Advertisement

ಕರಾವಳಿಯ ರಾಜಕೀಯದಂಗಳದಲ್ಲಿ ಸಿಎಂ- ಸಚಿವ ಸ್ಥಾನದತ್ತ ಕುತೂಹಲ!

07:25 AM Jul 27, 2021 | Team Udayavani |

ಮಂಗಳೂರು: ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲ ರಾಜ್ಯಮಟ್ಟದಲ್ಲಿ ಹರಿದಾಡುತ್ತಿದ್ದು  ಕರಾವಳಿಯ ರಾಜಕೀಯ ವಲಯದಲ್ಲಿ ಸಿ.ಎಂ. ಸಚಿವ ಸ್ಥಾನಗಳ ಕುರಿತು ಕುತೂಹಲಕಾರಿ ಚರ್ಚೆ-ವಿಶ್ಲೇಷಣೆಗಳ ಲೆಕ್ಕಾಚಾರ ಶುರುವಾಗಿದೆ.

Advertisement

ಬಿ.ಎಸ್‌. ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ಸೋಮವಾರ ರಾಜೀ ನಾಮೆ ನೀಡಿದ ಬೆನ್ನಲ್ಲೇ  ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ? ಎಂಬ ಬಗ್ಗೆ ಹಲವು ನಾಯಕರ ಹೆಸರುಗಳು ಹರಿದಾಡುತ್ತಿವೆ. ಸಂಭಾವ್ಯರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರ ಹೆಸರು ಕೂಡ ಕೇಳಿಬರುತ್ತಿದೆ. ಕಾಕ ತಾಳೀಯ ವೆಂಬಂತೆ 2011ರಲ್ಲಿ ಯಡಿ ಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭ ಡಿ.ವಿ. ಸದಾನಂದ ಗೌಡ ಅವರ ಹೆಸರು ಕೇಳಿಬಂದಿತ್ತು ಮತ್ತು  ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಅಂಶ ಜಿಲ್ಲೆಯ ಬಿಜೆಪಿ ವಲಯದಲ್ಲಿ ನಡೆಯತ್ತಿರುವ ಚರ್ಚೆಯ ವೇಳೆ ಕೇಳಿಬರುತ್ತಿದೆ. ಇದರ ನಡುವೆ  ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ತಾನು ಇಲ್ಲ ಎಂಬುದಾಗಿ  ನಳಿನ್‌ ಕುಮಾರ್‌ ಕಟೀಲು ಹೇಳಿಕೊಂಡಿದ್ದಾರೆ.

ದ.ಕ. ಮತ್ತು ಉಡುಪಿ ಜಿಲ್ಲೆ ಹೊಂದಿರುವ ಪ್ರಾತಿನಿಧ್ಯ ಹೊಸದಾಗಿ ಆಯ್ಕೆಯಾಗುವ ಮುಖ್ಯಮಂತ್ರಿಯವರ ಸಚಿವ ಸಂಪುಟದಲ್ಲೂ  ಉಳಿಯುತ್ತದೆಯೋ ಅಥವಾ ಹೊಸಬರಿಗೆ ಅವಕಾಶ ಲಭಿಸಲಿದೆಯೇ ಎಂಬ ಚರ್ಚೆ ಯಡಿಯೂರಪ್ಪ ಅವರ ರಾಜೀನಾಮೆ ಬೆನ್ನಲ್ಲೇ ಹುಟ್ಟಿಕೊಂಡಿದೆ. ಪ್ರಸ್ತುತ ದ.ಕ. ಮತ್ತು ಉಡುಪಿ ಒಂದೊಂದು ಸಚಿವ ಸ್ಥಾನ ಹೊಂದಿದೆ.  ಕೋಟ ಶ್ರೀನಿವಾಸ ಪೂಜಾರಿಯವರು ಆರಂಭದಲ್ಲೇ ಯೂಡಿಯೂರಪ್ಪ ಅವರ ಸಚಿವ ಸಂಪುಟ ದಲ್ಲಿದ್ದರೆ ಸುಳ್ಯ ಶಾಸಕ ಎಸ್‌.ಅಂಗಾರ ಅವರು ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡು  7 ತಿಂಗಳುಗಳಾಗಿವೆ.

ಕುಂದಾಪುರ ಕ್ಷೇತ್ರದಿಂದ  5 ಬಾರಿ ಗೆದ್ದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾರ್ಕಳ ಶಾಸಕ  ಸುನಿಲ್‌ ಕುಮಾರ್‌ ಅವರ  ಹೆಸರುಗಳು ಹಿಂದೆ ಸಚಿವ ಸಂಪುಟ ರಚನೆ ಮತ್ತು ಪುನಾ ರಚನೆ ಸಂದರ್ಭಗಳಲ್ಲಿ ಕೇಳಿಬಂದಿತ್ತು ಮತ್ತು  ಈ ಬಾರಿಯೂ ಮುಂಚೂಣಿಯಲ್ಲಿ ಕೇಳಿ ಬರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಸ್‌. ಅಂಗಾರ ಅವರು ಸಚಿವರಾಗಿ ಕೆಲವೇ ಸಮಯವಾಗಿರುವ ಹಿನ್ನೆಲೆಯಲ್ಲಿ  ಅವರು ಸ್ಥಾನ ಉಳಿಯಬಹುದು ಎಂಬ ಲೆಕ್ಕಚಾರವೂ ಇದೆ. ಜಿಲ್ಲೆಯ ಬಿಜೆಪಿ ಶಾಸಕರಲ್ಲಿ  ಎಸ್‌. ಅಂಗಾರ ಅವರ‌ನ್ನು ಹೊರತುಪಡಿಸಿ ವೇದ ವ್ಯಾಸ ಕಾಮತ್‌, ಹರೀಶ್‌ ಪೂಂಜ, ಡಾ| ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ರಾಜೇಶ್‌ ನಾೖಕ್‌,  ಸಂಜೀವ ಮಠಂದೂರ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆ ಯಾ ದವರು. ಬೈಂದೂರಿನ ಸುಕುಮಾರ ಶೆಟ್ಟಿಯವರು

ಹೊಸ ಶಾಸಕರು. ಕಾಪು ಕ್ಷೇತ್ರದ ಲಾಲಾಜಿ ಮೆಂಡನ್‌, ಉಡುಪಿಯ ರಘುಪತಿ ಭಟ್‌ ತಲಾ 3 ಬಾರಿ ಶಾಸಕರಾಗಿ ಆಯ್ಕೆಯಾದವರು. ಆದರೆ ಬಿಜೆಪಿಯು  ಪಕ್ಷದ ರಾಜಕೀಯ ವಿದ್ಯಮಾನಗಳ ವಿಚಾರದಲ್ಲಿ  ಸದಾ  ಗೌಪ್ಯತೆ ಹಾಗೂ ಅಚ್ಚರಿಯ ನಡೆಯನ್ನು ಪ್ರದರ್ಶಿಸುತ್ತ ಬಂದಿದ್ದು  ಸಚಿವ ಸ್ಥಾನಗಳ ವಿಚಾರದಲ್ಲೂ  ಕೂಡ ಅಚ್ಚರಿಯ ಬೆಳವಣಿಗೆಗಳನ್ನು  ತಳ್ಳಿಹಾಕುವಂತಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರ ಹೆಸರೂ ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸಂತೋಷರ ಮೂಲ ಊರು ಹಿರಿಯಡಕದಲ್ಲಿ ಅಗೋಚರ ಸಂಭ್ರಮ ಮನೆ ಮಾಡಿದೆ. ಸಾಮಾನ್ಯ ಹಿನ್ನೆಲೆಯಿಂದ ಬಂದು ರಾಷ್ಟ್ರೀಯ ಸ್ತರಕ್ಕೆ ಏರಿದ್ದರೂ ಅವರ ಮನೆಯ ಇತರ ಸದಸ್ಯರ ಮೇಲೆ ಇದಾವುದೂ ಪರಿಣಾಮ ಬೀರದೆ ಇರುವುದು ವೈಶಿಷ್ಟé. ಇನ್ನೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಹೆಸರೂ ಕೇಳಿ ಬರುತ್ತಿರುವುದರಿಂದ ಇದೂ ಕೂಡ ಜಿಲ್ಲೆಯ ಶಾಸಕರಿಗೆ ಸಂತಸದ ವಿಷಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next