Advertisement

ಸಮುದ್ರದಲ್ಲಿ ಸಿಲುಕಿದ್ದ 18 ಮಂದಿಗೆ ಕೋಸ್ಟ್‌ ಗಾರ್ಡ್‌ ರಕ್ಷಣೆ

12:25 PM Sep 19, 2017 | Team Udayavani |

ಪುದುಚೇರಿ : ತಾವು ಪ್ರಯಾಣಿಸುತ್ತಿದ್ದ ನಾವೆಯಲ್ಲಿ ತಾಂತ್ರಿಕ ಅಡಚಣೆಗಳು ಉಂಟಾದ ಕಾರಣಕ್ಕೆ ಪುದುಚೇರಿಯ ದೂರ ಕರಾವಳಿಯಲ್ಲಿ, ನಡು ಸಮುದ್ರದಲ್ಲಿ ಸಿಲುಕಿಕೊಂಡಿದ್ದ 18 ಮಂದಿ ಪಕ್ಷಿ ತಜ್ಞರು ಮತ್ತು ಮೂವರು ನಾವಿಕರನ್ನು ಭಾರತೀಯ ಕೋಸ್ಟ್‌ ಗಾರ್ಡ್‌ ಸುರಕ್ಷಿತವಾಗಿ ಪಾರು ಮಾಡಿದೆ. 

Advertisement

ಪುದುಚೇರಿ, ಚೆನ್ನೈ ಮತ್ತು ಮುಂಬಯಿಯ 18 ಮಂದಿ ಪಕ್ಷಿ ವೀಕ್ಷಕರು ಮೊನ್ನೆ ಭಾನುವಾರ ಯಾಂತ್ರೀಕೃತ ಬೋಟ್‌ ಒಂದರಲ್ಲಿ ದೂರ ಕರಾವಳಿ ಸಮುದ್ರಕ್ಕೆ ತೆರಳಿದ್ದರು. ಇವರ ನಾವೆಯು ಸುಮಾರು 15 ನಾಟಿಕಲ್‌ ಮೈಲುಗಳಷ್ಟು ದೂರ ಸಮುದ್ರಕ್ಕೆ ಹೋಗಿದ್ದಾಗ,  ತಾಂತ್ರಿಕ ಅಡಚಣೆ ಕಾಣಿಸಿಕೊಂಡಿತು. 

ನಾವೆಯಲ್ಲಿದ್ದವರು ಒಡನೆಯೇ ತಮ್ಮ ಸ್ನೇಹಿತರನ್ನು ಮತ್ತು ಕುಟುಂಬದವರನ್ನು ಸಂಪರ್ಕಿಸಿದಾಗ ಅವರು ಪೊಲೀಸರಿಗೆ ವಿಷಯ ತಿಳಿಸಿದರು. ಪೊಲೀಸರು ಕೋಸ್ಟ್‌ ಗಾರ್ಡ್‌ ಸಂಪರ್ಕಿಸಿ ಅವರಿಂದ ಸಕಾಲದಲ್ಲಿ ನೆರವು ದೊರಕಿಸಿ ನಾವೆಯಲ್ಲಿದ್ದವರನ್ನು ಸುರಕ್ಷಿತವಾಗಿ ದಡಕ್ಕೆ ತಂದು ರಕ್ಷಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next