ಪುತ್ತೂರು: ಡಾ| ಶ್ರೀಧರ ಭಂಡಾರಿ ಅವರು ಯಕ್ಷಗಾನ ಕ್ಷೇತ್ರದ ಮೇರು ಕಲಾವಿದ. ಯಕ್ಷಗಾನ ಕಲಾವಿದ ಸೀನಪ್ಪ ಭಂಡಾರಿ ಹಾಗೂ ಸುಂದರಿ ದಂಪತಿಯ ಪುತ್ರನಾಗಿ 1945ರ ಅ. 1ರಂದು ಜನಿಸಿದ ಆವರು, 75ರ ಇಳಿ ವಯಸ್ಸಿನಲ್ಲೂ ಅಗ್ರಗಣ್ಯ ವೇಷಧಾರಿ. ತಮ್ಮ 11ನೇ ವಯಸ್ಸಿನಲ್ಲಿ ತಂದೆಯಿಂದ ತರಬೇತಿ ಪಡೆದು, 1963ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದಲ್ಲಿ ಕಲಾಸೇವೆ ಆರಂಭಿಸಿದರು. 1981ರಿಂದ 88ರ ವರೆಗೆ ಪುತ್ತೂರು ಮಹಾಲಿಂಗೇಶ್ವರ ಎಂಬ ತಮ್ಮ ಸ್ವಂತ ಮೇಳವನ್ನು, 1988ರಲ್ಲಿ ಕಾಂತಾವರ ಮೇಳವನ್ನು ಕಟ್ಟಿ 11 ವರ್ಷ ತಿರುಗಾಟ ನಡೆಸಿದ್ದಾರೆ. 1991ರಲ್ಲಿ ಮತ್ತೆ ಧರ್ಮಸ್ಥಳ ಮೇಳಕ್ಕೆ ಆಗಮಿಸಿ ಅಭಿಮನ್ಯು, ಬಬ್ರುವಾಹನ, ಕೃಷ್ಣ, ಪರಶುರಾಮ ಪಾತ್ರ ನಿರ್ವಹಿಸಿಸುತ್ತಿದ್ದಾರೆ. ಅಮೆರಿಕದ ಬೋಸ್ಟನ್ ವಿ.ವಿ. ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಅವರು ಹೃದಯ ಸಂಬಂಧಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾಗಿ ಆ. 29 ರಂದು ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿದ್ದಾರೆ.
Advertisement
ಲಿಮ್ಕಾ ದಾಖಲೆಡಾ| ಭಂಡಾರಿ 3 ನಿಮಿಷಗಳಲ್ಲಿ 143 ಸುತ್ತು ಧೀಂಗಿಣದ ಮೂಲಕ ಯಕ್ಷಗಾನ ಕ್ಷೇತ್ರದಲ್ಲಿ ವಿನೂತನ ಲಿಮ್ಕಾ ದಾಖಲೆ ಮಾಡಿದ್ದಾರೆ.
ಕುಂದಾಪುರ: ಕೆನಡದಲ್ಲಿ ಈಚೆಗೆ ನಡೆದ ಪವರ್ ಲಿಫ್ಟಿಂಗ್ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಡೆಡ್‌ಲಿಫ್ಟ್‌ನಲ್ಲಿ ಬರೋಬ್ಬರಿ 327.5 ಕೆಜಿ ಭಾರ ಎತ್ತಿ ಕೂಟದ ಹೊಸ ದಾಖಲೆ ನಿರ್ಮಿಸಿದ ಕುಂದಾಪುರ ತಾಲೂಕಿನ ವಿಶ್ವನಾಥ ಭಾಸ್ಕರ ಗಾಣಿಗ ಅವರು, ದೇವಲ್ಕುಂದ ಗ್ರಾಮದ ಬಾಳಿಕೆರೆಯ ಭಾಸ್ಕರ ಗಾಣಿಗ ಹಾಗೂ ಪದ್ಮಾವತಿ ದಂಪತಿಯ ಪುತ್ರ.
Related Articles
Advertisement
ಬೆಂಗಳೂರಿನ ಜಿ.ಟಿ. ನೆಕ್ಸಸ್ ಸಾಫ್ಟ್‌ವೇರ್ ಕಂಪೆನಿಯ ಉದ್ಯೋಗಿ. ಬಡತನದಿಂದಲೇ ಮೇಲೆ ಬಂದ ಅವರು ಕುಟುಂಬದ ಆಧಾರಸ್ತಂಭ. ಈವರೆಗಿನ ಸಾಧನೆಗೆ ಸುಮಾರು 65ರಿಂದ 70 ಲಕ್ಷ ರೂ. ವರೆಗೆ ರಾಜ್ಯ ಸರಕಾರದಿಂದ ನಗದು ಪುರಸ್ಕಾರ ಸಿಗಬೇಕಾಗಿದೆ. ಅದರ ದಾರಿ ಕಾಯುತ್ತಾ ಕುಳಿತಿರುವಾಗಲೇ ಪ್ರಶಸ್ತಿ ಸಂಭ್ರಮ.
ಪ್ರಶಸ್ತಿ ಬಂದದ್ದಕ್ಕೆ ಖುಷಿಯಾಗಿದೆ. ಸರಕಾರ ಕ್ರೀಡಾ ಕ್ಷೇತ್ರದಲ್ಲಿ ನನ್ನನ್ನು ಗುರುತಿಸಿದೆ ಎನ್ನಲು ಹೆಮ್ಮೆಯಾಗುತ್ತಿದೆ. – ವಿಶ್ವನಾಥ ಭಾಸ್ಕರ ಗಾಣಿಗ
ದುಬಾೖಯಲ್ಲಿ ಕನ್ನಡ ಕೇಳಿಸಿದ ಬೀಜಿಉಡುಪಿ : ದುಬಾೖಯಲ್ಲಿ 3 ದಶಕಗಳ ಕಾಲ ಕನ್ನಡ ಸಂಘಟನೆಗಾಗಿ ಶ್ರಮಿಸಿದ ಬಿಜೂರು ಗೋವಿಂದಪ್ಪ ಮೋಹನದಾಸ್ “ಬೀಜಿ’ ಎಂದೇ ಚಿರಪರಿಚಿತರು. ಮಣಿಪಾಲದ ಫಾರ್ಮಸಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಕೆಲ ಕಾಲ ಮಣಿಪಾಲದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ದುಬಾೖಯ ನ್ಯೂ ಮೆಡಿಕಲ್ ಸೆಂಟರ್‌ನಲ್ಲಿ ಫಾರ್ಮಸ್ಯುಟಿಕಲ್ ವಿಭಾಗದ ಮುಖ್ಯಸ್ಥರಾಗಿದ್ದ ಬೀಜಿ ಗಲ್ಫ್ ಮೆಡಿಕಲ್ ವಿ.ವಿ.ಯಲ್ಲಿ ಫಾರ್ಮಸ್ಯುಟಿಕಲ್ ವಿಭಾಗದ ಮುಖ್ಯಸ್ಥರಾಗಿದ್ದರು. ಯುಎಇ ಇಂಡಿಯನ್ ಫಾರ್ಮಾಸ್ಯುಟಿಕಲ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 1985ರಲ್ಲಿ ದುಬಾೖಯಲ್ಲಿ ಕರ್ನಾಟಕ ಸಂಘವನ್ನು ಹುಟ್ಟುಹಾಕಿ, ಸಾಕಷ್ಟು ಕನ್ನಡ ಕಟ್ಟುವ ಕೆಲಸಗಳನ್ನು ಕೈಗೊಂಡರು. 1989ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿ ಹಲವಾರು ಕಾರ್ಯಗಳನ್ನು ಕೈಗೊಂಡರು. ಯುಎಇ ದೇವಾಡಿಗ ಸಂಘ ಸ್ಥಾಪಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ನಿವೃತ್ತಿ ಬಳಿಕ ಮಣಿಪಾಲದಲ್ಲಿದ್ದಾರೆ. ಆಂಗ್ಲ ಭಾಷೆಯಲ್ಲೂ ಅತ್ಯುತ್ತಮ ಹಿಡಿತ ಸಾಧಿಸಿರುವ ಅವರು, ಲೇಖಕರೂ ಹೌದು. ಹಲವು ಅಂತರ್ಜಾಲ ತಾಣಗಳನ್ನೂ ಸೃಷ್ಟಿಸಿದ್ದಾರೆ. ದುಬಾೖಯಲ್ಲಿ ಕನ್ನಡ ಸಂಘಟನೆಗಾಗಿ ಸಲ್ಲಿಸಿದ ಸೇವೆಯನ್ನು ನೆನಪಿಸಿ ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಆಭಾರಿಯಾಗಿದ್ದೇನೆ.-ಜಿ.ಮೋಹನದಾಸ್ ಉದ್ಯಮದ ಶಿಖರವೇರಿದ ಪ್ರಕಾಶ್ ಶೆಟ್ಟಿ
ಉಡುಪಿ : ಮೂಲತಃ ಕೊರಂಗ್ರಪಾಡಿಯವರಾದ ಪ್ರಕಾಶ್ ಶೆಟ್ಟಿ ಹೊಟೇಲ್ ಉದ್ಯಮದಲ್ಲಿ ಮಹತ್ತರ ಸಾಧನೆ ಮಾಡಿದವರು. 1993ರಲ್ಲಿ ಬೆಂಗಳೂರಿನ ಬಂಜಾರ ಹೊಟೇಲ್ ಆರಂಭಿಸಿದ ಅವರು, ಪ್ರಸ್ತುತ ಎಂಆರ್‌ಜಿ ಹಾಸ್ಪಿಟಾಲಿಟಿ ಆ್ಯಂಡ್ ಇನ್‌ಫ್ರಾಸ್ಟ್ರಕ್ಟರ್‌ನ ಚೇರ್‌ಮನ್. ಬೆಂಗಳೂರು, ಮಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ವಿಲಾಸಿ ಹೊಟೇಲ್‌ಗಳನ್ನು ಸ್ಥಾಪಿಸಿದ್ದಾರೆ. ಪ್ರಕಾಶ್ ಶೆಟ್ಟಿಯವರು ದಿ| ಮಾಧವ ಶೆಟ್ಟಿ ಮತ್ತು ರತ್ನಾ ಶೆಟ್ಟಿ ದಂಪತಿಯ ಪುತ್ರ. ಇವರ ಪತ್ನಿ ಆಶಾ ಶೆಟ್ಟಿ ಅವರು ಪಡುಬಿದ್ರಿಯವರು. ಪ್ರಕಾಶ್ ಶೆಟ್ಟಿಯವರು ಸಂಸ್ಥೆಯ ಅಧ್ಯಕ್ಷರಾಗಿದ್ದರೆ, ಪುತ್ರ ಗೌರವ್ ಆಡಳಿತ ನಿರ್ದೇಶಕರು. ಕಾಲೇಜು ಶಿಕ್ಷಣ ಮುಗಿಸಿದ ಬಳಿಕ ಹೊಟೇಲ್ ಉದ್ಯಮದ ಕಡೆಗೆ ಗಮನ ಹರಿಸಿ ಯಶಸ್ವಿಯಾದವರು. ಇವರು ಮೊದಲು ಆರಂಭಿಸಿದ್ದು ಗೌರವ್ ನ್ಪೋರ್ಟ್ಸ್ ಎಂಬ ಉದ್ಯಮವನ್ನು. ಇದರ ಮೂಲಕ ಏಶ್ಯಾಡ್‌ನ ಊಟೋಪಚಾರದ ಅವಕಾಶ ಸಿಕ್ಕಿದಾಗ ಇಲ್ಲಿಂದ ಬಾಣಸಿಗರನ್ನು ಕರೆದುಕೊಂಡು ಹೋಗಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿ ಯಶಸ್ವಿಯಾದರು. ಈಗ ಬಿಲ್ಡರ್ ಸಹ. ಅವರ ಸೇವೆಗೆ ಗ್ಲೋಬಲ… ಅಚೀವರ್ ಫೌಂಡೇಶನ್‌ದಿಂದ ಬೆಸ್ಟ್ ಇಂಟಲೆಕುcವಲ್ ಆವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ರಾಜ್ಯೋತ್ಸವ ಪ್ರಶಸ್ತಿ ನನಗೆ ಸಂದಿರುವುದಕ್ಕೆ ಬಹಳ ಖುಷಿಯಾಗಿದೆ. ಇದು ನಮ್ಮ ಹೊಣೆಗಾರಿಕೆಯನ್ನು ಹೆಚ್ಚಿಸಿದೆ. – ಪ್ರಕಾಶ್ ಶೆಟ್ಟಿ ವಿಶಿಷ್ಟ ಚಿತ್ರ ಕಲಾವಿದ ಯು. ರಮೇಶ ರಾವ್
ಉಡುಪಿ: ವಾಸ್ತವ ಶೈಲಿಯ ವಿಶಿಷ್ಟ ಕಲಾವಿದ ಉಡುಪಿಯ ರಮೇಶ ರಾವ್, ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಬಳàಕ ತಂದೆಯ ಚಿತ್ರಕಲಾ ಬಳುವಳಿಯತ್ತ ಒಲವು ತೋರಿದರು. ತಂದೆ ರಾಮಕೃಷ್ಣ ರಾವ್ ಬೋರ್ಡ್ ಹೈಸ್ಕೂಲ್‌ನಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದರು. ನಿವೃತ್ತಿ ಬಳಿಕ ಪೂರ್ಣಕಾಲಿಕವಾಗಿ ಚಿತ್ರಕಲೆಯಲ್ಲಿ ತೊಡಗಿದ್ದರು. ಅಲಂಕಾರ್ ಚಿತ್ರ ಮಂದಿರದ ಹಿಂಭಾಗ ತಮ್ಮ ಮನೆಯಲ್ಲಿಯೇ ದೃಶ್ಯ ಕಲಾ ಶಾಲೆಯನ್ನು ನಡೆಸಿ, ಸಾವಿರಾರು ಯುವ ಚಿತ್ರ ಕಲಾವಿದರನ್ನು ರೂಪಿಸುತ್ತಿದ್ದಾರೆ. ಹವಾನಿಯಂತ್ರಿತ “ದೃಷ್ಟಿ’ ಗ್ಯಾಲರಿ ಸ್ಥಾಪಿಸಿ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದಾರೆ. ಆರ್ಟಿಸ್ಟ್ಸ್ ಫೋರಂ ಸಂಘಟನೆ ಸ್ಥಾಪಕಾಧ್ಯಕ್ಷರಾಗಿ, ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ದಿಲ್ಲಿಯ ಅಂಪಾರ್ ಜೈಲ್‌ನಲ್ಲಿ ತಿಹಾರ್ ಕಲಾ ಶಿಬಿರದಲ್ಲಿ ತರಬೇತಿದಾರರಾಗಿದ್ದರು. ದೇಶದ 20ಕ್ಕೂ ಹೆಚ್ಚು ಕಡೆ ಸಹಾಯಾರ್ಥ ಕಲಾ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ. ಕರ್ನಾಟಕ, ಕೇರಳದ ಲಲಿತಾ ಕಲಾ ಅಕಾಡೆಮಿ, ಚೆನ್ನೈನ ಲಲಿತ ಕಲಾ ಅಕಾಡೆಮಿಯ ಪ್ರಾದೇಶಿಕ ಕೇಂದ್ರ, ಜಿ.ಎಸ್.ಶೆಣೈ ಸ್ಮಾರಕ ಪ್ರಶಸ್ತಿ, ಆಳ್ವಾಸ್ ಚಿತ್ರಸಿರಿ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ನಾವು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಪ್ರಶಸ್ತಿ ತಂತಾನೆ ಬರುತ್ತದೆ ಎಂದು ಯುವ ಪೀಳಿಗೆಗೆ ಹೇಳಲು ಇಚ್ಛಿಸುತ್ತೇನೆ.- ಯು. ರಮೇಶ ರಾವ್ ತಳಿ ತಪಸ್ವಿ ಬಿ.ಕೆ. ದೇವರಾವ್
ಬೆಳ್ತಂಗಡಿ: ಭತ್ತದ 170 ತಳಿಗಳನ್ನು ಸಂಶೋಧಿಸಿ”ತಳಿ ತಪಸ್ವಿ’ ಎನಿಸಿಕೊಂಡವರು ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಅಮೈ ನಿವಾಸಿ ಬಿ.ಕೆ. ದೇವರಾವ್ ಅವರು. ಭತ್ತದ ತಳಿ ನಶಿಸುತ್ತಿರುವ ಸಂದರ್ಭದಲ್ಲಿ 1965ರಿಂದ ಸಾವಯವ ಭತ್ತದ ತಳಿ ಸಂರಕ್ಷಿಸುತ್ತಾ ಬಂದಿದ್ದಾರೆ. ಆರಂಭದಲ್ಲಿ 35ರಲ್ಲಿದ್ದ ತಳಿ ಸಂಖ್ಯೆ ಪ್ರಸಕ್ತ 170ರಷ್ಟಿವೆ.
ಇದಕ್ಕಾಗಿ 5.30 ಎಕ್ರೆ ಕೃಷಿ ಭೂಮಿಯಲ್ಲಿ ಏಣೀಲು (ಮುಂಗಾರು) ಹಾಗೂ ಸುಗ್ಗಿ (ಹಿಂಗಾರು) 2 ಅವಧಿಯಲ್ಲಿ ಪ್ರತಿ ವರ್ಷ ಇಷ್ಟು ತಳಿ ಬೆಳೆಯುತ್ತಿರುವುದು ಕೃಷಿ ಪ್ರೇಮಕ್ಕೆ ಮತ್ತೂಂದು ಸಾಕ್ಷಿ. 75 ರ ಇಳಿ ವಯಸ್ಸಿನಲ್ಲೂ ಕುಂದದ ಅವರ ಕೃಷಿ ಆಸಕ್ತಿಗೆ ಪುತ್ರ ಬಿ.ಕೆ. ಪರಮೇಶ್ವರ್ ರಾವ್ ಅವರು ಬೆಂಗಳೂರಿನ ಬಿಎಚ್‌ಇಎಲ್‌ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಹುದ್ದೆಗೆ ರಾಜೀನಾಮೆ ನೀಡಿ ತಂದೆಯೊಂದಿಗೆ ಸಾಥ್ ನೀಡುತ್ತಿದ್ದಾರೆ. 2002ರಲ್ಲಿ ಭಾರತೀಯ ಕಿಸಾನ್ ಸಂಘದಿಂದ ಪುರುಷೋತ್ತಮ ಪುರಸ್ಕಾರದ ಮೂಲಕ ಆರಂಭಗೊಂಡು, 2017ರಲ್ಲಿ ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ಸೃಷ್ಟಿ ಸಮ್ಮಾನ್ ಸೇರಿದಂತೆ ಸಂಘ ಸಂಸ್ಥೆಗಳಿಂದ ನೂರಾರು ಪ್ರಶಸ್ತಿ ನೀಡಿ ಗೌರವಿಸಿದೆ. ಕೃಷಿಕ ವರ್ಗವನ್ನು ಉತ್ತೇಜಿಸುವ ನಿಟ್ಟಿನಲ್ಲಿ ನೀಡಿರುವ ಪ್ರಶಸ್ತಿಯಾದ್ದರಿಂದ ಕೃಷಿಕ ವರ್ಗಕ್ಕೆ ಸಂದಿರುವ ಗೌರವ ಎಂಬುದು ನನ್ನ ಅಭಿಪ್ರಾಯ.- ಬಿ.ಕೆ. ದೇವರಾವ್ ನೇತ್ರ ತಜ್ಞ ಡಾ| ಕೃಷ್ಣಪ್ರಸಾದ್
ಉಡುಪಿ: “ಪ್ರಸಾದ್ ನೇತ್ರಾಲಯ’ದ ಸ್ಥಾಪಕ ಡಾ| ಕೃಷ್ಣ ಪ್ರಸಾದ್ ಅವರು, ನೇತ್ರ ಚಿಕಿತ್ಸೆ ಕುರಿತು ಜಗತ್ತಿನಲ್ಲಿ ಆಗುತ್ತಿರುವ ಸುಧಾರಿತ ತಂತ್ರಜ್ಞಾನದ ತರಬೇತಿ ಪಡೆದು, ವಿವಿಧೆಡೆ ನಡೆಯುವ ಕಾರ್ಯಾಗಾರ/ ತರಬೇತಿ/ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಲ್ಲದೆ ತಾವೂ ಇಂತಹ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. ದಾವಣಗೆರೆಯಲ್ಲಿ ಎಂಬಿಬಿಎಸ್, ಎಂಎಸ್ ಪದವಿ ಪಡೆದ ಡಾ| ಕೃಷ್ಣ ಪ್ರಸಾದ್, ಅದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಮಂಗಳೂರಿನ ಯೇನಪೊಯ ಮೆಡಿಕಲ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಮಣಿಪಾಲ ಕೆಎಂಸಿಯಲ್ಲಿ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕಣ್ಣಿನ ವಿಭಾಗದ ಮುಖ್ಯಸ್ಥರಾಗಿದ್ದರು. ಪ್ರಸ್ತುತ ಉಡುಪಿ, ಮಂಗಳೂರು, ಸುಳ್ಯ, ತೀರ್ಥಹಳ್ಳಿಯಲ್ಲಿ ಪ್ರಸಾದ್ ನೇತ್ರಾಲಯದಲ್ಲಿ ಹಿರಿಯ ನೇತ್ರತಜ್ಞ ಮತ್ತು ವೈದ್ಯಕೀಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 20 ಲಕ್ಷ ಜನರ ಕಣ್ಣಿನ ತಪಾಸಣೆ ನಡೆಸಿರುವ ಅವರು ಅರ್ಧಾಂಶ ಉಚಿತ ಶಿಬಿರಗಳಲ್ಲಿ ನಡೆಸಿದ್ದಾರೆ. ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್ ಮೂಲಕ ಹಲವಾರು ಶಿಬಿರ ನಡೆಸುತ್ತಿದ್ದಾರೆ. ಸುಮಾರು 3,000 ಕಣ್ಣಿನ ವೈದ್ಯರನ್ನು ಸೇರಿಸಿಕೊಂಡು “ಅಂಧಮುಕ್ತ ಕರ್ನಾಟಕ’ವನ್ನು ರೂಪಿಸಲು ಪ್ರಯತ್ನಿಸುತ್ತೇನೆ. – ಡಾ| ಕೃಷ್ಣಪ್ರಸಾದ್ ಶಿಕ್ಷಣ ಸಾಧಕ ಡಾ| ಕೊಳಂಬೆ ಚಿದಾನಂದ ಗೌಡ
ಸುಳ್ಯ: ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ವೈಸ್ ಚಾನ್ಸಲರ್ ಡಾ| ಕೊಳಂಬೆ ಚಿದಾನಂದ ಗೌಡ ಅವರು ಶಿಕ್ಷಣ ಕ್ಷೇತ್ರದ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿ¨ªಾರೆ. ಮೂಲತಃ ಸುಳ್ಯ ತಾಲೂಕಿನ ಚೊಕ್ಕಾಡಿ ನಿವಾಸಿ ಆಗಿರುವ ಅವರು ರಾಷ್ಟ್ರಕವಿ ಕುವೆಂಪು ಅವರ ದ್ವಿತೀಯ ಪುತ್ರಿ ತಾರಿಣಿ ಅವರನ್ನು ವಿವಾಹವಾಗಿ ಕುವೆಂಪು ಅವರು ವಾಸವಾಗಿದ್ದ ಮೈಸೂರಿನ ನಿವಾಸದಲ್ಲಿ ಪ್ರಸ್ತುತ ವಾಸವಾಗಿದ್ದಾರೆ. ಎಂಜಿನಿಯರಿಂಗ್‌ನಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಉನ್ನತ ಪದವಿ ಪಡೆದಿರುವ ಅವರು ಮೈಸೂರಿನ ಜಯಚಾಮ ರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದರು. 1981-83 ತನಕ ಅಮೆರಿಕದ ನಾಸಾ ಸಂಸ್ಥೆಯಲ್ಲಿ, 1989-90ರಲ್ಲಿ ಪ್ಯಾರಿಸ್ ನಲ್ಲಿ ಸೇವೆ ಸಲ್ಲಿಸಿದ್ದಾರೆ. ಸಾಹಿತಿಯಾಗಿದ್ದ ತಂದೆ ಕೊಳಂಬೆ ಪುಟ್ಟಣ್ಣ ಗೌಡ ಅವರಿಂದ ಪ್ರೇರಣೆ ಪಡೆದಿರುವ ಕೆ. ಚಿದಾನಂದ ಅವರು ಸುಮಾರು 12ಕ್ಕೂ ಅಧಿಕ ಕೃತಿ ರಚಿಸಿದ್ದಾರೆ. ಅವರಿಗೆ ಓರ್ವ ಪುತ್ರಿ ಇದ್ದು ವಿವಾಹದ ತರುವಾಯ ಅಮೆರಿಕದಲ್ಲಿ ನೆಲೆಸಿದ್ದಾರೆ. ನಾನು ಅಮೆರಿಕದಲ್ಲಿ ಪುತ್ರಿಯೊಂದಿಗೆ ಇದ್ದೇನೆ. ನನ್ನ ಸೇವೆ ಗುರುತಿಸಿ ಈ ಗೌರವ ಸಿಕ್ಕಿದೆ ಎಂದು ಭಾವಿಸುತ್ತೇನೆ. – ಡಾ| ಚಿದಾನಂದ ಗೌಡ ಕೊಳಂಬೆ