Advertisement
ಸಮಾಜ ವ್ಯವಸ್ಥೆಯ ಬಹುಮುಖ್ಯ ಅಂಗ ಕುಟುಂಬ. ಉತ್ತಮ ಕುಟುಂಬದಿಂದಲೇ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ. ಭಾರತೀಯ ಪರಂಪರೆಯಲ್ಲಿ ಕುಟುಂಬಕ್ಕೆ ಅದರದ್ದೇ ಆದ ಪ್ರಾಮುಖ್ಯವಿದೆ. ಅವಿಭಕ್ತ ಕುಟುಂಬಗಳನ್ನು ಹೊಂದಿದ್ದ ಭಾರತೀಯ ಸಂಸ್ಕೃತಿಯೂ ಕೂಡಿ ಬಾಳುವುದನ್ನು ಕಲಿಸಿಕೊಡುತ್ತದೆ. ಇಲ್ಲಿ ಪ್ರೀತಿ, ಒಗ್ಗಟ್ಟುಗಳೇ ಮೂಲಮಂತ್ರ.ಒಂದು ಮಗು ಸಮಾಜದ ಉತ್ತಮ ಪ್ರಜೆಯಾಗಿ ರೂಪುಗೊಂಡರೆ ಅದರಲ್ಲಿ ಆ ಮಗುವಿನ ಶಕ್ತಿಗಿಂತ ಆತನನ್ನು ಆ ರೀತಿ ರೂಪಿಸಿದ ಕುಟುಂಬದ ಸಂಸ್ಕೃತಿಯನ್ನು ಹೊಗಳುವ ಒಂದು ಕಾಲಘಟ್ಟವಿತ್ತು.
1993-94ರಲ್ಲಿ ನಡೆದ ಯುನೈಟೆಡ್ ನೇಶನ್ ಅಸೆಂಬ್ಲಿಯಲ್ಲಿ ಪ್ರತಿ ವರ್ಷ ಮೇ 15ರಂದು ಕುಟುಂಬ ದಿನವನ್ನಾಗಿ ಆಚರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಅಂತಾರಾಷ್ಟ್ರೀಯ ಸಮುದಾಯಗಳನ್ನು ಕುಟುಂಬದೊಂದಿಗೆ ಜೋಡಿಸುವ ಮತ್ತು ಕುಟುಂಬ ವ್ಯವಸ್ಥೆಯ ಉದ್ದೇಶ ಹಾಗೂ ಮಹತ್ವವನ್ನು ಜಗತ್ತಿನೆಲ್ಲೆಡೆ ಆಚರಿಸುವ ಸಲುವಾಗಿ ಈ ದಿನದ ಆಚರಣೆಗೆ ಮಹತ್ವ ನೀಡಲು ನಿರ್ಧರಿಸಲಾಯಿತು.
Related Articles
ಕುಟುಂಬಗಳು ಮತ್ತು ಹವಾಮಾನ ಬದಲಾವಣೆಯ ನಿಯಂತ್ರಣ ಎಂಬ ಮಹತ್ವದ ಉದ್ದೇಶವನ್ನಿರಿಸಿಕೊಂಡು ಯು.ಎನ್. ಈ ವರ್ಷ ಕುಟುಂಬ ದಿನವನ್ನು ಆಚರಿಸುತ್ತಿದೆ.
Advertisement
ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿಯೂ ಕುಟುಂಬ ತುಂಬಾ ಪ್ರಧಾನವಾದ ಭಾಗ. ನೋವು ನಲಿವುಗಳೆರಡನ್ನೂ ಹಂಚಿಕೊಂಡು ಸೋಲು ಗೆಲುವುಗಳಿಗೆ ಜತೆಯಾಗುವ ಕುಟುಂಬ ಇದ್ದಾಗ ಮಾತ್ರ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ಇದ್ದ ಕುಟುಂಬವನ್ನು ದೂರ ಮಾಡಿಕೊಳ್ಳದೆ ದೂರ ಇರುವ ಕುಟುಂಬವನ್ನು ಮತ್ತೆ ಜೋಡಿಸಿಕೊಂಡು ಈ ಸಲದ ಕುಟುಂಬ ದಿನವನ್ನು ಸಂಭ್ರಮದಿಂದ ಆಚರಿಸಬೇಕಿದೆ.
ಕುಟುಂಬ ದಿನದ ಚಿಹ್ನೆಯ ವೈಶಿಷ್ಟಅಂತಾರಾಷ್ಟ್ರೀಯ ಕುಟುಂಬ ದಿನದ ಚಿಹ್ನೆ ಬಹಳ ವೈಶಿಷ್ಟéವನ್ನು ಒಳಗೊಂಡಿದೆ. ಚಿಹ್ನೆಯು ಹಸುರು ಬಣ್ಣದ ವೃತ್ತ ಹಾಗೂ ಅದರಲ್ಲಿ ಕೆಂಪು ಬಣ್ಣದಲ್ಲಿ ಚಿತ್ರಗಳನ್ನು ಒಳಗೊಂಡಿದೆ. ಒಂದು ಮನೆ ಹಾಗೂ ಹೃದಯದ ಸರಳವಾದ ಚಿತ್ರವನ್ನೊಳಗೊಂಡ ಈ ಚಿಹ್ನೆ ಕುಟುಂಬ ಸಮಾಜದ ಮೂಲ ಕೇಂದ್ರ ಹಾಗೂ ಕುಟುಂಬದಲ್ಲಿ ಎಲ್ಲ ವಯಸ್ಸಿನವರಿಗೂ ರಕ್ಷಣೆ ದೊರೆಯುತ್ತದೆ ಎಂಬ ಸಂದೇಶವನ್ನು ನೀಡುತ್ತದೆ.