Advertisement
ಮೂಲ ಆಶಯ – ವಾಸ್ತವಸಿಆರ್ಝಡ್ ಮೂಲ ಆಶಯಗಳಲ್ಲಿ ಕರಾವಳಿಯ ಮೂಲ ನಿವಾಸಿಗಳ ಜೀವನ ಕ್ರಮವನ್ನು
ಬೆಂಬಲಿಸುವುದೂ ಒಂದು. ಜೈವಿಕ ಸಮತೋಲನ ಕಾಪಾಡಿಕೊಳ್ಳಲು ಹಾಗೂ ಕರಾವಳಿಯಲ್ಲಿ ಸಮರ್ಥವಾಗಿ ಅರ್ಥ ವ್ಯವಹಾರವನ್ನು ಬೆಂಬಲಿಸಲು ಈ ನೋಟಿಫಿಕೇಶನ್ ಒತ್ತು ನೀಡುತ್ತದೆ. ಆದರೆ ಈ ನೋಟಿಫಿಕೇಶನ್‌ನಿಂದಾಗಿ ಮನೆ ದುರಸ್ತಿಗೊಳಿಸುವುದಕ್ಕೂ ಪರವಾನಿಗೆ ಸುಲಭ ವಾಗಿ ಲಭಿಸುತ್ತಿಲ್ಲ. ಸವಲತ್ತುಗಳು ಲಭಿಸುವುದಕ್ಕೂ ಅಡ್ಡಗಾಲಾಗಿ ಕಾಡುತ್ತಿದೆ.
ಸಿಆರ್‌ಝಡ್‌ನಲ್ಲಿ 1, 2, 3 ಹಾಗೂ 4 ವಿಭಾಗಗಳಿವೆ. ವಿಭಾಗ 1ರಲ್ಲಿ ಸಮುದ್ರದ ಉಬ್ಬರ ಮತ್ತು ಇಳಿತದ ನಡುವಣ ಮೂಲ ನಿವಾಸಿಗಳು ವಾಸಿಸುವ ಭೂಭಾಗವು ಸೇರಿದ್ದು, ಪರಿಸರ ಸೂಕ್ಷ್ಮ ಜೈವಿಕ ವಲಯವನ್ನು ಹೊಂದಿದೆ. 2ನೇ ವಿಭಾಗವು ಸಮುದ್ರ ತೀರದ ಅಭಿವೃದ್ಧಿ ಹೊಂದಿದ ಪ್ರದೇಶ. ಮನೆ, ಇತರ ಕಟ್ಟಡಗಳು ಮತ್ತು ನಗರ ಭಾಗವನ್ನು ಹೊಂದಿರುತ್ತದೆ. 3ನೇ ವಿಭಾಗದಲ್ಲಿ ಅಭಿವೃದ್ಧಿಯಾಗದ ಭೂಭಾಗ, ಗ್ರಾಮೀಣ ಪ್ರದೇಶಗಳು, ಪರಿಸರ ಸೂಕ್ಷ್ಮವಲ್ಲದ ಪ್ರದೇಶ ಸೇರಿದ್ದು, ಸಮುದ್ರದ ಉಬ್ಬರ ರೇಖೆಯಿಂದ 0 – 200 ಮೀ. (ಅಭಿವೃದ್ಧಿ ಹೊಂದದ ಪ್ರದೇಶ) ಹಾಗೂ 200 – 500 ಮೀ.ವರೆಗಿನ ಎಂಬುದಾಗಿ ಎರಡು ಉಪವಿಭಾಗಗಳನ್ನು ಹೊಂದಿದೆ. 4ನೇ ವಿಭಾಗ ಸಮುದ್ರದ ಇಳಿತದ ರೇಖೆಯಿಂದ ಸಮುದ್ರದಲ್ಲಿ 12 ನಾಟಿಕಲ್ ಮೈಲುಗಳ ಪ್ರದೇಶವನ್ನು ಹೊಂದಿರುತ್ತದೆ. ಬದುಕು ಕಟ್ಟುವ ವಾತಾವರಣ ನಿರ್ಮಾಣವಾಗಲಿ
ಸಿಆರ್‌ಝಡ್ ವಲಯದಲ್ಲಿ ವಾಸಿಸುವ ಮೀನುಗಾರ ಸಮುದಾಯದವರಿಗೆ ಹಳೆ ಮನೆ ದುರಸ್ತಿ ಮಾಡುವುದಕ್ಕೆ ಪರವಾನಿಗೆ ಅಥವಾ ಸಿಆರ್‌ಝಡ್ ಎನ್‌ಒಸಿ ಪಡೆದುಕೊಳ್ಳಲು ವರ್ಷಗಳೇ ಕಾಯಬೇಕಾದ ಪರಿಸ್ಥಿತಿ ಇದೆ. ಭೂ ಪರಿವರ್ತನೆ ಆಗುವುದಿಲ್ಲ. ಹೊಸ ಮನೆಗೆ ಪರವಾನಿಗೆ ಲಭ್ಯವಾಗುವುದಿಲ್ಲ. ಮತ್ಸಾéಶ್ರಯ ಯೋಜನೆ ದಕ್ಕಸಿಕೊಳ್ಳಲೂ ತೊಂದರೆ ಎದುರಾಗುತ್ತಿವೆ. ಅಲ್ಲದೆ ಇಲ್ಲಿನ ಮೂಲ ನಿವಾಸಿ ಮೀನುಗಾರರಿಗೆ ಸರಕಾರದ ಯಾವುದೇ ಸೌಲಭ್ಯ ಸಿಗದು. ಕೇಂದ್ರದ ಪ್ರಧಾನ ಮಂತ್ರಿ ಆವಾಸ್, ಇಂದಿರಾ ಆವಾಸ್, ಬಸವ ವಸತಿ ಯೋಜನೆಗಳಿಂದ ಮೀನುಗಾರರು ವಂಚಿತರಾಗಿದ್ದಾರೆ. ಮೀನುಗಾರ ಸಮುದಾಯಕ್ಕೆ ಬದುಕು ಕಟ್ಟುವಂತಹ ವಾತಾವರಣದ ನಿರ್ಮಾಣವಾಗಲಿ. ಇದು ಸರಕಾರದ ಜವಾಬ್ದಾರಿಯೂ ಹೌದು ಎಂದು ಬಡಾ ಗ್ರಾಮ ಉಚ್ಚಿಲದ ಕರಾವಳಿ ರಕ್ಷಣಾ ವೇದಿಕೆಯ ಶಿವಕುಮಾರ್ ಆರ್. ಹೇಳುತ್ತಾರೆ.
Related Articles
ಸಿಆರ್‌ಝಡ್ ಪ್ರದೇಶದಲ್ಲಿ ಮೀನುಗಳ ಸಂತಾನ ವೃದ್ಧಿಗೆ ಮೊದಲ ಆದ್ಯತೆ. ಘನ ಹಾಗೂ ಶುದ್ಧೀಕರಿಸದ ದ್ರವ ತ್ಯಾಜ್ಯಗಳನ್ನು ಇಲ್ಲಿ ವಿಸರ್ಜಿಸುವುದಕ್ಕೆ ನಿಷೇಧವಿದೆ. ಸಿಆರ್‌ಝಡ್ 2ರಲ್ಲಿ ನಿರ್ಮಾಣಗಳ ದುರಸ್ತಿ ಮತ್ತು ಪುನರ್ ನಿರ್ಮಾಣಕ್ಕೆ ಸ್ಥಳೀಯಾಡಳಿತದ ಪರವಾನಿಗೆಯೊಂದಿಗೆ ಅವಕಾಶ ಇದೆ. ಸಿಆರ್‌ಝಡ್ 3ರಲ್ಲಿ ಸ್ಥಳೀಯ ಮೀನುಗಾರ ಸಮೂಹಕ್ಕೆ ವಿಶೇಷ ಆದ್ಯತೆಯನ್ನು ನೀಡಲಾಗಿದೆ. ಯಾವುದೇ ಹೊಸ ನಿರ್ಮಾಣಗಳಿಗೆ ಇಲ್ಲಿ ಅವಕಾಶವಿಲ್ಲ. ಇವೆಲ್ಲವುಗಳ ಮೇಲೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕರಾವಳಿಗರ ಸಮುದಾಯದ ಮೂವರು ಸದಸ್ಯರಿರುವ ಕರಾವಳಿ ನಿಯಂತ್ರಣ ವಲಯ ಆಡಳಿತ ವ್ಯವಸ್ಥೆ ಕಣ್ಗಾವಲು ಇರಿಸುತ್ತದೆ.
Advertisement
ಸಿಆರ್‌ಝಡ್‌ನ ಹೊಸ ನೋಟಿಫಿಕೇಶನ್‌ನಂತೆ ಸಿಆರ್‌ಝಡ್‌ನ ಹಳೇ ನಕಾಶೆಯ ಅವಧಿ ಮುಗಿದು, ಅದು ಪರಿಷ್ಕರಣೆ ಆಗುವವರೆಗೆ ಭೂ ಪರಿವರ್ತನೆ, ಎನ್‌ಒಸಿ ಅವಕಾಶ ನೀಡುವಂತಿಲ್ಲವೆಂದು ಗ್ರೀನ್ ಟ್ರಿಬ್ಯೂನಲ್ ಆದೇಶ ಹೊರಡಿಸಿತ್ತು. ಈಗ ಸಿಆರ್‌ಝಡ್ ಭೂಪಟವು ತಯಾರಾಗಿದೆ. ಅದು ಜಿಲ್ಲಾಡಳಿತದ ಕೈಸೇರಿದ್ದು, ಇನ್ನು 1991ರ ಹಿಂದಿನ ಮೂಲ ನಿವಾಸಿಗಳ ಭೂ ಪರಿವರ್ತನೆ, ಎನ್‌ಒಸಿಗಳ ನೀಡಿಕೆ ಕುರಿತಾಗಿ ಸಭೆಯೊಂದನ್ನು ಕರೆಯಲಾಗುವುದು. ಸಭೆಯ ತೀರ್ಮಾನದಂತೆ ಮುಂದೆ ಕ್ರಮಗಳನ್ನು ಸಡಿಲಿಸಲಾಗುವುದು. ಸರಕಾರದ ಸವಲತ್ತು ಪಡೆಯಲು ಈಗಲೂ ಅಡ್ಡಿ ಇಲ್ಲ.ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಉಡುಪಿ ಜಿಲ್ಲಾಧಿಕಾರಿ * ಆರಾಮ