Advertisement
ತಾಲೂಕಿನ ಪ್ರಮುಖ ನಾಗ ಸಾನ್ನಿಧ್ಯ ದೇವಸ್ಥಾನಗಳಾದ ನಿಂಜೂರು ಹಾಗೂ ಸೂಡದಲ್ಲಿ ಮುಂಜಾನೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ತನು-ತಂಬಿಲ ಅರ್ಪಿಸಿದರು. ಕಾರ್ಕಳ ಶಿವತಿಕೆರೆ ದೇವಸ್ಥಾನ, ಪರಪು ನಾಗ ಬ್ರಹ್ಮ ಸ್ಥಾನ, ಕುಕ್ಕುಂದೂರು ದೇವಸ್ಥಾನ, ಸಾಂತ್ರಬೆಟ್ಟು ನಾಗ ಸ್ಥಾನ, ಪೆರ್ವಾಜೆ ದೇವಸ್ಥಾನ, ಅನಂತಪದ್ಮನಾಭ ದೇವಸ್ಥಾನ ಕಾರ್ಕಳ, ನಂದಳಿಕೆ ದೇವಸ್ಥಾನ, ಕೆರ್ವಾಶೆ ದೇವಸ್ಥಾನ, ಅಂಡಾರು ಕರಿಯಾಲು ಮತ್ತು ಕರ್ವಾಲು ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದವು.
Related Articles
Advertisement
ಐತಿಹಾಸಿಕ ನಾಲ್ಕುಸ್ಥಾನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇಗುಲದ ನಾಗ ಸನ್ನಿಧಿಯಲ್ಲಿ ಸೋಮವಾರ ನಾಗರ ಪಂಚಮಿ ಆಚರಿಸಲಾಯಿತು. ಭಕ್ತರು ತನು, ತಂಬಿಲ ಸಲ್ಲಿಸಿದರು. ದೇವಾಲಯದ ಪಡು ನಾಗಬನ, ಮೂಡು ನಾಗಬನ ಹಾಗೂ ಬಲ್ಲೇಶ್ವರ ನಾಗಬನದಲ್ಲಿ ವಿಶೇಷ ಪೂಜೆಗಳು ನಡೆದವು. ನಂದಳಿಕೆ ಚಾವಡಿ ಅರಮನೆ ಸುಂದರ್‌ರಾಮ್ ಹೆಗ್ಡೆ, ಚಾವಡಿ ಅರಮನೆ ಸುಹಾಸ್ ಹೆಗ್ಡೆ, ಪ್ರಧಾನ ಅರ್ಚಕ ಹರೀಶ್ ತಂತ್ರಿ, ದೇವಾಲಯದ ವ್ಯವಸ್ಥಾಪಕ ರವಿರಾಜ್ ಭಟ್ ಉಪಸ್ಥಿತರಿದ್ದರು.
ಬೆಳ್ಮಣ್: ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಾಗಸನ್ನಿಧಿಯಲ್ಲಿ ನಾಗರ ಪಂಚಮಿ ಪೂಜೆ ಅರ್ಚಕ ಸೂಡ ಶ್ರೀಶ ಭಟ್ ಅವರ ನೇತೃತ್ವದಲ್ಲಿ ನೆರವೇರಿತು. ದೇವಸ್ಥಾನದ ಆನುವಂಶಿಕ ಮೊಕ್ತೇಸರ ಶಿರ್ವ ಕೋಡು ಜಯಶೀಲ ಹೆಗ್ಡೆ ಮತ್ತು ಸಾವಿರಾರು ಭಕ್ತರು ಪೂಜೆ ಹಾಗೂ ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದ್ದರು.