Advertisement

ಕೋಕಾ ಕೋಲಾ ಗೊತ್ತಿರಲೇಬೇಕು

08:55 PM Feb 23, 2020 | Sriram |

ಜಗತ್ತಿನ ಯಾವುದೇ ಪ್ರಾಂತ್ಯದಲ್ಲಿ ಕಂಡು ಬರುವ ಆಚರಣೆ, ಆಹಾರ ವೈವಿಧ್ಯ ಅಲ್ಲಿಗೆ ಮಾತ್ರ ಸೀಮಿತವಾಗಿರುತ್ತದೆ. ಹೀಗಾಗಿ ಅವುಗಳ ಬಗ್ಗೆ ತಿಳಿದಾಗ ನಮಗೆ ಅಚ್ಚರಿಯಾಗುತ್ತದೆ.

Advertisement

ಹೀಗೂ ಉಂಟೇ ಎಂದು ಮೂಗಿನ ಮೇಲೆ ಬೆರಳಿಡುತ್ತೇವೆ ನಾವು. ಹಾಗೆಂದ ಮಾತ್ರಕ್ಕೆ ಪಾಶ್ಚಾತ್ಯರಿಗೂ ಪಾಶ್ಚಿಮಾತ್ಯರಿಗೂ ನಡುವೆ ಸಮಾನವಾದ ಅಂಶ ಇಲ್ಲವೆಂದಲ್ಲ. ಇವೆ. ಈಗಂತೂ ತಂತ್ರಜ್ಞಾನದಿಂದಾಗಿ ಜಗತ್ತೇ ಒಂದು ಹಳ್ಳಿ ಎಂಬ ಪ್ರತಿಮೆಯ ಬಳಕೆಯನ್ನು ನೀವು ಗಮನಿಸಿರಬಹುದು. ಕೋಕೋ ಕೋಲಾ ಪೇಯ ನಿಮಗೆಲ್ಲರಿಗೂ ಗೊತ್ತೇ ಇರುತ್ತದೆ. ಅದನ್ನು ಒಂದು ಬಾರಿಯಾದರೂ ಕುಡಿದೇ ಇರುತ್ತೀರಿ. ದೇಶ ಭಾಷೆ ಗಡಿಗಳನ್ನು ಮೀರಿದ ಉತ್ಪನ್ನಗಳಲ್ಲಿ ಕೋಕಾ ಕೋಲ ಮುಂಚೂಣಿಯಲ್ಲಿ ನಿಲ್ಲುತ್ತದೆ. ಏಕೆಂದರೆ, ಜಗತ್ತಿನ ಶೇ. 94ರಷ್ಟು ಜನರಿಗೆ ಕೋಕಾ ಕೋಲಾ ಪೇಯದ ಪರಿಚಯವಿದೆಯಂತೆ. ಇನ್ನೂ ನಿಖರವಾಗಿ ಹೇಳಬೇಕೆಂದರೆ, ಕೋಕಾ ಕೋಲಾದ ಕೆಂಪು- ಬಿಳಿ ಬಣ್ಣದ ಲೋಗೋವನ್ನು ಜಗತ್ತಿನ ಶೇ. 94ರಷ್ಟು ಮಂದಿ ಗುರುತು ಹಿಡಿಯುತ್ತಾರೆ. ಇದು ಅತ್ಯಂತ ಸೋಜಿಗದ ಸಂಗತಿಯೇ ಸರಿ. ಜಗತ್ತಿನ ಯಾವುದೇ ಪ್ರಾಂತ್ಯದ ಯಾವುದೇ ಮೂಲೆಯಲ್ಲೂ ಜನರು ಅರ್ಥ ಮಾಡಿಕೊಳ್ಳುವ ಪದಗಳಲ್ಲಿ ಎರಡನೆಯ ಸ್ಥಾನ ಕೋಕಾ ಕೋಲಾದು. ಮೊದಲನೆಯದು “ಓಕೆ’.

Advertisement

Udayavani is now on Telegram. Click here to join our channel and stay updated with the latest news.

Next