Advertisement
ಕಲಿಕೆಗೆ ಪ್ರೇರಣೆಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್‌ನ ಫೇಸ್‌ಬುಕ್‌ಗಳಲ್ಲಿ ತುಳು ಲಿಪಿ ಕಲಿಕೆ ನೋಟ್ಸ್, ಪಿಡಿಎಫ್, ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಜನರನ್ನು ಭಾಷಾಭ್ಯಾಸಕ್ಕೆ ಹುರಿದುಂಬಿಸಲಾಗುತ್ತಿದೆ. ಆನ್‌ಲೈನ್ ತುಳುಲಿಪಿ, ಟ್ವಿಟ್ ತುಳುನಾಡು, ಜೈ ತುಳುನಾಡು ಸಹಿತ ಅನೇಕ ವಾಟ್ಸಾಪ್‌ಗ್ರೂಪ್ ಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಜತೆಗೆ ಜನರು ತಮ್ಮ ತಮ್ಮಲ್ಲೇ ಕಲಿಕ ವಾಟ್ಸಾಪ್ ಗ್ರೂಪ್ ಗಳನ್ನು ಮಾಡಿ ತುಳು ಲಿಪಿ ಕಲಿಕೆಯಲ್ಲಿ ನಿರತರಾಗುತ್ತಿದ್ದಾರೆ. ಹಾಗೇ ಫೇಸ್‌ಬುಕ್ ತುಳುನಾಡ ಪೇಜ್ ಗಳು ಜನರು ಸಂಶಯ ಗಳಿಗೆ ಪ್ರತಿಕ್ರಿಯಿಸಿ, ಅಕ್ಷರ ಕಲಿಸುವ, ಹೆಸರು, ಊರಿನ ಹೆಸರು, ದೇವಸ್ಥಾನಗಳ ಹೆಸರು, ಶುಭಾಶಯಗಳನ್ನು ತಿಳಿಸುವ ಬಗ್ಗೆ ತುಳು ಲಿಪಿಯಲ್ಲಿ ಬರೆದು ಪಿಎನ್‌ಜಿ ಫಾಮ್ಯಾಟ್ ಮೂಲಕ ಜನರಿಗೆ ನೀಡುತ್ತಿದೆ.
ಹೊರ ರಾಜ್ಯದಲ್ಲಿರುವ ಮಂದಿಯೂ ತುಳು ಲಿಪಿಯನ್ನು ಕಲಿಯುವಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುತ್ತಿದ್ದು, ತಾಯಿ ನಾಡಿನ ಭಾಷೆಯನ್ನು ಪ್ರಚಾರ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಆಸಕ್ತಿ ಹೆಚ್ಚಾಗುತ್ತಿದೆ
ಕಳೆದ ಒಂದು ತಿಂಗಳಿಂದ ಗೂಗಲ್, ಸಾಮಾಜಿಕ ಜಾಲತಾಣಗಳಲ್ಲಿ ತುಳು ಅಕ್ಷರವನ್ನು ಕಲಿಯುತ್ತಿದ್ದು, ಸದ್ಯ ವಾಕ್ಯಗಳನ್ನು ಬರೆಯಲು ಕಲಿತಿದ್ದೇನೆ. ಅನೇಕ ಮಂದಿ ಸಲಹೆ ಕೇಳುತ್ತಿದ್ದಾರೆ. ತುಳು ಲಿಪಿ ಕಲಿಕೆಯ ಆಸಕ್ತಿ ಹೆಚ್ಚಾಗುತ್ತಿದೆ ಎಂದು ಗೋವಾದಲ್ಲಿರುವ ಮಂಗಳೂರಿನ ಮೂಲದ ಅಭಯಚಂದ್ರ ಹೇಳುತ್ತಾರೆ.
Related Articles
ಲಾಕ್‌ಡೌನ್‌ನಿಂದ ವಿವಿಧ ಸಂಘಟನೆಗಳು ನಡೆಸಬೇಕಿದ್ದ ಕಾರ್ಯಾಗಾರಗಳಿಗೆ ತಡೆಯಾಗಿದ್ದು, ಮುಂದಿನ ದಿನಗಳಲ್ಲಿ ಉಡುಪಿ ಸೇರಿದಂತೆ ಮಂಗಳೂರು ಭಾಗದ ವಿವಿಧ ಶಾಲೆಗಳಲ್ಲಿ ಕಾರ್ಯಾಗಾರ ನಡೆಸುವ ಯೋಚನೆ ಇದೆ. 30 ಪ್ರೊಫೆಶನಲ್ ಶಿಕ್ಷಕರು ತಯಾರಾಗಿದ್ದಾರೆ. ತುಳು ಅಕಾಡೆಮಿಯಿಂದಲೂ ಪ್ರೋತ್ಸಾಹ ಸಿಕ್ಕಿದೆ. ಉಡುಪಿ ಶಾಸಕರು ಕೂಡ ತುಳು ಕಲಿಕೆಗೆ ಪೋತ್ಸಾಹ ನೀಡುತ್ತಿದ್ದಾರೆ.
-ಶರತ್ ಕೊಡವೂರು, ಕಿರಣ್ ತುಳುವೆ, ಸದಾಶಿವ ಮುದ್ರಾಡಿ,
ತುಳು ಲಿಪಿ ಪ್ರಚಾರಕರು, ಜೈ ತುಳುನಾಡು ಪಡುಕೆರೆ
Advertisement
ತುಳು ಲಿಪಿ ಕಲಿಯುವ ಆಸಕ್ತಿತುಳು ಪುಸ್ತಕ ನೋಡಿ ತುಳು ಲಿಪಿಯನ್ನು ಕಲಿತಿದ್ದೇವೆ. ಲಿಪಿ ಕಲಿಕೆಗೆ ನಿರಂತರ ಅಭ್ಯಾಸ ಬೇಕು. ಉಡುಪಿ ಭಾಗದಲ್ಲಿ ಅನೇಕರು ತುಳು ಲಿಪಿ ಕಲಿಯುವ ಆಸಕ್ತಿ ತೋರುತ್ತಿದ್ದಾರೆ. ವಾಟ್ಸ್‌ಆ್ಯಪ್, ಫೇಸ್‌ಬುಕ್‌ನಲ್ಲಿ ಅನೇಕರು ನಮ್ಮಲ್ಲಿ ತುಳು ಬರಹದ ಬಗ್ಗೆ, ಹೆಸರುಗಳನ್ನು ಬರೆಯುವ ಬಗ್ಗೆ ವಿಚಾರಿಸುತ್ತಿದ್ದಾರೆ.
-ವಿಷ್ಣುಮೂರ್ತಿ, ಉಡುಪಿ ನಿವಾಸಿ