Advertisement

ವಸತಿ ರಹಿತ ದ್ವೀಪಗಳ ಮೇಲೆ ಕೋಸ್ಟ್‌ಗಾರ್ಡ್‌ ವಿಶೇಷ ಕಣ್ಗಾವಲು

01:05 AM Mar 17, 2020 | mahesh |

ಪಣಂಬೂರು: ಕರಾವಳಿ ಕರ್ನಾಟಕ, ಕೇರಳ, ಲಕ್ಷದ್ವೀಪ ಸಹಿತ ವಿವಿಧೆಡೆಳಲ್ಲಿರುವ ಜನ ವಸತಿ ಮತ್ತು ವಸತಿ ರಹಿತ ದ್ವೀಪಗಳ ಮೇಲೆ ಕೋಸ್ಟ್‌ ಗಾರ್ಡ್‌ ಮಾ. 13ರಿಂದ 16ರ ವರೆಗೆ ವಿಶೇಷ ಕಣ್ಗಾವಲು ಕಾರ್ಯಾಚರಣೆ ನಡೆಸಿತು.

Advertisement

ಕೋಸ್ಟ್‌ಗಾರ್ಡ್‌ನ ಡಾರ್ನಿಯರ್‌ 761 ಬಹೂಪಯೋಗಿ ಕಣ್ಗಾವಲು ವಿಮಾನವನ್ನು ಇದಕ್ಕೆ ಬಳಸಲಾಯಿತು. ದ್ವೀಪಗಳ ಮೇಲೆ ಹಾರಾಟ ನಡೆಸಿದ ವಿಮಾನವು ಬಹು ಮುಖ್ಯವಾದ ಛಾಯಾಚಿತ್ರಗಳನ್ನು ತೆಗೆಯಿತಲ್ಲದೆ, ಅಲ್ಲಿನ ಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹಿಸಿತು.

ಸಮುದ್ರದಲ್ಲಿ ಆಗಬಹುದಾದ ಜೀವ ಹಾನಿ, ಹುಡುಕಾಟ, ರಕ್ಷಣೆ ಮತ್ತು ಸಮನ್ವಯ ಕಾರ್ಯಾಚರಣೆಯ ಕುರಿತು ಕೋಸ್ಟ್‌ಗಾರ್ಡ್‌ ನಿಯಮಿತವಾಗಿ ಹಾರಾಟ ನಡೆಸುತ್ತ ಪರಿಶೀಲಿಸುತ್ತಿದೆ.

ಡಾರ್ನಿಯರ್‌ ವೈಶಿಷ್ಟ್ಯಗಳು
ಎರಡು ಲಘು ಎಂಜಿನ್‌ಗಳ ಡಾರ್ನಿಯರ್‌ ವಿಮಾನ ಸುಧಾರಿತ ರಾಡಾರ್‌, ಅತ್ಯಾಧುನಿಕ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಹೊಂದಿದೆ. ಸಮುದ್ರದಲ್ಲಿನ ಏರಿಳಿತ, ತುರ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ, ವೈದ್ಯಕೀಯ ನೆರವು ನೀಡಲು ಬೇಕಾದ ಪೂರಕ ವ್ಯವಸ್ಥೆ ಮಾಡಲು ಮತ್ತು ಮಾಹಿತಿ ಸಂಗ್ರಹಕ್ಕೆ ಬಳಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next