Advertisement

ವಿದೇಶಿ ಕಲ್ಲಿದ್ದಲು ಆಮದಿಗೆ ನಿರ್ಧಾರ; ಕೋಲ್‌ ಇಂಡಿಯಾ’ಸಂಸ್ಥೆ ಮೂಲಕ ಆಮದು

08:43 AM May 30, 2022 | Team Udayavani |

ನವದೆಹಲಿ: ವಿಶ್ವದ ಅತಿ ದೊಡ್ಡ ಕಲ್ಲಿದ್ದಲು ಗಣಿಗಾರಿಕೆ ನಡೆಸುವ ಹೆಗ್ಗಳಿಕೆಯುಳ್ಳ, ಕೇಂದ್ರ ಸರ್ಕಾರದ ಒಡೆತನದ “ಕೋಲ್‌ ಇಂಡಿಯಾ’, ಇದೇ ಮೊದಲ ಬಾರಿಗೆ ವಿದೇಶಗಳಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.

Advertisement

ಮೇ 28ರಂದು ಕೇಂದ್ರ ಇಂಧನ ಇಲಾಖೆ, ಅಣುಸ್ಥಾವರಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಈ ವಿಚಾರವನ್ನು ಉಲ್ಲೇಖೀಸಲಾಗಿದೆ. ಈ ಮೂಲಕ, ದೇಶದಲ್ಲಿ ಆವರಿಸಿರುವ ಕಲ್ಲಿದ್ದಲು ಅಭಾವವನ್ನು ನಿವಾರಿಸಲು ನಿರ್ಧರಿಸಲಾಗಿದೆ. ಇದೊಂದು ಸರ್ಕಾರ-ಸರ್ಕಾರ ನಡುವಿನ (ಸಿ2ಜಿ) ಒಪ್ಪಂದವಾಗಿದ್ದು ಅದರ ಆಧಾರದ ಮೇಲೆಯೇ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲಾಗುತ್ತದೆ.

ಮತ್ತೊಂದು ಕೊರತೆ?
ಜುಲೈ- ಆಗಸ್ಟ್‌ನಲ್ಲಿ ದೇಶದಲ್ಲಿ ವಿದ್ಯುತ್‌ ಕೊರತೆ ಉಂಟಾಗಲಿದೆ ಎಂದು ಸ್ವತಂತ್ರ ಸಂಶೋಧನಾ ಸಂಸ್ಥೆ, ಸೆಂಟರ್‌ ಫಾರ್‌ ರಿಸರ್ಚ್‌ ಆನ್‌ ಎನರ್ಜಿ ಆ್ಯಂಡ್‌ ಕ್ಲಿನ್‌ ಏರ್‌ (ಸಿಆರ್‌ಇಎ) ತಿಳಿಸಿದೆ.

ಆಗಸ್ಟ್‌ನಲ್ಲಿ ದೇಶದ ಒಟ್ಟಾರೆ ವಿದ್ಯುತ್‌ ಬೇಡಿಕೆ 214 ಗಿಗಾ ವ್ಯಾಟ್‌ಗಳಿಗೆ ಮುಟ್ಟಲಿದೆ. ಅದಕ್ಕೆ ಹೆಚ್ಚಿನ ಕಲ್ಲಿದ್ದಲು ದಾಸ್ತಾನನ್ನು ಮೊದಲೇ ಸಂಗ್ರಹಿಸಿಟ್ಟುಕೊಳ್ಳುವ ಅನಿವಾರ್ಯತೆಯಿದೆ. ಸದ್ಯಕ್ಕೆ 13.5 ಮಿಲಿಯನ್‌ ಟನ್‌ನಷ್ಟು ಕಲ್ಲಿದ್ದಲನ್ನು ವಿವಿಧ ವಿದ್ಯುತ್‌ ಸ್ಥಾವರಗಳಿಗೆ ರವಾನೆ ಮಾಡಲಾಗಿದೆ.

ಇದಲ್ಲದೆ, ಇನ್ನೂ 20.7 ಮೆ.ಟನ್‌ನಷ್ಟು ಕಲ್ಲಿದ್ದಲು ಎಲ್ಲಾ ಸ್ಥಾವರಗಳಲ್ಲಿ ಮೀಸಲಾಗಿ ಇದೆ ಎಂದು ಅದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next