ಓಡಿಸ್ಸಾ: ಆನ್ಲೈನ್ ನಲ್ಲಿ ಯಾವುದೇ ವಸ್ತುವನ್ನು ಆರ್ಡರ್ ಮಾಡಿದಾಗ ಅಪ್ಪಿ ತಪ್ಪಿ ನಾವು ಮಾಡಿದ ಆರ್ಡರ್ ಬದಲಾಗಿ ಬೇರೆ ಏನೋ ಬರುತ್ತದೆ. ಕೆಲವೊಮ್ಮೆ ಆನ್ಲೈನ್ ನಲ್ಲಿ ನಾವು ಮೋಸ ಹೋಗುವುದು ಕೂಡ ಇದೆ. ಇದೀಗ ಇಲ್ಲೊಬ್ಬನಿಗೆ ಕೊರಿಯರ್ ಪಾರ್ಸೆಲ್ ನಲ್ಲಿ ಹಾವು ಬಂದಿದೆ ಅಂದರೆ ನೀವೂ ನಂಬುತ್ತೀರಾ?
ಹೌದು ಹೀಗೊಂದು ಘಟನೆ ನಡೆದಿರುವುದು ಓಡಿಸ್ಸಾದಲ್ಲಿ. ಮೃತ್ಯು ಕುಮಾರ್ ಎನ್ನುವವರು ವಿಜಯವಾಡದಿಂದ ಕೆಲವು ದಿನಸಿ ಸಾಮಾನುಗಳನ್ನುಕೊರಿಯರ್ ಮೂಲಕ ಆರ್ಡರ್ ಮಾಡಿರುತ್ತಾನೆ. ತನ್ನ ಕೊರಿಯರ್ ಬಾಕ್ಸ್ ಸರಿಯಾಗಿ ಪ್ಯಾಕ್ ಆಗಿ ಬಂದಿರುತ್ತದೆ ಎಂದು ಕೊಂಡ ಕುಮಾರ್ ಮನೆಗೆ ತಂದು ಬಾಕ್ಸ್ ಅನ್ನು ತೆರೆದು ನೋಡಿದಾಗ ,ಬಾಕ್ಸ್ ಒಳಗೆ ಇದ್ದ ವಸ್ತು ಅನ್ನು ನೋಡಿ ಕುಮಾರ್ ಬೆಚ್ಚಿ ಬೀಳುತ್ತಾನೆ. ಕೊರಿಯಾರ್ ಬಾಕ್ಸ್ ನಲ್ಲಿ ಇದ್ದದ್ದು ನಾಗರ ಹಾವು..!
ವರದಿಯ ಪ್ರಕಾರ ದಿನಸಿ ಸಾಮಾನುಗಳಿದ್ದ ಬಾಕ್ಸ್ ಒಳಗೆ ಇಲಿಯೊಂದು ಒಳ ಹೊಕ್ಕಿದೆ. ಅದೇ ತೂತಿನ ಒಳಗೆ ಇಲಿಯನ್ನು ಹಿಡಿಯಲು ನಾಗರ ಹಾವು ಒಂದು ಒಳಕ್ಕೆ ಸೇರಿದೆ. ಕೊರಿಯರ್ ಬಾಕ್ಸ್ ನಲ್ಲಿದ್ದ ನಾಗರ ಹಾವಿನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 5.5 ಉದ್ದವಿರುವ ನಾಗರ ಹಾವುವನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.