ಉಡುಪಿ:ಜಿಲ್ಲೆಯ ವಿವಿಧ ಠಾಣೆಗಳಿಗೆ ಸಂಬಂಧಿಸಿದಂತೆ, ಒಟ್ಟು 27 ವಾರಂಟ್ ಆರೋಪಿಗಳನ್ನು ಎಸ್‌ಪಿ ನೇತೃತ್ವದ ತಂಡ ಪತ್ತೆ ಹಚ್ಚಿ ಬಂಧಿಸಿದೆ.
Advertisement
ಈ ಆರೋಪಿಗಳ ಬಂಧನಕ್ಕೆ ಹೊರ ರಾಜ್ಯಗಳಿಗೆ ಪೊಲೀಸ್ ಉಪನಿರೀಕ್ಷಕರ ನೇತೃತ್ವದ ಮೂರು ತಂಡ ಹಾಗೂ ಹೊರಜಿಲ್ಲೆಗಳಿಗೆ ಎ.ಎಸ್.ಐ.ನೇತೃತ್ವದ 5 ತಂಡಗಳನ್ನು ಮಾ.23ರಂದು ಕಳುಹಿಸಲಾಗಿತ್ತು.ಮಧ್ಯಪ್ರದೇಶದ ಇಂದೋರ್‌ನಿಂದ ಇಬ್ಬರು, ಮಹಾರಾಷ್ಟ್ರದ ಸಾಂಗ್ಲಿಯಿಂದ ಓರ್ವ ಮತ್ತು ಕೇರಳದಿಂದ ಮೂವರನ್ನು ಸಹಿತ ಒಟ್ಟು 27 ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಮಂಗಳೂರು: ಪಣಂಬೂರು ಸಮೀಪದ ಮೀನಕಳಿಯದ ಸಮುದ್ರ ಕಿನಾರೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಿರತರಾ ಗಿದ್ದ ಕುಳಾಯಿ ಐಸ್‌ಪ್ಲಾಂಟ್ ಬಳಿಯ ನಿವಾಸಿ ಭರತೇಶ್ ಎಸ್. ಶ್ರೀಯಾನ್ (28) ಮತ್ತು ಕದ್ರಿ ದೇವಸ್ಥಾನ ರಸ್ತೆಯ ಮಿತ್ತಬಿತ್ತಿಲ್ ಮನೆಯ ಮಹಾಂತೇಶ್ ಅಮೀನ್ (28) ಅವರನ್ನು ಮಂಗಳೂರು ನಗರ ಉತ್ತರ ಉಪವಿಭಾಗ ರೌಡಿ ನಿಗ್ರಹ ದಳ ಮತ್ತು ಪಣಂಬೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಅವರಿಂದ 3 ಮೊಬೈಲ್ ಫೋನ್ ಮತ್ತು 43 ಸಾ. ರೂ.ಸಹಿತ ಒಟ್ಟು 68 ಸಾ.ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Related Articles
ಕಾಸರಗೋಡು: ಕೊಳಬೈಲಿನಲ್ಲಿ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಬೈಕ್ ಸವಾರ ಹೊಸದುರ್ಗ ಕೊಳವಯಲ್‌ನ ಅಸೀಸ್ ಅವರ ಪುತ್ರ ಖಲೀಲ್(22) ಅವರು ಆಸ್ಪತ್ರೆ ಯಲ್ಲಿ ಸಾವಿಗೀಡಾಗಿದ್ದಾರೆ.
Advertisement
ಉಡು ಪಿ: ಕಾಲೇಜು ವಿದ್ಯಾರ್ಥಿ ನಾಪತ್ತೆಉಡುಪಿ: ಉಡುಪಿಯ ಕಾಲೇಜೊಂದರ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸುಖೀಲ್ (17) ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ಈತ ಮೂಲತಃ ತಮಿಳುನಾಡಿನವನಾಗಿದ್ದು, ಎರಡು ದಿನಗಳಿಂದ ನಾಪತ್ತೆಯಾಗಿದ್ದಾನೆ ಎಂದು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಲ ಭರವಸೆ ನೀಡಿ ಲಕ್ಷಾಂತರ ರೂ. ವಂಚನೆ?
ಬೆಳ್ತಂಗಡಿ: ಸಾಲ ಕೊಡಿ ಸುವುದಾಗಿ ವಂಚಿಸಿ ಬೆಳ್ತಂಗಡಿ ಪರಿಸರದ ಅಮಾಯಕರಿಂದ ದಾಖಲೆ ಪಡೆದು ಖಾಸಗಿ ಫೈನಾನ್ಸ್ ಸಂಸ್ಥೆಯೊಂ ದರ ಮೂಲಕ ಇಎಂಐ (ಮಾಸಿಕ ಕಂತು) ಆಧಾರದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನ ಖರೀದಿಸಿ ಲಕ್ಷಾಂತರ ರೂ. ವಂಚಿಸಿದ ಬಗ್ಗೆ ತಿಳಿದು ಬಂದಿದೆ. ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಳಿಗೆಯೊಂದರ ಸಿಬಂದಿ ಸಹಾಯದಿಂದ ವಂಚಕರ ಜಾಲ ಕಾರ್ಯನಿರ್ವಹಿಸಿದ್ದು, ಸುಮಾರು 12 ಲ.ರೂ.ಗಳ ವರೆಗೆ ವಂಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸಹಕಾರ ಸಂಘಗಳಿಂದ ಸಾಲ ಕೊಡಿಸುವುದಾಗಿ ಜನರಿಗೆ ಭರ ವಸೆ ನೀಡಿ, ಅವರಿಂದ ದಾಖಲೆ ಹಾಗೂ ಸಹಿ ಪಡೆಯಲಾ ಗಿತ್ತು. ಜತೆಗೆ ಅವರ ಮೊಬೈಲ್‌ನಿಂದ ಒಟಿಪಿ ಪಡೆದು ಸಾಲದ ರೂಪದಲ್ಲಿ ವಂಚಕರೇ ಎಲೆಕ್ಟ್ರಾ ನಿಕ್ಸ್ ಉತ್ಪನ್ನಗಳನ್ನು ಖರೀದಿಸಿ ಅರ್ಧ ಬೆಲೆಗೆ ಮಾರಾಟ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೋಸಕ್ಕೊಳಗಾದ ಕೆಲವರ ಖಾತೆಗ ಳಿಂದ ಮೊತ್ತ ಕಡಿತ ಗೊಳ್ಳುವಾಗಲೇ ಪ್ರಕರಣ ಬೆಳಕಿಗೆ ಬಂದಿದೆ. ಫೈನಾನ್ಸ್ ಸಂಸ್ಥೆಗೆ ಈಗಷ್ಟೇ ವಂಚನೆ ವಿಚಾರ ತಿಳಿದಿದ್ದು,ಪೊಲೀಸ್ ದೂರು ನೀಡಲು ಮುಂದಾಗಿದ್ದಾರೆ.