Advertisement
ಸದ್ಯ ಅಲ್ಪ ಪ್ರಮಾಣದಲ್ಲಿ ಕಲ್ಲಿದ್ದಲು ಲಭ್ಯವಿದ್ದು, ಸದ್ಯ 800 ಮೆಟ್ರಿಕ್ ಟನ್ ಕಲ್ಲಿದ್ದಲು ಉತ್ಪಾದನೆಯಾಗುತ್ತಿದೆ. ಅದು ದೇಶದ ಬೇಡಿಕೆಗೆ ಅನುಗುವಾಗಿಲ್ಲ. ದೇಶದಲ್ಲಿನ ಕಲ್ಲಿದ್ದಲು ಗುತ್ತಿಗೆದಾರರು ಹಾಗೂ ಮಾರಾಟಗಾರರು ಕಲ್ಲಿದ್ದಲು ಕೊರತೆಯನ್ನು ಸರಿದೂಗಿಸಲು ಕೈ ಜೋಡಿಸಬೇಕಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ. ಎಂದು ಕಲ್ಲಿದ್ದಲು ಸಚಿವಾಲಯದ ಹೆಚ್ಚುವ ಕಾರ್ಯದರ್ಶಿ ತಿಳಿಸಿದ್ದಾರೆ.
ನಾನಾ ರಾಜ್ಯಗಳಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಡೆತನದ ಕಲ್ಲಿದ್ದಲು ವಿದ್ಯುತ್ ತಯಾರಿಕಾ ಘಟಕಗಳಿಂದ ಕಲ್ಲಿದ್ದಲು ಬೇಡಿಕೆಗಳ ಪಟ್ಟಿ ಕೇಂದ್ರದ ಮುಂದಿದೆ. ಇತ್ತೀಚೆಗೆ, ಸಭೆ ಸೇರಿದ್ದ ಇಂಧನ ಸಚಿವಾಲಯ ಹಾಗೂ ಕಲ್ಲಿದ್ದಲು ಇಲಾಖೆಗಳ ಅಂತರ ಸಚಿವಾಲಯ ಸಮಿತಿಯು ಬೇಡಿಕೆಯನ್ನು ಪೂರೈಸುವ ಬಗ್ಗೆ ಚರ್ಚೆ ನಡೆಸಿದೆ. ಈ ಸಭೆ ನಂತರವೇ, ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿತ್ತು ಎಂದು ಸಚಿವಾಲಯ ತಿಳಿಸಿದೆ.
Related Articles
Advertisement