ಜಕಾರ್ತ: ಇಂಡೋನೇಷ್ಯಾದಲ್ಲಿ ಬಾಟಿಕ್ ವಿಮಾನವೊಂದರ ಇಬ್ಬರು ಪೈಲಟ್ ಗಳು ನಿದ್ದೆಗೆ ಜಾರಿದ ಪರಿಣಾಮ ವಿಮಾನ ದಿಕ್ಕು ತಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ಈ ವರ್ಷದ ಜನವರಿ ತಿಂಗಳಿನಲ್ಲಿ ನಡೆದಿದ್ದು ಎನ್ನಲಾಗಿದ್ದು. ಆದರೆ ಅರ್ಧ ಗಂಟೆಯ ನಂತರ ನಿದ್ರೆಗೆ ಜಾರಿದ ಪೈಲಟ್ ಎಚ್ಚರಗೊಂಡಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಈ ಬಗ್ಗೆ ತನಿಖೆ ನಡೆಸಲಾಗಿದ್ದು, ಜವಾಬ್ದಾರಿಯುತ ಪೈಲಟ್ ಮತ್ತು ಸಹ ಪೈಲಟ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಪೈಲಟ್‌ಗಳು ನಿದ್ರೆಗೆ ಜಾರಿದಾಗ ಈ ವಿಮಾನದಲ್ಲಿ ಸುಮಾರು 153 ಪ್ರಯಾಣಿಕರಿದ್ದರು. ಸುಲವೇಸಿಯಿಂದ ಜಕಾರ್ತಕ್ಕೆ ಈ ವಿಮಾನ ಹೊರಡುವ ವೇಳೆ ಈ ಘಟನೆ ನಡೆದಿದೆ. ಆದರೆ, ಈ ಘಟನೆಯ ಹಿಂದಿನ ರಾತ್ರಿ ಕರ್ತವ್ಯದಲ್ಲಿದ್ದ ಸಹ ಪೈಲಟ್ ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಲಿಲ್ಲ ಎಂದು ಹೇಳಲಾಗಿದೆ.
ಮರುದಿನ ಸುಲವೇಸಿ ಏರ್ಪೋರ್ಟ್ ನಿಂದ ವಿಮಾನ ಟೇಕ್ ಆಫ್ ಆದ ಅರ್ಧ ಗಂಟೆಯ ನಂತರ ಫ್ಲೈಟ್ ಕ್ಯಾಪ್ಟನ್ ಸಹ ಪೈಲಟ್ ಬಳಿ ವಿಶ್ರಾಂತಿ ಪಡೆಯಲು ಅನುಮತಿ ಕೇಳಿದ್ದಾರೆ ಅದಕ್ಕೆ ಸಹ ಪೈಲೆಟ್ ಅನುಮತಿ ನೀಡಿದ್ದಾರೆ. ಅದರಂತೆ ವಿಮಾನ ಪೈಲೆಟ್ ವಿಶ್ರಾಂತಿಗೆ ತೆರಳಿದ್ದಾರೆ ಇದಾದ ಬಳಿಕ ಸಹ ಪೈಲಟ್ ಕರ್ತವ್ಯದಲ್ಲಿದ್ದ ವೇಳೆ ಅವರೂ ನಿದ್ರೆಗೆ ಜಾರಿದ್ದಾರೆ, ಈ ವೇಳೆ ಜಕಾರ್ತದಲ್ಲಿರುವ ಏರಿಯಾ ಕಂಟ್ರೋಲ್ ಸೆಂಟರ್ ವಿಮಾನವನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಏರ್ ಕಂಟ್ರೋಲ್ ಸೆಂಟರ್ ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಾರಣ ಇಬ್ಬರೂ ಪೈಲೆಟ್ ಗಳು ನಿದ್ರೆಗೆ ಜಾರಿದ್ದಾರೆ, ಇದಾದ ಬಳಿಕ ಸುಮಾರು ಅರ್ಧ ಗಂಟೆ ಕಳೆದ ಬಳಿಕ ವಿಶ್ರಾಂತಿಯಲ್ಲಿದ್ದ ಪೈಲೆಟ್ ಎಚ್ಚರಗೊಂಡು ನೋಡಿದಾಗ ಸಹ ಪೈಲೆಟ್ ನಿದ್ರೆಗೆ ಜಾರಿದ್ದು ಗಮನಕ್ಕೆ ಬಂದಿದೆ ಕೂಡಲೇ ಪೈಲೆಟ್ ಸಹ ಪೈಲೆಟ್ ನನ್ನ ಎಬ್ಬಿಸಿದ್ದಾರೆ, ಈ ವೇಳೆ ವಿಮಾನ ಸರಿಯಾದ ದಾರಿಯಲ್ಲಿ ಸಂಚರಿಸುತ್ತಿಲ್ಲ ಎಂಬುದು ಗೊತ್ತಾಗಿದೆ.
ಕೂಡಲೇ ಪೈಲೆಟ್ ಗಳು ಎಟಿಸಿಯಿಂದ ಬಂದ ಕರೆಗಳಿಗೆ ಪ್ರತಿಕ್ರಿಯಿಸಿ ಕೂಡಲೇ ವಿಮಾನವನ್ನು ಸರಿಯಾದ ಮಾರ್ಗಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಸುರಕ್ಸಿತವಾಗಿ ಜಾಕರ್ತ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಇಳಿಸಿದ್ದಾರೆ.
ಇಂಡೋನೇಷ್ಯಾದ A320 ಏರ್‌ಬಸ್‌ನಲ್ಲಿ ಈ ಘಟನೆ ನಡೆದಿದ್ದು ಈ ವಿಮಾನದಲ್ಲಿ ನಾಲ್ವರು ಸಿಬ್ಬಂದಿ ಸೇರಿದಂತೆ 153 ಪ್ರಯಾಣಿಕರಿದ್ದು ಯಾರಿಗೂ ಯಾವುದೇ ಸಮಸ್ಯೆ ತಲೆದೂರಲಿಲ್ಲ ಎನ್ನಲಾಗಿದ್ದು ಆದರೆ ಪೈಲೆಟ್ ಗಳು ನಿದ್ರೆಗೆ ಜಾರಿದ ವಿಚಾರ ಗಂಭೀರವಾಗಿ ಪರಿಗಣಿಸಿದ ಸಂಸ್ಥೆ ತನಿಖೆಗೆ ಮುಂದಾಗಿದೆ.
ಇದನ್ನೂ ಓದಿ: Tiger: ಮೇಲಿನ ಕುರುವಳ್ಳಿ ವ್ಯಾಪ್ತಿಯ ವಿಠಲನಗರ ಸಮೀಪ ಹುಲಿ ಪತ್ತೆ! ಬೆಚ್ಚಿ ಬಿದ್ದ ಸ್ಥಳೀಯರು