲುವ ಆಶಯದೊಂದಿಗೆ
ಕಣಕ್ಕಿಳಿದಿದ್ದ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಬೆಂಬಲಿತ ರಾಜೇಂದ್ರಗೌಡ, ಮಹಿಳಾ ಅಭ್ಯರ್ಥಿ ಎಸ್‌.ಪ್ರಭಾವತಿ, ಜೆಡಿಎಸ್‌ ಮಾಜಿ ಶಾಸಕ ಮಂಜುನಾಥಗೌಡರ ಬೆಂಬಲದಿಂದ ಕಣಕ್ಕಿಳಿದಿದ್ದ ಡಾ.ಪ್ರಸನ್ನ ಸೋಲುಂಡಿದ್ದಾರೆ.

ಪಟಾಕಿ ಸಿಡಿಸಿ ವಿಜಯೋತ್ಸವ: ಮತದಾನ ಬೆಳಗ್ಗೆ 9 ಗಂಟೆಯಿಂದ 4ರವರೆಗೂ ನಡೆದಿದ್ದು, ಸಂಜೆ ಮತ ಎಣಿಕೆ ನಡೆಯಿತು. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ನಗರದ ಗೋಕುಲ ವಿದ್ಯಾಸಂಸ್ಥೆ ಸುತ್ತ ಆಗಮಿಸಿದ್ದ ಅಭ್ಯರ್ಥಿಗಳ ನೂರಾರು ಅಭಿಮಾನಿಗಳು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ತೀವ್ರ ಪ್ರತಿಷ್ಠೆಯ ಕಣಗಳಾಗಿದ್ದ ಕೋಲಾರ ಕ್ಷೇತ್ರದಲ್ಲಿ ಡಿ.ವಿ.ಹರೀಶ್‌, ಶ್ರೀನಿವಾಸಪುರದಲ್ಲಿ ಹನುಮೇಶ್‌, ಮಾಲೂರಿನ ಶಾಸಕ ಕೆ.ವೈ.ನಂಜೇಗೌಡರ ಬೆಂಬಲಿಗರು ಅಪಾರ ಪ್ರಮಾಣದಲ್ಲಿ ಜಮಾಯಿಸಿದ್ದರು.ಗೆಲುವು ಘೋಷಣೆಯಾಗಿ ಅಭ್ಯರ್ಥಿಗಳು ಹೊರ ಬರುತ್ತಿದ್ದಂತೆ ಅಭಿಮಾನಿಗಳು ಅವರನ್ನು ಹೆಗಲ ಮೇಲೆ ಹೊತ್ತುಮೆರವಣಿಗೆ ಮಾಡಿ ಸಂಭ್ರಮಿಸಿದರು.

ಮಹಿಳಾ ಮೀಸಲು: ಕೋಲಾರ ಮಹಿಳಾ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕಾಂತಮ್ಮಆರ್‌. 23 ಮತ ಪಡೆದು ವಿಜಯಿಯಾಗಿದ್ದು, ಪ್ರತಿಸ್ಪರ್ಧಿ ಪ್ರಭಾವತಿ ಎಸ್‌. 22 ಮತಪಡೆದು ಸೋಲುಂಡರೆ, ಮತ್ತೂಬ್ಬ ಅಭ್ಯರ್ಥಿ ರತ್ನಮ್ಮ 5 ಹಾಗೂ ಶಾಂತಮ್ಮಶೂನ್ಯಮತ ಪಡೆದರು. 9 ಕ್ಷೇತ್ರಗಳಿಗೆ ಒಟ್ಟು ಚಲಾವಣೆಯ ಮತಗಳು 1,312 ಮತ್ತುತಿರಸ್ಕೃತ 7 ಆಗಿದ್ದವು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next