Advertisement
ಆದರೆ 21 ಹೆಕ್ಟೇರ್ ಹೆಚ್ಚುವರಿ ಭರ್ತಿ ಮಾಡಲು ಮಹಾರಾಷ್ಟ್ರ ಸಾಗರ ಪ್ರದೇಶ ನಿರ್ವಹಣ ಪ್ರಾಧಿಕಾರದಿಂದ ಅನುಮತಿ ಪಡೆದಿದ್ದರೂ ಕೇಂದ್ರ ಸರಕಾರದಿಂದ ಇನ್ನೂ ಅನುಮತಿ ಸಿಗದ ಕಾರಣ ಹೆಚ್ಚುವರಿ ಭರ್ತಿ ಮಾಡುವ ಕೆಲಸ ಇನ್ನೂ ಪ್ರಾರಂಭವಾಗಿಲ್ಲ.ಪುರಸಭೆಯು ಪ್ರಿನ್ಸಸ್ ಸ್ಟ್ರೀಟ್‌ನಿಂದ ಬಾಂದ್ರಾ ವರ್ಲಿ ಸೀ ಲಿಂಕ್ ದಕ್ಷಿಣ ತುದಿಗೆ 10.58 ಕಿ. ಮೀ. ಕರಾವಳಿ ರಸ್ತೆಯನ್ನು ನಿರ್ಮಿಸುತ್ತಿದೆ.
Related Articles
Advertisement
ಈ ಯಂತ್ರವು ಒಂದೂವರೆ ತಿಂಗಳಲ್ಲಿ 90 ಮೀ. ಸುರಂಗವನ್ನು ಕೊರೆದಿದೆ. ಯಂತ್ರವು ಆರಂಭ ದಲ್ಲಿ ವೇಗವನ್ನು ತೆಗೆದುಕೊಳ್ಳಲಿಲ್ಲ ಈಗ ಯಂತ್ರ ವೇಗವಾಗಿ ಚಲಿಸುತ್ತಿದೆ. ಇದು ಎರಡೂ ಸುರಂಗಗಳಿಗೆ 20 ತಿಂಗಳು ತೆಗೆದುಕೊಳ್ಳುತ್ತದೆ ಎಂದು ಪುರಸಭೆ ಅಧಿಕಾರಿ ತಿಳಿಸಿದ್ದಾರೆ.
ಅನುಮತಿಯಲ್ಲಿ ವಿಳಂಬ :
ಮೂಲ ಯೋಜನೆಯ ಪ್ರಕಾರ ಯೋಜನೆ ಗಾಗಿ 90 ಹೆಕ್ಟೇರ್‌ವರೆಗೆ ಭರ್ತಿ ಮಾಡಲು ಈಗಾಗಲೇ ಅನುಮತಿ ಪಡೆಯಲಾಗಿದೆ. ಇನ್ನೂ 21 ಹೆಕ್ಟೇರ್ ಭರ್ತಿ ಮಾಡಬೇಕಾಗಿದ್ದು, ಸುಮಾರು 111 ಹೆಕ್ಟೇರ್ ಭೂಮಿಯನ್ನು ರಚಿಸಲಾಗುವು ದು. ಇದು ಮಹಾರಾಷ್ಟ್ರ ಸಾಗರ ಪ್ರದೇಶ ನಿರ್ವಹಣಾ ಪ್ರಾಧಿಕಾರದಿಂದ ಅನುಮತಿ ಪಡೆದಿದ್ದು, ಭೂ ವಿಜ್ಞಾನ ಸಚಿವಾಲಯದ ಅನುಮೋದನೆಗಾಗಿ ಕಾಯುತ್ತಿದೆ. ಈ ನಿಟ್ಟಿನಲ್ಲಿ ಇನ್ನೂ ಯಾವುದೇ ಸಭೆ ನಡೆದಿಲ್ಲವಾದ್ದರಿಂದ ಅನುಮತಿ ಪಡೆಯಲು ಸಾಧ್ಯವಾಗಿಲ್ಲ ಎಂದು ಕರಾವಳಿ ಮಾರ್ಗದ ಮುಖ್ಯ ಎಂಜಿನಿಯರ್ ವಿಜಯ್ ನಿಘೋಟ್ ಹೇಳಿದ್ದಾರೆ.
ಒಟ್ಟು 11 ಸುರಂಗಗಳ ನಿರ್ಮಾಣ :
ಮಾವ್ಲಾ ಯಂತ್ರ ಮತ್ತು ಇತ್ತೀಚೆಗಿನ ತಂತ್ರಜ್ಞಾನದ ಸಹಾಯದಿಂದ ಭೂಗರ್ಭದಲ್ಲಿ 10 ಮೀಟರ್‌ನಿಂದ 70 ಮೀಟರ್ ಆಳದಲ್ಲಿ ಎರಡು ಸುರಂಗಗಳನ್ನು ನಿರ್ಮಿಸಲಾಗುವುದು. ಸುರಂಗದ ಒಟ್ಟು ವ್ಯಾಸವು 12.19 ಮೀಟರ್ ಮತ್ತು ನಿರ್ಮಾಣ ಪೂರ್ಣಗೊಂಡ ಬಳಿಕ ಸುರಂಗದ ಆಂತರಿಕ ವ್ಯಾಸವು 11 ಮೀಟರ್ ಆಗಿರಲಿದೆ. ಎರಡು ಸುರಂಗಗಳನ್ನು ಸಂಪರ್ಕಿಸುವ ಒಟ್ಟು 11 ಸುರಂಗಗಳು ಇರಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.