ಅಫಜಲಪುರ: ಮಹಾರಾಷ್ಟ್ರ ಸರ್ಕಾರ ಅಲ್ಲಿನ ಬಸ್ ಸಿಬ್ಬಂದಿಗೆ ಸಮರ್ಪಕ ಸಂಬಳ ಕೊಡದಿದ್ದರೇ ಹೋರಾಟ ಉಗ್ರ ಸ್ವರೂಪ ಪಡೆಯುತ್ತದೆ ಎಂದು ಸಮಾಜ ಸೇವಕ ಜೆ.ಎಂ.ಕೊರಬು ಎಚ್ಚರಿಸಿದರು.
ಮಹಾರಾಷ್ಟ್ರ ರಾಜ್ಯದ ಅಕ್ಕಲಕೋಟ ಪಟ್ಟಣದಲ್ಲಿ ಸರ್ಕಾರಿ ಬಸ್ ಚಾಲಕರು ಹಾಗೂ ನಿರ್ವಾಹಕರು ನಡೆಸುತ್ತಿರುವ ಹೋರಾಟ ಸ್ಥಳಕ್ಕೆ ಭೇಟಿ ನೀಡಿ 300 ಆಹಾರ ಸಾಮಗ್ರಿ ಕಿಟ್ ವಿತರಿಸಿ ಅವರು ಮಾತನಾಡಿದರು.
ದೇಶಾದ್ಯಂತ ಸರ್ಕಾರಿ ಬಸ್ ಚಾಲಕರಿಗೆ ಹಾಗೂ ನಿರ್ವಾಹಕರಿಗೆ ನೀಡುತ್ತಿರುವ ಸಂಬಳದ ಅರ್ಧದಷ್ಟು ಮಾತ್ರ ಮಹಾರಾಷ್ಟ್ರದಲ್ಲಿ ನೀಡಲಾಗುತ್ತಿದೆ. ಇದರಿಂದಾಗಿ ಅವರ ಕುಟುಂಬ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಸಂಬಳ ಹೆಚ್ಚಿಸಲು ಸುಮಾರು ಮೂರು ತಿಂಗಳಿಂದ ಸತತ ಹೋರಾಟ ನಡೆಸಲಾಗುತ್ತಿದೆ. 82 ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಮಸ್ಯೆ ತೀವ್ರತೆ ಅರಿತು ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಹಿರಿಯ ಮುಖಂಡ ಮಕ್ಬೂಲ್ ಪಟೇಲ್ ಮಾತನಾಡಿ, ಮಹಾರಾಷ್ಟ್ರ ರಾಜ್ಯದಲ್ಲಿ ನಡೆಯುತ್ತಿರುವ ಹೋರಾಟದ ಸ್ಥಳಕ್ಕೆ ಆಗಮಿಸಿ ಕೊರಬು ಅವರು ಆಹಾರ ಧಾನ್ಯದ ಕಿಟ್ ವಿತರಿಸಿದ್ದು ಶ್ಲಾಘನೀಯವಾಗಿದೆ ಎಂದರು. ಕಾಂ
ಗ್ರೆಸ್ ಮುಖಂಡರಾದ ಮೆಹಬೂಬ್ ಮುಲ್ಲಾ, ಪ್ರಥಮೇಶ ಮೇತ್ರೆ, ಸಂತೋಷ ರಾಠೊಡ, ಲಾಲೂ ರಾಠೊಡ, ಸಂತೋಷ ಗಂಜಿ, ಸಂಜಯ ಹರಲಿ, ಇಮ್ರಾನ್ ಭಾಗವಾನ್, ಮಾಜೀದ್ ಗೌರ, ಇರ್ಫಾನ್, ರಾಜು ಪವಾರ, ರಿಜ್ವಾನ್ ಮುಜಾವರ ಮತ್ತಿತರರು ಈ ಸಂದರ್ಭದಲ್ಲಿದ್ದರು.