Advertisement

Snake ಕುಂಬಳೆ: ನಾಗರ ಹಾವು ಕಡಿತ; ಮಹಿಳೆ ಸಾವು

11:15 PM Jul 04, 2024 | Team Udayavani |

ಕುಂಬಳೆ: ನಾಗರ ಹಾವು ಕಡಿತಕ್ಕೊಳಗಾಗಿ ಪೈವಳಿಕೆ ಕುರುಡಪದವು ನಿವಾಸಿ ದಿ| ಮಾಂಕು ಅವರ ಪತ್ನಿ ಚೋಮು (64) ಮೃತಪಟ್ಟಿದ್ದಾರೆ.

Advertisement

ಬುಧವಾರ ರಾತ್ರಿ ನಿದ್ರಿಸಿದ್ದ ಅವರಿಗೆ 12 ಗಂಟೆ ವೇಳೆಗೆ ಯಾವುದೋ ಜೀವಿ ಕೈಗೆ ಕಚ್ಚಿದಂತಾಗಿ ಎಚ್ಚರವಾಗಿತ್ತು. ಕೊಠಡಿಯೊಳಗೆ ಹುಡುಕಾಡಿದರೂ ಯಾವುದೇ ಜೀವಿ ಕಾಣಿಸಲಿಲ್ಲ. ಬಳಿಕ ಸಹೋದರನಿಗೆ ವಿಷಯ ತಿಳಿಸಿದ್ದರು. ಅವರು ಬಂದು ಗಾಯವನ್ನು ಗಮನಿಸಿದಾಗ ಅದು ಹಾವಿನ ಕಡಿತವೆಂದು ಸಂಶಯ ಮೂಡಿತು. ಹುಡುಕಿದಾಗ ಮತ್ತೂಂದು ಕೊಠಡಿಯೊಳಗೆ ನಾಗರ ಹಾವು ಕಂಡು ಬಂದ ಕಾರಣ ಅದುವೇ ಕಡಿದಿರುವುದು ಎಂದು ದೃಢಪಟ್ಟಿತು.

ತತ್‌ಕ್ಷಣವೇ ನೆರೆಮನೆಯವರ ಸಹಾಯದಿಂದ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ಮಾಡಿದರೂ ದಾರಿ ಮಧ್ಯೆ ಸಾವು ಸಂಭವಿಸಿತು.

ನಾಗರ ಹಾವನ್ನು ಹಾವು ಹಿಡಿಯುವವರು ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next