Advertisement
ಕಾನೂನು ಅಧಿಕಾರಿ ವಿರುದ್ಧ ಟೀಕೆ:ಇನ್ನೊಂದೆಡೆ, ಟ್ವಿಟರ್ ಮುಖ್ಯ ಕಾನೂನು ಅಧಿಕಾರಿ, ಭಾರತೀಯ ಮೂಲದ ವಿಜಯ ಗಡ್ಡೆ ವಿರುದ್ಧವೂ ಹರಿಹಾಯ್ದಿದ್ದಾರೆ. “ವಿಜಯ ಗಡ್ಡೆ ಟ್ವಿಟರ್ ಸಂಸ್ಥೆಯನ್ನು ಮಸ್ಕ್ ಖರೀದಿಸಿದ್ದ ಬಗ್ಗೆ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ’ ಎಂದು ಲೇಖಕ ಸಾಗರ್ ಎಂಜೆಟಿ ಮಾಡಿದ್ದ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮಸ್ಕ್, “ಹಂಟರ್ ಬೈಡೆನ್ (ಅಮೆರಿಕ ಅಧ್ಯಕ್ಷರ ಪುತ್ರ) ಬಗ್ಗೆ ಸತ್ಯ ಸುದ್ದಿಯನ್ನು ಬರೆದಿದ್ದ ಮಾಧ್ಯಮ ಸಂಸ್ಥೆ (ದ ನ್ಯೂಯಾರ್ಕ್ ಪೋಸ್ಟ್)ಯ ಟ್ವಿಟರ್ ಖಾತೆಯನ್ನು ಸಸ್ಪೆಂಡ್ ಮಾಡಿದ್ದು ಸರಿಯಲ್ಲ’ ಎಂದು ಟೀಕಿಸಿದ್ದಾರೆ. ಇದರ ಜತೆಗೆ ಟ್ವಿಟರ್‌ನಲ್ಲಿ ಡೈರೆಕ್ಟ್ ಮೆಸೇಜ್ ವ್ಯವಸ್ಥೆ ಬಲಪಡಿಸಲು ಎನ್‌ಕ್ರಿಪ್ಶನ್‌ಗೆ ಒಳಪಡಿಸಬೇಕು. ಇದರಿಂದಾಗಿ ಅದು ಸುರಕ್ಷಿತವಾಗಿರಲಿದೆ ಎಂದೂ ಬರೆದುಕೊಂಡಿದ್ದಾರೆ ಮಸ್ಕ್.