Advertisement
ಶಾಸಕ ಮೊದಿನ್ ಬಾವಾ ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮವನ್ನು ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಆಚರಿಸಲಾಯಿತು. ಬಳಿಕ ಮಾತನಾಡಿದ ಬಾವಾ ಅವರು, ಕರಾವಳಿ ಸಮುದ್ರ ತೀರವನ್ನು ರಕ್ಷಿಸುವ ಜತೆಗೆ ಮೀನುಗಾರರ ಜೀವ ರಕ್ಷಣೆಯ ಕಾರ್ಯವನ್ನು ಮಾಡುತ್ತಾ ತಟ ರಕ್ಷಣಾ ಪಡೆ ದೇಶ ಸೇವೆ ಮಾಡುತ್ತಿದೆ. ದೇಶ ರಕ್ಷಣೆಯ ಜವಾಬ್ದಾರಿ ಹೊತ್ತ ಸೈನಿಕರಿಗೆ ನಾಗರಿಕ ಗೌರವ, ಬೆಂಬಲ ಸದಾ ಇದೆ ಎಂದರು.
ಕರ್ನಾಟಕದ ಸಮುದ್ರ ತೀರ ರಕ್ಷಣೆಗೆ ಶೂರ್ ನೌಕೆ, ನಾಲ್ಕು ಸ್ಪೀಡ್ ಬೋಟುಗಳು ನೆಲ ಹಾಗೂ ಜಲದಲ್ಲಿ ಕಾರ್ಯಾಚರಿಸಬಲ್ಲ ಎರಡು ಹೋವರ್ ಕ್ರಾಫ್ಟ್, ಎರಡು ಇಂಟರ್ ಸೆಪ್ಟರ್ ಬೋಟುಗಳು, ಒಂದು ಲಘು ಕಣ್ಗಾವಲು ವಿಮಾನ ಬಳಸಿಕೊಳ್ಳಲಾಗುತ್ತಿದೆ ಎಂದು ಡಿಐಜಿ ಎಸ್. ಎಸ್. ದಸೀಲಾ ತಿಳಿಸಿದರು.