Advertisement

ನಿಕ್ಷೇಪ ಹಂಚಿಕೆ: ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಸಹಿತ ಐವರು ದೋಷಿ

11:29 AM Nov 30, 2018 | udayavani editorial |

ಹೊಸದಿಲ್ಲಿ : ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ಕೇಸಿನಲ್ಲಿ ಇಲ್ಲಿನ ವಿಶೇಷ ನ್ಯಾಯಾಲಯವೊಂದು ಮಾಜಿ ಕೇಂದ್ರ ಕಲ್ಲಿದ್ದಲು ಕಾರ್ಯದರ್ಶಿ ಎಚ್‌ ಸಿ ಗುಪ್ತಾ ಸಹಿತ ಒಟ್ಟು ಐವರನ್ನು ಮತ್ತು  ವಿಕಾಸ್‌ ಮೆಟಲ್‌ ಪವರ್‌ ಲಿಮಿಟೆಡ್‌ ಕಂಪೆನಿಯನ್ನು ದೋಷಿ ಎಂಬುದಾಗಿ ಇಂದು ಶುಕ್ರವಾರ ತೀರ್ಪು ನೀಡಿದೆ. 

Advertisement

ಭ್ರಷ್ಟಾಚಾರ ನಿಗ್ರಹ ಕಾಯಿದೆಯ ವಿವಿಧ ಸೆಕ್ಷನ್‌ಗಳಡಿ ಈ ಎಲ್ಲ ಐವರು ಆರೋಪಿಗಳು ಕ್ರಿಮಿನಲ್‌ ಸಂಚು ಮತ್ತು ಭ್ರಷ್ಟಾಚಾರ ನಡೆಸಿರುವುದು ಸಾಬೀತಾಗಿದ್ದು ಇವರೆಲ್ಲರನ್ನು ತತ್‌ಕ್ಷಣವೇ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಡಿಸೆಂಬರ್‌ 3ರಂದು ನ್ಯಾಯಾಲಯವು ಈ ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ. 

ಪಶ್ಚಿಮ ಬಂಗಾಲದ ಉತ್ತರ ಮತ್ತು ದಕ್ಷಿಣದ ಮೊಯಿರಾ ಮತ್ತು ಮಧುಜೋರ್‌ ಎಂಬಲ್ಲಿನ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿನ ಅಕ್ರಮ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕೇಸು ಇದಾಗಿದೆ.

ಕೋಲ್ಕತ ಮೂಲದ ವಿಐಎಸ್‌ಯುಎಲ್‌ ಎಂಬ ಖಾಸಗಿ ಕಂಪೆನಿಗೆ ಈ ವರ್ಷ ಜನವರಿಯಲ್ಲಿ ಜಾರ್ಖಂಡ್‌ನ‌ ನಾರ್ತ್‌ ಕೋಲ್‌ ಬ್ಲಾಕ್‌ ಹಂಚಿಕೆ ವಿಷಯದಲ್ಲಿ ಜಾರ್ಖಂಡ್‌ನ‌ ಮಾಜಿ ಮುಖ್ಯಮಂತ್ರಿ ಮಧು ಕೋಡ ಅವರೊಂದಿಗೆ ಗುಪ್ತಾ ಅವರು ಅಪರಾಧಿಗಳೆಂದು ಕೋರ್ಟ್‌ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next