Advertisement

Coastal Politics; ಹೀಗೂ ಉಂಟು- ಸೋತರೂ ಅದೃಷ್ಟ ಕೈ ಹಿಡಿಯಿತು

01:26 PM Apr 17, 2023 | Team Udayavani |

ಉಡುಪಿ: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿಯೂ ಗೆಲುವು ಸಿಗದಿದ್ದರೂ ಅದೃಷ್ಟ ಚೆನ್ನಾಗಿದ್ದರೆ ಮೇಲ್ಮನೆ ಸದಸ್ಯರಾಗಿ ಸಚಿವರು ಆಗಬಹುದು. ಬ್ರಹ್ಮಾವರ ವಿಧಾನಸಭಾ ಕ್ಷೇತ್ರ ಇದ್ದ ಸಂದರ್ಭದಲ್ಲಿ ಬಿಜೆಪಿಯೂ ಈ ಕ್ಷೇತ್ರದಲ್ಲಿ ಜಯ ಸಾಧಿಸಿರುವ ದಾಖಲೆಯಿದೆ.

Advertisement

ಆದರೆ ಬಿಜೆಪಿಯಿಂದ ಎರಡು ಬಾರಿ ಸ್ಪರ್ಧೆಗೆ ಇಳಿದಿದ್ದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಗೆಲುವು ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. 1999ರಲ್ಲಿ ಸ್ಪರ್ಧೆ ಮಾಡಿ 24,043 ಮತ ಪಡೆದಿದ್ದರೆ 2004ರಲ್ಲಿ 25,590 ಮತ ಪಡೆದಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡರೂ ವಿಧಾನ ಪರಿಷತ್‌ ಚುನಾವಣೆ ಅವರ ಕೈ ಹಿಡಿಯಿತು.

ಉಡುಪಿ-ದ.ಕ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದು ವಿಧಾನ ಪರಿಷತ್‌ ಪ್ರವೇಶ ಮಾಡಿದರು. ಅನಂತರ ಬಿಜೆಪಿ ಸರಕಾರದಲ್ಲಿ ಸಚಿವರಾದರು. ವಿಧಾನ ಪರಿಷತ್‌ ವಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು. ಈಗ ಸಚಿವರೂ ಆಗಿದ್ದು ವಿಧಾನ ಪರಿಷತ್‌ ಆಡಳಿತ ಪಕ್ಷದ ನಾಯಕರೂ ಆಗಿದ್ದಾರೆ. ಈ ರೀತಿಯ ಅವಕಾಶ ತುಂಬಾ ರಾಜಕಾರಣಗಳಿಗೆ ಸಿಗುವುದಿಲ್ಲ.

ಕುಂದಾಪುರದಿಂದ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದ ಪ್ರತಾಪ್‌ ಚಂದ್ರ ಶೆಟ್ಟಿಯವರು ಸಚಿವರಾಗಿಲ್ಲ. ಬದಲಾಗಿ ವಿಧಾನಪರಿಷತ್‌ ಪ್ರವೇಶಿಸಿ, ಸಭಾಪತಿಯಾಗಿದ್ದರು. ಈ ರೀತಿಯ ಅವಕಾಶ, ಅದೃಷ್ಟ ರಾಜಕಾರಣಿಗಳು ಕರಾವಳಿಯಲ್ಲಿ ತೀರ ವಿರಳ.

Advertisement

Udayavani is now on Telegram. Click here to join our channel and stay updated with the latest news.

Next