Advertisement
ಇದು ಸ್ಪರ್ಧಾತ್ಮಕವಾದ ಯುಗ. ಶೈಕ್ಷಣಿಕ ಔನ್ನತ್ಯದಿಂದಲೇ ಇಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಈಗ ಅತ್ಯಾಧುನಿಕವಾದ ಸೌಲಭ್ಯಗಳಿವೆ. ಮಾಹಿತಿ ತಂತ್ರಜ್ಞಾನದ ಎಲ್ಲಾ ಸವಲತ್ತುಗಳೂ ಶಿಕ್ಷಣಕ್ಕೆ ಅಂತರ್ಗತಗೊಂಡಿವೆ. ತರಗತಿಗಳಲ್ಲಿ ಪಡೆಯುವ ಶಿಕ್ಷಣದ ಜತೆಜತೆಗೆ ತರಬೇತಿ ತರಗತಿಗಳೆಂಬ (ಕೋಚಿಂಗ್ ಕ್ಲಾಸಸ್) ಪರಿಕಲ್ಡನೆ ಭಾರೀ ಯಶಸ್ಸು ಪಡೆಯುತ್ತಿದೆ. ಈ ಮೂಲಕ ವಿದ್ಯಾರ್ಥಿಗಳು ಶೈಕ್ಷಣಿಕ ಔನ್ನತ್ಯವನ್ನು ಪಡೆಯಲು ಪೂರಕವಾಗುತ್ತದೆ. ಈ ಕುರಿತಾಗಿ ಸಂಗ್ರಹಿತ ಮಾಹಿತಿಗಳು ಇಲ್ಲಿವೆ.
ಸ್ಪರ್ಧೆಯು ಒಂದೇ ಸವನೆ ಹೆಚ್ಚುತ್ತಿದೆ ಮತ್ತು ಜಗತ್ತು ಕೂಡಾ ಈಗ ಹೆಚ್ಚು ಹೆಚ್ಚು ನಿರೀಕ್ಷಿಸುತ್ತಿದೆ. ಅಕ್ಷರಗಳಲ್ಲಿ ಅಂದರೆ ಕೈಬರಹದ ಶೈಲಿಯ ಈಗ ಇ-ಮೈಲ್ ಅಥವಾ ಟೆಸ್ಟ್ ಮೆನೇಜ್‌ಗಳಿಗೆ ಬದಲಾವಣೆಗೊಂಡಿವೆ; ಸುದೀರ್ಘ ಪ್ರಯಾಣಗಳೆಲ್ಲ ಈಗ ವಿಮಾನ ಮೂಲಕ ಹೃಸ್ವಗೊಂಡಿರುವ ಹಾಗೆ! ಜಗತ್ತಿನ ಈ ವೇಗದ ಬದಲಾವಣೆ ಸಹಜವಾಗಿಯೇ ವಿದ್ಯಾರ್ಥಿಗಳಲ್ಲಿ ಒತ್ತಡವನ್ನು ಹೆಚ್ಚಿಸಿದೆ.
Related Articles
Advertisement
ಪ್ರಮುಖ ಪಾತ್ರಈಗ ಕೋಚಿಂಗ್ ಕ್ಲಾಸ್‌ಗಳು ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಶಾಲಾ- ಕಾಲೇಜುಗಳ ತರಗತಿಗಳು ಅತೀ ಮುಖ್ಯ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರ ಜತೆಜತೆಗೇ ಈ ಕೋಚಿಂಗ್ ಕ್ಲಾಸ್‌ಗಳು ಪ್ರಧಾನವಾಗಿರುತ್ತವೆ ಎಂಬುದು ಇಲ್ಲಿನ ಉಲ್ಲೇಖದ ಆಶಯ. ಸರಿಯಾದ ಮಾರ್ಗದರ್ಶನವು ವಿದ್ಯಾರ್ಥಿಗಳಿಗೆ ಮುಖ್ಯ. ಕೊಚಿಂಗ್ ಕೇಂದ್ರಗಳಲ್ಲಿರುವ ವಿಕ್ಷಕರು ದೀರ್ಘಕಾಲೀನ, ಉನ್ನತ ಸ್ತರದ ಶೈಕ್ಷಣಿಕ ಅನುಭವಿಗಳಾಗಿರುತ್ತಾರೆ. ಎಲ್ಲಾ ಹಂತದ ವಿದ್ಯಾರ್ಥಿಗಳ ಮನೋಭಾವವನ್ನು ಅರ್ಥವಿಸಿಕೊಳ್ಳುವವರಾಗಿರುತ್ತಾರೆ. ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ಬೋಧನೆ ಮಾಡಬೇಕು ಮತ್ತು ಅವರನ್ನು ಯಾವ ರೀತಿಯಲ್ಲಿ ಪರೀಕ್ಷೆಗಳಿಗೆ ಪರಿಪೂರ್ಣವಾಗಿ ಸಿದ್ಧ ಮಾಡಬೇಕು ಎಂಬುದನ್ನು ಅವರು ಯೋಜನೆ ಮಾಡಿರುತ್ತಾರೆ. ಅವರು ಕೇವಲ ಪಾಠಪಟ್ಟಿಯನ್ನು ಮಾತ್ರ ಬೋಧಿಸುವುದಿಲ್ಲ; ಅವರು ಸಮಗ್ರ ವಿಷಯಗಳ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ಮನ ಮಾಡಿಕೊಡುತ್ತಾರೆ. ಪರೀಕ್ಷೆಗಳಿಗೆ ಅನುಗುಣವಾದ ಸಲಹೆಗಳು, ಟಿಪ್ಪಣಿಗಳು, ಪೂರಕ ಸಂಗತಿಗಳನ್ನು ಅವರು ಮನನ ಮಾಡಿಕೊಡುತ್ತಾರೆ. ವಿದ್ಯಾರ್ಥಿಗಳು ತಮ್ಮ ಎಲ್ಲಾ ಸಂಶಯಗಳನ್ನು ಅವರ ಮೂಲಕ ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ಪರಿಪೂರ್ಣ ವ್ಯಕ್ತಿತ್ವ
ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಕೂಡಾ ಕೋಚಿಂಗ್ ಸೆಂಟರ್‌ಗಳು ವೇಗವರ್ಧಕದಂತೆ ಪ್ರಭಾವಿಸುತ್ತವೆ. ಅವರು ವಿದ್ಯಾರ್ಥಿಗಳಿಗೆ ನೈತಿಕ ಬೆಂಬಲ ನೀಡುತ್ತಾರೆ. ವಿದ್ಯಾರ್ಥಿಗಳಿಗೆ ಸರಿಯಾದ ದಿಕ್ಕಿನ ಮಾರ್ಗದರ್ಶನ ಒದಗಿಸುತ್ತಾರೆ. ಪರೀಕ್ಷೆಗೆ ಯಶಸ್ವಿಯಾಗಿ ಸಿದ್ಧಗೊಳಿಸುತ್ತಾರೆ. ವಿದ್ಯಾರ್ಥಿಗಳ ಕೌಶಲ್ಯಗಳನ್ನು ಗುರುತಿಸಿ ಪೋಷಿಸುತ್ತಾರೆ. ಆಪ್ತ ಸ್ವರೂಪದಲ್ಲಿ ಅವರ ವ್ಯಕ್ತಿತ್ವ ವಿಕಸನಗೊಳಿಸುತ್ತಾರೆ. ಮಾದರಿ ಪರೀಕ್ಷೆಗಳು, ಆತ್ಮವಿಶ್ವಾಸದ ವೃದ್ಧಿ, ಸಮೀಕ್ಷೆ ಇತ್ಯಾದಿಗಳ ಜತೆ ಮಾದರಿ ಪ್ರಶ್ನೆಪತ್ರಿಕೆಗಳು ಒದಗಣೆ..ಹೀಗೆ ಬಹುಬಗೆಗಳಿಂದ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುವಂತಾಗುತ್ತದೆ. ಇತ್ತೀಚೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವರೂಪ ವರ್ಷದಿಂದ ವರ್ಷಕ್ಕೆ ಬದಲಾಗುತ್ತದೇ ಇರುತ್ತದೆ. ಇಂತಹಾ ಸಂದರ್ಭಗಳಲ್ಲಿ ವಿದ್ಯಾರ್ಥಿಗಳನ್ನು ಈ ಬದಲಾವಣೆಗೆ ಹೊಂದಿಕೊಳ್ಳುವಂತೆ ರೂಪಿಸಬೇಕಾಗುತ್ತದೆ. ಇದು ಕ್ಷಿಪ್ರವಾಗಿ ನಡೆಯಬೇಕಾದ ಕಾರ್ಯ. ಅಂತೆಯೇ, ಅವರಿಗೆ ತುರ್ತಾಗಿ ತರಬೇತಿಯನ್ನೂ ಒದಗಿಸಬೇಕು. ಇದಕ್ಕಾಗಿ ಮಾದರಿ ಪರೀಕ್ಷೆಗಳನ್ನು (ಮಾಕ್‌ಟೆಸ್ಟ್) ತರಬೇತಿ ಕೇಂದ್ರಗಳನ್ನು ನಡೆಸುತ್ತಾರೆ. ಈ ಮಾದರಿ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತ. ಅವರು ಬಹುಬೇಗ, ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ಸಹಕಾರಿ ಕೂಡಾ. ಅವರಿಗೆ ಬಹುಬೇಗವಾಗಿ ಹೊಂದಿಕೊಳ್ಳಲು ತನ್ಮೂಲಕ ಸಾಧ್ಯ. ಈ ಮಾದರಿ ಪ್ರಶ್ನೆಪತ್ರಿಕೆಗಳಿಗೆ ವಿದ್ಯಾರ್ಥಿಗಳು ತಮ್ಮ ನಿವಾಸಗಳಲ್ಲೇ ಉತ್ತರಿಸಬಹುದು. ಕೋಚಿಂಗ್ ಕ್ಲಾಸ್‌ಗಳು ವಿದ್ಯಾರ್ಥಿಗಳಿಗೆ ಅಗತ್ಯವಾದ ಪರಿಸರವನ್ನು ಹೊಂದಿರುತ್ತವೆ. ಅಲ್ಲಿ ಸ್ನೇಹಮಯಿ ವಾತಾವರಣವಿರುತ್ತದೆ. ಆದ್ದರಿಂದಲೇ, ಇಲ್ಲಿ ಪೂರಕ ತರಬೇತಿ ಪಡೆದವರು ಅತ್ಯಂತ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ. – ಮನೋಹರ ಪ್ರಸಾದ್