Advertisement

ಕೊ-ವಿನ್‌’ನಿರ್ವಹಣೆ ಕುರಿತು ಕೇಂದ್ರದ ಪಾಠ

02:22 AM Jan 11, 2021 | Team Udayavani |

ಹೊಸದಿಲ್ಲಿ: ಲಸಿಕೆ ನೀಡುವಿಕೆಗೆ ಜ.16ರ ಮುಹೂರ್ತ ಫಿಕ್ಸ್‌ ಆದ ಬೆನ್ನಲ್ಲೇ ಕೇಂದ್ರ ಸರಕಾರ ರವಿವಾರ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶ ಗಳ ಉನ್ನತಾಧಿಕಾರಿಗಳೊಂದಿಗೆ “ಕೊ-ವಿನ್‌’ ಆ್ಯಪ್‌ ನಿರ್ವಹಣೆ ಸಂಬಂಧ ಸಭೆ ನಡೆಸಿದ್ದು, ಅಗತ್ಯ ಮಾರ್ಗಸೂಚಿ ಬಿಡುಗಡೆ ಮಾಡಿದೆ.

Advertisement

ಕೋವಿಡ್‌ ಲಸಿಕೆ ಕಾರ್ಯಕ್ರಮದ ರಾಷ್ಟ್ರೀಯ ತಜ್ಞರ ತಂಡದ ಸದಸ್ಯ ರಾಮ್‌ ಸೇವಕ್‌ ಶರ್ಮಾ ಸಭೆಯ ನೇತೃತ್ವ ವಹಿಸಿದ್ದರು.

ಸಭೆಯ ಮುಖ್ಯಾಂಶ: ಡ್ರೈ ರನ್‌ಗಳಲ್ಲಿ ಕೊ-ವಿನ್‌ ತಂತ್ರಾಂಶ ನಿರ್ವಹಣೆ ವೇಳೆ ಉದ್ಭವಿಸಿದ ಸಮಸ್ಯೆ, ಸಲಹೆಗಳ ಕುರಿತು ಚರ್ಚಿಸಲಾಯಿತು. ಫ‌ಲಾನುಭವಿಗಳ ದತ್ತಾಂಶ ಸೋರಿಕೆ ಆಗದಂತೆ ವಹಿಸಬೇಕಾದ ಕ್ರಮಗಳ ಬಗ್ಗೆ ಸೇವಕ್‌ ಪೂರಕ ಮಾಹಿತಿ ನೀಡಿದರು. ಯಾರು, ಯಾರಿಂದ, ಯಾವಾಗ ವ್ಯಾಕ್ಸಿನ್‌ ಪಡೆದರು ಎಂಬುದರ ಬಗೆಗಿನ ಡಿಜಿಟಲ್‌ ದಾಖಲೆಗಳನ್ನು ಆ ಕ್ಷಣವೇ ಆ್ಯಪ್‌ಗೆ ದಾಖಲಿಸುವುದು, ಅವುಗಳ ದತ್ತಾಂಶ ಸಂರಕ್ಷಣೆಗೆ ಅನುಸರಿಬೇಕಾದ ವಿಧಾನಗಳನ್ನು ತಿಳಿಸಿದರು.

“ಆಧಾರ್‌ಗೆ ಲಿಂಕ್‌ ಆದ ಮೊಬೈಲ್‌ ಸಂಖ್ಯೆಗಳನ್ನು ನೀಡುವಂತೆ ಫ‌ಲಾನುಭವಿಗಳಿಗೆ ಸೂಚಿಸಿದರೆ, ನಕಲಿ ಪ್ರಜೆಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು’ ಎಂದೂ ತಿಳಿಸಿದರು.

ಈ ನಡುವೆ ದೇಶಾದ್ಯಂತ 24 ಗಂಟೆಗಳಲ್ಲಿ 18,645 ಮಂದಿಗೆ ಸೋಂಕು ದೃಢಪಟಿcದೆ. ದೇಶದಲ್ಲಿ ಮರಣ ಪ್ರಮಾಣ ಶೇ.1.44ಕ್ಕೆ ಇಳಿಕೆಯಾಗಿದೆ. ಕಳೆದ 16 ದಿನಗಳಲ್ಲಿ ದೈನಂದಿನ ಸಾವಿನ ಪ್ರಕರಣ 300ಕ್ಕಿಂತಲೂ ಕಡಿಮೆ ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Advertisement

ಬಂಗಾಲದಲ್ಲಿ ಉಚಿತ ಲಸಿಕೆ: ಈ ನಡುವೆ ಪಶ್ಚಿಮ ಬಂಗಾಲದಲ್ಲಿ ಎಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ವಿತರಿಸಲಾಗುವುದು ಎಂದು ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಈ ಘೋಷಣೆ ಮಹತ್ವ ಪಡೆದಿದೆ.

ಡಬ್ಲ್ಯುಎಚ್‌ಎಡವಟ್ಟು  :

ಕೋವಿಡ್ ಸೋಂಕಿತರ ಸಂಖ್ಯೆಯನ್ನು ಸೂಚಿಸಿ ವಿಶ್ವ ಆರೋಗ್ಯ ಸಂಸ್ಥೆ ರವಿವಾರ ಬಿಡುಗಡೆ ಮಾಡಿರುವ ಭೂಪಟದಲ್ಲಿ ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ ಅನ್ನು ಭಾರತದ ಭೂಭಾಗದಿಂದ ಪ್ರತ್ಯೇಕಿಸಿರು ವುದು ವಿವಾದಕ್ಕೆ ಕಾರಣವಾಗಿದೆ. ಸಂಸ್ಥೆಯ ಈ ನಡೆಗೆ ಅನೇಕ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭೂಪಟದಲ್ಲಿ ಭಾರತವನ್ನು ನೀಲಿ ಬಣ್ಣದಲ್ಲಿ ತೋರಿಸಲಾಗಿದ್ದು, ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ ಅನ್ನು ಬೂದು ಬಣ್ಣದಲ್ಲಿ ಪ್ರತ್ಯೇಕಿಸಿ ಚಿತ್ರಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಚೀನ ಪರ ಮೃದು ಧೋರಣೆ ಹೊಂದಿದೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ವಿವಾದ ಮಹತ್ವ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next