ಉಡುಪಿ: ರಂಗಕರ್ಮಿಗಳಿಗೆ ಅತಿ ಅಗತ್ಯವಿರುವ, ಸಕಲ ಸವಲತ್ತುಗಳು ಏಕತ್ರಲಭ್ಯವಾಗುವ ಕರಾವಳಿ ರಂಗಾಯಣ ಬಹುಬೇಗ ತಲೆ ಎತ್ತಲಿ ಎಂದು ಹಿರಿಯ ರಂಗ ನಟ ಮಂಡ್ಯ ರಮೇಶ್ ಹೇಳಿದರು.
ಫೆ. 17ರಂದು ಎಂಜಿಎಂ ಕಾಲೇಜಿನಲ್ಲಿ ಆರಂಭವಾದ ಮುರಾರಿ-ಕೆದ್ಲಾಯ ರಂಗೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ರಂಗ ಚಳವಳಿಗೆ ಒಂದು ಹೊಸ ಸಂಚಲನ ಮೂಡಿಸಿದ ಕೆ.ವಿ. ಸುಬ್ಬಣ್ಣ, ಬಿ.ವಿ. ಕಾರಂತರು ಸಂಚರಿಸಿದ ಈ ಸ್ಥಳದಲ್ಲಿ ಧನಾತ್ಮಕ ತರಂಗಗಳು ನಮ್ಮನ್ನು ಎಚ್ಚರಿಸುತ್ತಿವೆ. ಈ ಶಕ್ತಿ ಕರಾವಳಿ ಕಲಾವಿದರಿಗೆ ವರವಾಗಲಿ. ಹೆಚ್ಚು ಹೆಚ್ಚು ರಂಗ ಯೋಜನೆಗಳು ವಿಸ್ತಾರಗೊಳ್ಳಲಿ ಎಂದು ಅವರು ಹೇಳಿದರು.
ತುಳುಕೂಟದ ಡಾ| ಭಾಸ್ಕರಾನಂದ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಥಬೀದಿ ಗೆಳೆಯರು ಸಂಸ್ಥೆಯ ಪ್ರೊ| ಮುರಳೀಧರ ಉಪಾಧ್ಯ ಹಿರಿಯಡ್ಕ, ಸುಬ್ರಹ್ಮಣ್ಯ ಜೋಷಿ, ಸಂತೋಷ್ ಬಲ್ಲಾಳ್ ಉಪಸ್ಥಿತರಿದ್ದರು.
ಉಪಾದ್ಯಕ್ಷ ಉದ್ಯಾವರ ನಾಗೇಶ್ ಸ್ವಾಗತಿಸಿದರು. ಸಂತೋಷ್ ಹಿರಿಯಡ್ಕ ಕಾರ್ಯಕ್ರಮ ನಿರ್ವಹಿಸಿದರು.