ಮಂಗಳೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸ್ಕೌಟ್ಸ್-ಗೈಡ್ಸ್ ಹಾಗೂ ರೋವರ್-ರೇಂಜರ್ನ ಆಯ್ದ ವಿದ್ಯಾರ್ಥಿಗಳಿಗೆ ನೌಕಾದಳದ ನೆರವಿನಿಂದ “ಸೀ ಸ್ಕೌಟ್ಸ್’ ಎಂಬ ವಿಶೇಷ ತರಬೇತಿ ಮಾರ್ಗದರ್ಶನ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರ ಜತೆಗೆ ಅವರು ಮಾತನಾಡಿ, ವಾಯುಸೇನೆಯ ನೆರವಿನಿಂದ ಬೆಂಗಳೂರು, ಬೆಳಗಾ ವಿಯಲ್ಲಿ ಈಗಾಗಲೇ ಏರ್ ಸ್ಕೌಟ್ಸ್ ಆರಂಭಿಸಲಾಗಿದೆ. ಇದೇ ಸ್ವರೂಪದಲ್ಲಿ ಕರಾವಳಿ ಭಾಗದಲ್ಲಿ ನೌಕಾ ಸೇನೆಯ ಕುರಿತಂತೆ ಪ್ರೋ ತ್ಸಾಹಿಸಲು ವಿಶೇಷ ತರ ಬೇತಿ ಕಾರ್ಯ ಕ್ರಮ ರೂಪಿಸ ಲಾಗುವುದು. ವಿದ್ಯಾರ್ಥಿಗಳ ಆಯ್ಕೆ ಹಾಗೂ ತರಬೇತಿ ಸ್ವರೂಪವನ್ನು ಅವಲೋಕಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸದ್ಯ ರಾಜ್ಯದಲ್ಲಿ ಸುಮಾರು 7 ಲಕ್ಷ ಮಕ್ಕಳು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿವಿಧ ಹಂತದಲ್ಲಿದ್ದಾರೆ. ಈ ಶೈಕ್ಷಣಿಕ ಅವಧಿಯಲ್ಲಿ 10 ಲಕ್ಷ ವಿದ್ಯಾರ್ಥಿಗಳನ್ನು ಸೇರಿಸುವ ಉದ್ದೇಶವಿದೆ ಎಂದರು.
ದೇಶದ 300ಕ್ಕೂ ಅಧಿಕ ಜಿಲ್ಲೆಗಳು ವಿಪತ್ತು ಬಾಧಿತ ಜಿಲ್ಲೆಗಳೆಂದು ಕೇಂದ್ರ ಸರಕಾರ ಪಟ್ಟಿ ಮಾಡಿದೆ. ಇದರಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸಹಿತ ರಾಜ್ಯದ 11 ಜಿಲ್ಲೆಗಳು ಸೇರಿವೆ. ಕಂದಾಯ ಇಲಾಖೆಯ ವತಿಯಿಂದ ಇಲ್ಲಿ ವಿಪತ್ತು ನಿರ್ವಹಣ ತಂಡವನ್ನು ರೂಪಿಸಲಾಗುತ್ತಿದೆ. ಇದ ರಂತೆ ಸಂಬಂಧಪಟ್ಟ ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್‌ನ ವಿದ್ಯಾರ್ಥಿಗಳ ಪ್ರತ್ಯೇಕ ತಂಡ ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ಪೂರ್ವಭಾವಿಯಾಗಿ 11 ಜಿಲ್ಲೆಯ ಆಯ್ದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ-ಮಾರ್ಗದರ್ಶನ ನೀಡಲಾಗುತ್ತಿದೆ. ಬಳಿಕ ತರಬೇತಿ ಪಡೆದವರ ಮೂಲಕ ಜಿಲ್ಲೆಯಲ್ಲಿ ಹೊಸ ತಂಡವನ್ನು ರೂಪಿಸಿ ಅವರಿಗೆ ಪ್ರತ್ಯೇಕ ತರಬೇತಿ ನೀಡಿ ಸನ್ನದ್ದಗೊಳಿಸಲಾಗುತ್ತದೆ ಎಂದರು.
50 ಅಂಕ ಮುಂದುವರಿಸಲಿ
ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪ್ರತೀ ಸೆಮಿಸ್ಟರ್‌ಗೆ 50 ಅಂಕಗಳನ್ನು ರೋವರ್-ರೇಂಜರ್ ಕೇಂದ್ರಿತವಾಗಿ ಕಡ್ಡಾಯವಾಗಿ ನೀಡಲಾಗುತ್ತಿತ್ತು. ಇದೀ ಗ ರಾಜ್ಯ ಸರಕಾರ ಎನ್‌ಇಪಿ ಬದಲು ಎಸ್‌ಇಪಿ ಮಾಡುವುದಾದರೆ ನಮ್ಮ ಆಕ್ಷೇಪವೇನಿಲ್ಲ. ಆದರೆ 50 ಅಂಕಗಳನ್ನು ಮುಂದುವರಿಸಬೇಕು. ರಾಜ್ಯ ಪುರಸ್ಕಾರ ಪಡೆದ ವಿದ್ಯಾರ್ಥಿಗಳಿಗೆ ಮೆಡಿಕಲ್‌ನಲ್ಲಿ 50 ಹಾಗೂ ಎಂಜಿನಿಯರಿಂಗ್‌ನಲ್ಲಿ 500 ಸೀಟ್‌ಗಳನ್ನು ಮೀಸಲಿಡಬೇಕು. ರೋವರ್-ರೇಂಜರ್ ವಿದ್ಯಾರ್ಥಿ ಗಳಿಗೆ ಎಲ್ಲ ವಿವಿಗಳಲ್ಲಿಯೂ ಸ್ನಾತಕೋತ್ತರ ತರಗತಿ ಸೇರ್ಪಡೆಗೆ ಮೀಸಲಿಡಬೇಕು ಎಂದು ಸರಕಾರ ಗಮನ ಸೆಳೆಯಲಾಗಿದೆ ಎಂದವರು ವಿವರಿಸಿದರು.